ಗಜೇಂದ್ರಗಡ: ಅಕ್ರಮ ಮದ್ಯ ವಶ
ಗಜೇಂದ್ರಗಡ: ಸ್ಥಳೀಯ ಜನತಾ ಪ್ಲಾಟ್ ಬಳಿಯ ದೀಪಾ ಹೋಟೆಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ರು. 25 ಸಾವಿರ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದು. ಆರೋಪಿ ಪರಾರಿಯಾಗಿದ್ದಾನೆ. ಮಾ. 7ರಂದು ಪುರಸಭೆ ಚುನಾವಣೆ ಇದ್ದು, ಮತದಾರರಿಗೆ ವಿತರಿಸಲು ಇದನ್ನು ತರಿಸಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೋಹನಸಾ ಶಿಂಗ್ರಿ ಅವರಿಗೆ ಸೇರಿದ ಈ ಹೋಟೆಲ್‌ನಲ್ಲಿ ನಾಲ್ಕು ಬಾಕ್ಸ್ ಬ್ರ್ಯಾಂಡಿ, ಎರಡು ಬಾಕ್ಸ್ ಬಿಯರ್ ವಶವಾಗಿದೆ. ಎಂದು ದಾಳಿ ನೇತೃತ್ವ ವಹಿಸಿದ್ದ ಅಬಕಾರಿ ಇಲಾಖೆ ಅಧಿಕಾರಿ ಎಲ್.ಎ. ಅದ್ವಾನಿ ತಿಳಿಸಿದರು. ಚುನಾವಣಾ ಅಧಿಕಾರಿ ವಿ.ಕೆ. ಕಾಳಪ್ಪನವರರ, ಆರ್.ಎನ್. ಚಿಕ್ಕಣ್ಣವರ, ರೋಣ ಅಬಕಾರಿ ಇಲಾಖೆ ಅಧಿಕಾರಿ ಎ.ಬಿ. ಮಠಪತಿ ಮತ್ತು ಸಿಬ್ಬಂದಿ ಹಾಜರಿದ್ದರು.
ಅಕ್ಕಿ, ಮಟನ್ ಹಂಚಲು ಯತ್ನ
ನರಗುಂದ: ಪಟ್ಟಣದ 2ನೇ ವಾರ್ಡ್‌ನಲ್ಲಿ ಬುಧವಾರ ಸಂಜೆ ಮತ ಸೆಳೆಯುವ ದೃಷ್ಟಿಯಿಂದ ಅಕ್ಕಿ ಮತ್ತು ಅರ್ಧ ಕೆಜಿ ಮಟನ್ ಪ್ಯಾಕೆಟ್‌ಗಳನ್ನು ವಿತರಣೆ ಮಾಡುವ ವೇಳೆ ಚುನಾವಣಾ ಅಧಿಕಾರಿಗಳು ದಾಳಿ ಮಾಹಿತಿ ಅರಿತ ವ್ಯಕ್ತಿಗಳು ಹೆದರಿ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಹಂಚಲು ತಂದಿದ್ದ ವಸ್ತುಗಳನ್ನು ವಶ ಪಡಿಸಿಕೊಂಡ ಚುನಾವಣಾ ಅಧಿಕಾರಿ ಬಿ.ವಿ. ಪಾಟೀಲ, ಅವುಗಳನ್ನು ತಹಸೀಲ್ದಾರ್ ವಶಕ್ಕೆ ನೀಡಿದ್ದಾರೆ. ಈ ವಸ್ತುಗಳು ಯಾವ ಪಕ್ಷಕ್ಕೆ ಸೇರಿದವು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

