ಯೋಗ ವಿಜ್ಞಾನ ಶಿಬಿರ
ರೋಣ: ಪಟ್ಟಣದ ಬಸಮ್ಮ ಸಂಗನಗೌಡ ಪಾಟೀಲ್ ಅವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಸ್ಮರಣೋತ್ಸವ ಸಮಿತಿ ಆಶ್ರಯದಲ್ಲಿ ಆರ್ಜಿಇಎಸ್ ಕಾಲೇಜು ಆವರಣದಲ್ಲಿ ಭಾನುವಾರ ಬೆಳಗ್ಗೆ ಯೋಗಗುರು ವಚನಾನಂದ ಗುರೂಜಿ ಅವರ ಯೋಗ ವಿಜ್ಞಾನ ಶಿಬಿರ ನಡೆಯಿತು. ಶಾಸಕ ಜಿ.ಎಸ್. ಪಾಟೀಲ್, ರಾಜ್ಯ ಬೀಜ ನಿಗಮ ನಿರ್ದೇಶಕ ಐ.ಎಸ್. ಪಾಟೀಲ ಸೇರಿದಂತೆ ಅನೇಕ ಗಣ್ಯರು, ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಗೋಸಾವಿ ಮಠದ ಶ್ರೀ ನಿಧನ: ಸಂತಾಪ
ಗಜೇಂದ್ರಗಡ: ನಾಡಿನ ಅಸಂಖ್ಯಾತ ಭಕ್ತರ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಗೋಸಾವಿ ಮಠದ ಸುರೇಶ್ವರಾನಂದ ಶ್ರೀಗಳ ಅಗಲಿಕೆ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು. ಅವರು ಸೋಮವಾರ ಸ್ಥಳೀಯ ಜೋಡು ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಬಳಿ ಸಾಮೂಹಿಕವಾಗಿ ನಡೆದ ಸ್ಮರಣೆ ಸಭೆಯಲ್ಲಿ ಮಾತನಾಡಿದರು. ಮರಾಠಾ ಕ್ಷತ್ರಿಯ ಸಮಾಜ ಅಧ್ಯಕ್ಷ ರೇಣಪ್ಪ ಇಂಗಳೆ, ಬಾಳಪ್ಪ ಪವಾರ, ಜಗದೀಶ ಕಲ್ಗುಡಿ, ವಿಜಯ ಮೋಹಿತೆ, ಯಲ್ಲಪ್ಪ ಕಲ್ಗುಡಿ, ಡಾ. ಪಿ.ಬಿ. ರಾಮಜಿ, ಭೀಮಪ್ಪ ಹಾಳಕೇರಿ, ಹನುಮಂತಪ್ಪ ಬೋಯಿಟೆ, ಕಳಕಪ್ಪ ರಾಮಜಿ ಉಪಸ್ಥಿತರಿದ್ದರು.
ಧೀರನಗೌಡ ಪಾಟೀಲ ನಿಧನ
ಮುಂಡರಗಿ: ತಾಲೂಕಿನ ಹಾರೋಗೇರಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಮುಂಡರಗಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಧೀರನಗೌಡ ಪಾಟೀಲ (67) ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗ ಇದ್ದರು. ಮೃತರು ಜಿಪಂ ಸದಸ್ಯೆ ಕಸ್ತೂರೆವ್ವ ಪಾಟೀಲ ಅವರ ಪತಿಯಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದ ಮುಂಡರಗಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನ್ನದಾನೀಶ್ವರ ಶ್ರೀ, ತೋಂಟದ ಶ್ರೀ, ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಹೇಮಂತಗೌಡ ಪಾಟೀಲ, ವೈ.ಎನ್. ಗೌಡರ, ಕರಬಸಪ್ಪ ಹಂಚಿನಾಳ, ವಿ.ಎಲ್. ನಾಡಗೌಡ್ರ, ಎ.ಕೆ. ಬೆಲ್ಲದ, ಕೊಟ್ರೇಶ ಅಂಗಡಿ, ಆನಂದಗೌಡ ಪಾಟೀಲ, ಬಸವರಾಜ ಬಿಸನಳ್ಳಿ, ಬಸವರಾಜ ರಾಮೇನಹಳ್ಳಿ, ಟಿ.ಬಿ. ಮೇಟಿ, ಎಸ್.ಡಿ. ಮಕಾಂದಾರ, ರಾಮು ಕಲಾಲ, ಅಶೋಕ ಹುಬ್ಬಳ್ಳಿ, ರಾಮಣ್ಣ ಬಳ್ಳಾರಿ, ನಾರಾಯಣ್ಪಪ್ಪ ಇಲ್ಲೂರ, ಅಂದಾನಗೌಡ ಪಾಟೀಲ, ರಜನೀಕಾಂತ ದೇಸಾಯಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

