ಗದಗ

ಇಂದು ಕೃಷಿ ಗೋಷ್ಠಿ

Published On :

ರೋಣ: ಬಸಮ್ಮ ಸಂಗನಗೌಡ ಪಾಟೀಲರ 9ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಮಿತಿ ವತಿಯಿಂದ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಜು. 29ರ ಸಂಜೆ 7ಕ್ಕೆ ಕೃಷಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಗುಲಗಂಜಿ ಮಠದ ಗುರಪಾದ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬೇವಿನಮರದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಾವಯವ ಕೃಷಿ ತಜ್ಞ ಡಿ.ಡಿ. ಭರಮಗೌಡರ, ಕೃಷಿ ಚಿಂತಕ ಎಸ್.ಎ. ಕೋರಿ, ಶಿವನಗೌಡ ಪಾಟೀಲ, ಮಲ್ಲಣ್ಣ ಮೇಟಿ, ಧರ್ಮಣ್ಣ ಭೂಸಗೌಡ್ರ, ಸುರೇಶಬಾಬು ಅರಹುಣಸಿ, ಚನ್ನಯ್ಯ ಸೋಮನಕಟ್ಟಿಮಠ, ಸುಭಾಸ ನೀಲಗಾರ, ಬಿ.ಎಸ್. ರಡ್ಡೇರ ಮುಂತಾದವರು ಉಪಸ್ಥಿತರಿರುವರು.  ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ನೂತನ ಅವಿಷ್ಕಾರಗಳು ಎಂಬ ವಿಷಯ ಕುರಿತು ಕೃಷಿ ಚಿಂತಕ ಎಸ್.ಎ. ಕೋರಿ ಮತ್ತು ಕೃಷಿಯಲ್ಲಿ ಮಹಿಳೆಯ ಪಾತ್ರ ಕುರಿತು ರೋಣ ತಾಲೂಕು ಸಹಾಯಕ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ ಅವರಿಂದ ಉಪನ್ಯಾಸ ಜರುಗಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಇಂದು ವಾರ್ಷಿಕೋತ್ಸವ
ಹೊಳೆಆಲೂರು: ಸ್ಥಳೀಯ ಗಂಗೋಜಿಯವರ ಓಣಿಯಲ್ಲಿ ನಿರ್ಮಿಸಿರುವ ಅಂಬಾಭವಾನಿ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಜು. 29ರಂದು ವಿವಿಧ ಕಾರ್ಯಕ್ರಮ ನೆರವೇರಲಿವೆ. ಅಂದು ಬೆಳಗ್ಗೆ 5.30ಕ್ಕೆ ಶ್ರೀದೇವಿ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಆರತಿ ನೈವೇದ್ಯ ಮತ್ತು ಮಹಾಮಂಗಳಾರತಿ ನಂತರದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ 2ಕ್ಕೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಅಂಬಾಭವಾನಿ ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.
31ರೊಳಗೆ ಬೆಳೆವಿಮೆ ಪಾವತಿಸಲು ಸೂಚನೆ
ರೋಣ: 2013-14ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ತಾಲೂಕಿನ ಎಲ್ಲ ಮೂರು ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.  ಅರ್ಹ ರೈತರು ಬೆಳೆವಿಮೆಯಲ್ಲಿ ಭಾಗವಹಿಸಲು ಬೆಳೆಸಾಲ ಪಡೆದ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಜು. 31ರ ವರೆಗೆ ಇದ್ದು, ಬೆಳೆಸಾಲ ಪಡೆಯದ ರೈತರು ವಿಮಾ ಹಣವನ್ನು ತಮಗೆ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಪಾವತಿ ಮಾಡಬಹುದು. ರೈತರಿಗೆ ಅನೂಕೂಲತೆ ಕಲ್ಪಿಸುವ ಸಲುವಾಗಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಗದಗ ಇವರ ಮುಖಾಂತರವು ಪಾವತಿ ಮಾಡಬಹುದಾಗಿದೆ. ತಾಲೂಕಿನ ರೈತರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಯುನೈಟೆಡ್ ಇಂಡಿಯಾ ಅನ್ಸೂರೆನ್ಸ್ ಕಂಪನಿಯ ಅಧಿಕಾರಿಗಳು ಜು. 30 ಮತ್ತು 31 ರಂದು 2 ದಿನಗಳ ಮಾತ್ರ ಪಟ್ಟಣದಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಿಮಾ ಹಣವನ್ನು ಭರ್ತಿ ಮಾಡಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ರೈತರು ವಿಮಾ ಹಣವನ್ನು ಪಾವತಿಸಲು ಈ ಅವಕಾಶ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೌಕರರ ಸೇವೆ ಕಾಯಂಗೊಳಿಸುವಂತೆ ಶಾಸಕ ಪಾಟೀಲ್‌ಗೆ ಮನವಿ
ಗಜೇಂದ್ರಗಡ: ದಿನಗೂಲಿ ಪೌರಸೇವಾ ನೌಕರರ ಸೇವೆ ಕಾಯಂಗೊಳಿಸಲು ಒತ್ತಾಯಿಸಿ ಶಾಸಕ ಜಿ.ಎಸ್. ಪಾಟೀಲರಿಗೆ ಸ್ಥಳೀಯ ಪುರಸಭೆ ದಿನಗೂಲಿ ನೌಕರರ ಸಂಘ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.
ಗಜೇಂದ್ರಗಡ ಪುರಸಭೆಯಲ್ಲಿ ಕೆಲವರು 10-15 ವರ್ಷಗಳಿಂದ ನೈರ್ಮಲ್ಯ, ನೀರು ಸರಬರಾಜು, ಆಡಳಿತ, ಕಾಮಗಾರಿ ವಿಭಾಗದಲ್ಲಿ ದಿನಗೂಲಿ ಆಧಾರ ಮೇಲೆ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದೇವೆ. ನಮಗೆ ಸೂಕ್ತ ಸೇವಾ ಭದ್ರತೆ ಇಲ್ಲದೆ ತೊಂದರೆಯಾಗಿದೆ. ಎಲ್ಲವನ್ನು ಗಮನಿಸಿ ಸರ್ಕಾರ ಮೇಲೆ ಒತ್ತಡ ಹಾಕಿ ನಮ್ಮ ಸೇವೆಯನ್ನು ಕಾಯಂಗೊಳಿಸಲು ಮುಂದಾಗಬೇಕು ಎಂದು ಸಂಘದ ಅಧ್ಯಕ್ಷ ಎಂ.ಬಿ. ಒಂಟಿ, ಉಪಾಧ್ಯಕ್ಷ ಹನುಮಂತ ಚಲವಾದಿ, ಪಿ.ಎನ್. ದೊಡ್ಡಮನಿ, ಆರ್.ಜಿ. ನಿಶಾನದಾರ್, ಜಿ.ಎನ್. ಕಾಳೆ, ಎನ್.ಎಂ.ದೊಡ್ಡಮನಿ, ಬಸವರಾಜ ಬಳಗಾನೂರ, ಕೆ.ಎಚ್. ಬಾಕಳೆ, ಎನ್.ಎಂ. ತೋಟದ, ಎಚ್.ಎನ್. ನಿಶಾನದಾರ, ಎ.ಎಸ್. ನಾವಳ್ಳಿ, ಎ.ಎಸ್. ಗದಗಿನ, ಎಚ್.ಟಿ. ಮಗದುಂಡಿ, ಸಿ.ವಿ. ಕುಲಕರ್ಣಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.