5ಕ್ಕೆ ಭವನಕ್ಕೆ ಭೂಮಿಪೂಜೆ
ಗದಗ: ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನದ ಭೂಮಿಪೂಜಾ ಕಾರ್ಯಕ್ರಮ ಆ.5ರ ಬೆಳಗ್ಗೆ 10.30ಕ್ಕೆ ಜರುಗಲಿದೆ. ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು, ಬಳಗಾನೂರಿನ ಚನ್ನವೀರ ಶರಣರ ಮಠದ ಶಿವಶಾಂತವೀರ ಶ್ರೀಗಳು, ಕಂಗಡಗಿಯ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಭೂಮಿಪೂಜೆ ನೆರವೇರಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ಜಿ.ಎಸ್.ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡಮನಿ, ಜಿಪಂ ಸದಸ್ಯ ಆರ್.ಡಿ. ಕೊಂಡಿಕೊಪ್ಪ, ತಾಪಂ ಸದಸ್ಯ ವಿಜಯಲಕ್ಷ್ಮೀ ತಮ್ಮನಗೌಡರ, ಹುಲಕೋಟಿ ಗ್ರಾಪಂ ಅಧ್ಯಕ್ಷ ಸಿ.ಬಿ. ಕರಿಕಟ್ಟಿ, ಮೋಹನ ಚಂದಪ್ಪನವರ, ಎನ್.ವಿ. ಹೊಸಮನಿ. ಕಲ್ಲಪ್ಪ ಹಡಪದ ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಶಾಸಕ ಪಾಟೀಲಗೆ ಸನ್ಮಾನ
ರೋಣ: ರೋಣ ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಭಾನುವಾರ ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಸಿ.ಎಸ್. ಗ್ರಾಮಪುರೋಹಿತ, ರೋಣ ತಾಲೂಕು ಗ್ರಾಮೀಣ ಪ್ರದೇಶದ ಅಂಗವಿಕಲರ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಣಗೌಡ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಪದಾಧಿಕಾರಿಗಳ ಆಯ್ಕೆ
ಗಜೇಂದ್ರಗಡ: ಸಮೀಪದ ಕಲ್ಲಿಗನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆಯು ಈಚೆಗೆ ನಡೆಯಿತು. ಅಧ್ಯಕ್ಷ ಯಲ್ಲಪ್ಪ ಮೇಟಿ, ಉಪಾಧ್ಯಕ್ಷ ದ್ಯಾಮವ್ವ ಬೂದಿಹಾಳ, ಸದಸ್ಯರಾಗಿ ವೀರಯ್ಯ ಹಿರೇಮಠ, ಗಿರಿಯಪ್ಪ ಬೂದಿಹಾಳ, ಪರಮೇಶಪ್ಪ ಬೂದಿಹಾಳ, ಸುಜಾತಾ ಕಾಟಿ, ಸುವರ್ಣಾ ಹೊಸೂರ, ವಿಶಾಲಾಕ್ಷಿ ಪೂಜಾರ, ಶಿದ್ದನಗೌಡ ಪಾಟೀಲ, ವಿಜಯಾ ಪಾಟೀಲ, ಶಿವಪುತ್ರಪ್ಪ ದೊಡ್ಡಮನಿ, ಮರಿಯವ್ವ ಮಾದರ, ಸೈನಾಜಬಿ ಸಂಕನೂರ, ಪದನಿಮಿತ್ಯ ಸದಸ್ಯರಾಗಿ ಸಂಗಪ್ಪ ಬಾರಡ್ಡಿ, ಶಮಶಾದ ಶಿರಹಟ್ಟಿ, ಎ.ಎಂ. ಚಿಣಿ, ನಾಮನಿರ್ದೇಶಕ ಸದಸ್ಯರಾಗಿ ಎಸ್.ಬಿ. ಹರಿಜನ, ಶ್ರೀಶೈಲಪ್ಪ ಕಾಟಿ, ಕಾವೇರಿ ಮುಶಿಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಸ್.ಎಸ್. ಬಾರಡ್ಡಿ ತಿಳಿಸಿದ್ದಾರೆ.
ನವೋದಯ ಶಾಲೆಗೆ ಆಯ್ಕೆ
ಗದಗ: ತಾಲೂಕಿನ ಹೊಂಬಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ಹಸಬಿ ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಪ್ರಧಾನ ಶಿಕ್ಷಕಿ ಟಿ.ಟಿ. ಬಿಸನಳ್ಳಿ, ಶಿಕ್ಷಕ ಎ.ಎ. ನದಾಫ, ವೈ.ಎಂ. ಇನಾಮತಿ, ಇ.ಆರ್. ಆರಟ್ಟಿ, ಗದಗ ತಾಪಂ ಅಧ್ಯಕ್ಷ ಅಬ್ದುಲ್ಕರೀಂಸಾಬ ಕರೂರ, ಗ್ರಾಪಂ ಅಧ್ಯಕ್ಷರು, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

