ಭಕ್ತಿ ಪಥ ತೋರುವನೆ ಶರಣ
ಗದಗ: ಭಕ್ತರಲ್ಲಿ ಭಕ್ತಿಯ ಪಥವನ್ನು ತೋರಲು ಬಂದವರೇ ನಿಜವಾದ ಶರಣರು ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಶ್ರೀಗಳು ಹೇಳಿದರು. ಈಚೆಗೆ ಅವರು ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ 394ನೇ ಶಿವಾನುಭವಗೋಷ್ಠಿ ಹಾಗೂ ಕೆ.ಬಿ. ಕಂಬಳಿ ನಿವೃತ್ತ ಗುರುಗಳ ಅಮೃತ ಮಹೋತ್ಸವ ಮತ್ತು ಶಿಕ್ಷಕ ಸಮಾಧಾನಿ ಕೆ.ಬಿ. ಕಂಬಳಿಯವರ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂತ-ಶಾಸಕ, ಶಿಕ್ಷಕ-ಚಿಕಿತ್ಸಕ ಸಮಾಜದ ಕೇಂದ್ರ ಬಿಂದುಗಳಾಗಿದ್ದು, ಕರ್ತವ್ಯ ಪ್ರಜ್ಞೆ, ನಿಷ್ಠೆ ಹೊಂದಿ ಕಾರ್ಯಮಾಡುವ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸಬೇಕು. ಮನುಷ್ಯ ಉತ್ತಮ ಗ್ರಂಥಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನೆ-ಮನ ಬೆಳಗಿಸಲು ಶಾಂತಿ-ನೆಮ್ಮದಿ, ಸಮಾಧಾನ ಜತೆಗೆ ಬೌದ್ಧಿಕ ವಿಕಸನಕ್ಕೆ ಸಾಹಿತ್ಯ ಅವಶ್ಯ. ಶಿಸ್ತು, ಸ್ವಚ್ಛತೆ, ಸಮಯ ಪ್ರಜ್ಞೆ ಮನುಷ್ಯನನ್ನು ಎತ್ತರಕ್ಕೆ ಒಯ್ಯಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಶಾಂತವೀರ ಶ್ರೀಗಳು ಮಾತನಾಡಿ ಆಶೀರ್ವಚನ ನೀಡಿದರು. ಡಾ. ಸಂಗಮೇಶ ಹಂಡಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಕೆ.ಬಿ. ಕಂಬಳಿ ಮಾತನಾಡಿ, ಇಂದಿನ ಅಭೂತಪೂರ್ವ ಗೌರವ ಹೃದಯಸ್ಪರ್ಶಿ ಘಟನೆ ನನ್ನ ಜೀವಮಾನದಲ್ಲಿ ಹಿಂದೆಂದೂ ಕಂಡರಿಯದ ಸನ್ನಿವೇಶವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಹೊಸಪೇಟೆ, ಹೊಂಬಳ ಶರಣ ಬಳಗದ ಪರವಾಗಿ ಕಂಬಳಿಯವರನ್ನು ಸನ್ಮಾನಿಸಲಾಯಿತು. ಡಾ. ಬಿ.ಎಲ್. ಪಾಟೀಲ, ಪಂಡಿತ ಬಾಲಚಂದ್ರಶಾಸ್ತ್ರಿಗಳು, ಅಂದಾನಪ್ಪ ವಿಭೂತಿ, ಎ.ಎನ್. ನಾಗರಳ್ಳಿ, ಕಾರ್ಯಧ್ಯಕ್ಷ ಎಂ.ಬಿ. ಸಿಕ್ಕೇದೇಸಾಯಿ, ಫಕ್ಕೀರಪ್ಪ ಗಡ್ಡಿ, ಅಲ್ಲಾವುದ್ದೀನ ಎಮ್ಮಿ ಇದ್ದರು. ಶಂಕ್ರಯ್ಯ ಗುರುಮಠ ಪ್ರಾರ್ಥಿಸಿದರು. ಅಭಿನಂದನ ಗ್ರಂಥದ ಪ್ರಧಾನ ಸಂಪಾದಕ ಡಾ. ಶರಣಬಸವ ವೆಂಕಟಾಪುರ ಸ್ವಾಗತಿಸಿದರು. ಬಿ.ವೈ. ಡೊಳ್ಳಿನ ನಿರೂಪಿಸಿದರು. ಆಡಳಿತಾಧಿಕಾರಿ ಎಸ್.ಆರ್. ಹಳ್ಳೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

