ಗದಗ

ಅರ್ಹತಾ ಪರೀಕ್ಷೆ

Published On :

ಗದಗ:  ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ (1 ರಿಂದ 8ನೇ ವರ್ಗ) ಸಂಬಂಧಿಸಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಓಖಊಿಖಿ) ಯನ್ನು  ಜಾರಿಗೊಳಿಸಲಾಗುತ್ತಿದೆ. ಎನ್.ಸಿ.ಟಿ.ಇ. ಇಲಾಖೆಯ ವೆಬ್‌ಸೈಟ್ ಡಿಡಿಠಣಣಢಿಢಿಢಿ.ಟ್ಛಿಡಿಜ-್ಝಟಿಜ್ಝಛ.್ಟ್ಠ್ಜ ನೋಡಬಹುದು ಎಂದು (ಅಭಿವೃದ್ಧಿ) ಡಯಟ್‌ದ ಉಪನಿರ್ದೇಶಕ ಬಿ.ಎಸ್. ರಘುವೀರ ತಿಳಿಸಿದ್ದಾರೆ.
ನಿವೇಶನಕ್ಕಾಗಿ ಭೂಮಿ ಖರೀದಿ
ಗದಗ: 2013-14ನೇ ಸಾಲಿನ ಗ್ರಾಮೀಣ ನಿವೇಶನ ಯೋಜನೆಯಡಿ ಪ್ರತಿ ಗ್ರಾಪಂಗೆ ಕನಿಷ್ಠ 27 ನಿವೇಶನಗಳ ಹಂಚಿಕೆ ಗುರಿಯನ್ನು ನಿಗದಿಪಡಿಸಲಾಗಿದೆ. ಕಾರಣ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 2 ಎಕರೆ ವಿಸ್ತೀರ್ಣದ ಭೂಮಿಯ ಅವಶ್ಯಕತೆ ಇರುತ್ತದೆ. ಸರ್ಕಾರವು ನಿಗದಿಪಡಿಸುವ ದರಕ್ಕೆ ಒಪ್ಪಿ ಜಮೀನು ಕೊಡಲು ಇಚ್ಛಿಸುವ (ಗ್ರಾಮಕ್ಕೆ ಹತ್ತಿರ ಭೂಮಿ ಇರುವ) ರೈತ ಮಾಲೀಕರು ಸಂಬಂಧಪಟ್ಟ ಗ್ರಾಪಂ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಜಿಪಂ ಸಿಇಓಗೆ ಒಪ್ಪಿಗೆ ಪತ್ರ ನೀಡಬಹುದಾಗಿದೆ ಜಿಪಂ ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಗೆ ಆಹ್ವಾನ
ಮುಂಡರಗಿ:  ಮುಂಡರಗಿ ತಾಲೂಕು ನಿರುದ್ಯೋಗಿ ಯುವಕ, ಯುವತಿಯರಿಗೆ ಗವಿಸಿರಿ ಕೌಶಲ್ಯಾಭಿವೃದ್ಧಿ ಕೇಂದ್ರದಿಂದ ಸುವರ್ಣ ವಸ್ತ್ರ ನೀತಿ ಯೋಜನೆ ಅಡಿಯಲ್ಲಿ 1 ತಿಂಗಳು ಎಸ್.ಎಂ.ಓ. ತರಬೇತಿಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಗದಗ ಇವರಿಂದ ಆಯೋಜಿಸಲಾಗುತ್ತಿದೆ.  ಆಸಕ್ತರು 7,8,9 ಹಾಗೂ 10ನೇ ತರಗತಿಯ ಅಂಕಪಟ್ಟಿಯ 2 ನಕಲು ಪ್ರತಿ, ಎಲ್‌ಸಿ ಮತ್ತು ಜಾತಿ ಪ್ರಮಾಣ ಪತ್ರ, ಇತ್ತೀಚಿನ 4 ಭಾವಚಿತ್ರಗಳು, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಅಥವಾ ಆಧಾರ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದನ್ನು 2 ಪ್ರತಿ, ಯಾವುದಾದರೊಂದು ಬ್ಯಾಂಕ್ ಖಾತೆಯ ನಂಬರ್ ಈ ಎಲ್ಲ ದಾಖಲೆಗಳೊಂದಿಗೆ ಗವಿಸಿರಿ ಕೌಶಲ್ಯಾಭಿವೃದ್ಧಿ ಕೇಂದ್ರ, ಖಾದಿಗ್ರಾಮೋದ್ಯೋಗ ಕಟ್ಟಡ, ಪೊಲೀಸ್ ಠಾಣೆ ಹತ್ತಿರ ಮುಂಡರಗಿ. ಮೊ. 9945658676 ಗೆ ಸಂಪರ್ಕಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.