ಬೇಂದ್ರೆ ಕೊಡುಗೆ ಅಪಾರ
ನರಗುಂದ: ಸಾಹಿತ್ಯ ಕ್ಷೇತ್ರಕ್ಕೆ ಡಾ. ದ.ರಾ. ಬೇಂದ್ರೆಯವರ ಕೊಡುಗೆ ಅಪಾರವಾಗಿದೆ. ಮಹಾನ್ ಕವಿಗಳು ನಮ್ಮನ್ನು ಬಿಟ್ಟು ಅಗಲಿದ್ದರೂ ಅವರು ರಚಿಸಿದ ಕಾವ್ಯಗಳು ಸಮಾಜದಲ್ಲಿ ಪ್ರಸುತ್ತವಾಗಿವೆ ಎಂದು ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಪಟ್ಟಣದ ಯಡಿಯೂರು ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಯಡಿಯೂರು ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪದವಿ ಹಾಗೂ ಬಿಇಡಿ ವಿದ್ಯಾರ್ಥಿಗಳಿಗಾಗಿ ನಡೆದ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಂದ್ರೆಯವರು ಬಡ ಕುಟುಂಬದಲ್ಲಿ ಜನಿಸಿ ಸಾಹಿತ್ಯ ಕ್ಷೇತ್ರದಲ್ಲಿ ಯಾರೂ ಊಹಿಸಲಾಗದಷ್ಟು ಕಾವ್ಯ ಸಂಕಲನಗಳನ್ನು ನೀಡುವ ಮೂಲಕ ಕನ್ನಡ ಭಾಷೆ ಕೀರ್ತಿಯನ್ನು ಉತ್ತುಂಗಕ್ಕೆ ಬೆಳಸಿದ್ದಾರೆ. ಇಂತಹ ಸಾಧಕರು ರಚಿಸಿದ ಕಾವ್ಯ ಸಂಕಲನವನ್ನು ಇಂದಿನ ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭ ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಗೌರವ ಅಧ್ಯಕ್ಷ ಆರ್.ಎಚ್. ತಿಗಡಿ, ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಬಿ.ಎಸ್. ಹಣಜಿ, ಪ್ರಾ ಡಾ. ನೀಲಾಂಬಿಕಾ ಪಟ್ಟಣಶಟ್ಟಿ, ಸಂಸ್ಥೆ ಅಧ್ಯಕ್ಷ ಮಹೇಶ ಪಾಟೀಲ್, ಸಾಹಿತಿ ರುದ್ರನಾಥ ಕಲ್ಯಾಣಶಟ್ಟಿ, ಪಿ.ವಿ. ಜಾಧವ, ಅಜ್ಜಪ್ಪಗೌಡ ಪಾಟೀಲ, ಪ್ರೊ. ಸಿ.ಎಸ್. ಸಾಲೂಟಿಗಿಮಠ, ಪ್ರಾ. ಇಮಾಮ ಖಾಸೀಂ, ಭಾಗ್ಯಜ್ಯೋತಿ ಹಿರೇಮಠ, ವಿ.ಎಸ್. ಡಾಣೆ, ತಾಪಂ ಸದಸ್ಯ ವಿ.ಎನ್. ಕೊಳ್ಳಿಯವರ, ಬಸುರಾಜ ಹಲಕುರ್ಕಿ, ಶಿವಾನಂದ ಜೋಗಿ, ಸುನೀಲ ನಾಗಠಾಣ, ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

