ಇಂದು ಬೇಂದ್ರೆ ಕಾವ್ಯಾನುಭವ
ನರಗುಂದ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ನರಗುಂದ, ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ ಇವುಗಳ ಆಶ್ರಯದಲ್ಲಿ ಪಟ್ಟಣದ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾ. 14ರ ಬೆಳಗ್ಗೆ 11 ಗಂಟೆಗೆ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನ್ನಿಧ್ಯವನ್ನು ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು.
ಅತಿಥಿಗಳಾಗಿ ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಬಿ.ಎಸ್. ಹಣಜಿ, ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಮಹೇಶ ಪಾಟೀಲ, ಎಸ್.ಎನ್. ಪೂಜಾರ, ಜಯಂತಿ ಶಟ್ಟಿ, ಸುನೀಲ ನಾಗಠಾಣ, ಚನ್ನಪ್ಪ ಕೋರಿ, ಪಿ.ವಿ. ಜಾಧವ, ಜಿ.ಬಿ. ಹಿರೇಮಠ, ಅಜ್ಜಪ್ಪಗೌಡ ಪಾಟೀಲ, ಸಾಹಿತ್ಯ ರುದ್ರನಾಥ ಕಲ್ಯಾಣಶಟ್ಟಿ, ಪ್ರೊ. ಸಿ.ಎಸ್. ಸಾಲೂಟಗಿಮಠ, ಎಸ್.ಬಿ. ಪಾಟೀಲ, ಅಮಾಮ ಖಾಸೀಮ, ಭಾಗ್ಯಜ್ಯೋತಿ ಹಿರೇಮಠ, ಪ್ರೊ. ಆರ್.ಎಚ್. ತಿಗಡಿ, ಬಸವರಾಜ ಹಲಕುರ್ಕಿ, ಶಿವಾನಂದ ಜೋಗಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
--
ನಾಳೆ ಶಿವಾನುಭವ ಸಂಪದ
ಗದಗ: ಸ್ಥಳೀಯ ಹಾಲಕೇರಿ ಆನಂದಾಶ್ರಮದಲ್ಲಿ ಮಾ. 15ರ ಸಂಜೆ 6.30 ಗಂಟೆಗೆ ಶಿವಾನುಭವ ಸಂಪದ-96 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಹಾಲಕೇರಿ ಅನ್ನದಾನ ಸಂಸ್ಥಾನ ಮಠದ ಅಭಿನವ ಅನ್ನದಾನ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಶಿವಾನುಭವ ಸಂಪದದ ಅಧ್ಯಕ್ಷ ಎಸ್.ಪಿ. ಸಂಶಿಮಠ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎಸ್.ಫೈಲ ಅವರು ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಕುರಿತು ಮಾತನಾಡುವರು. ಕಾರ್ಯಕ್ರಮದಲ್ಲಿ ವಿಜಯಕುಮಾರ ಮಾಳೆಕೊಪ್ಪಮಠರನ್ನು ಸನ್ಮಾನಿಸುವರು. ವನಮಾಲಾ ಮಾನಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
---
ಮಹಿಳೆ ಕೊಲೆ
ನರಗುಂದ: ಪಟ್ಟಣದ ಅಧ್ಯಾಪಕ ನಗರದ ನಿವಾಸಿ ಬಸವ್ವ ವೀರಪ್ಪ ಭುಯ್ಯಾರ (43) ಎಂಬ ಮಹಿಳೆಯನ್ನು ಮಂಗಳವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕುತ್ತಿಗೆ ಹಿಸುಕಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಸಿಪಿಐ ಪ್ರಶಾಂತಗೌಡ ಸಿದ್ಧನಗೌಡ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

