ಸುದ್ದಿ ಸಂಕ್ಷೇಪ
ಇಂದಿನಿಂದ ಪ್ರದರ್ಶನ
ಗದಗ: ವಾರ್ತಾ ಇಲಾಖೆ ವಿಧಾನಸಭೆ-60 ಎಂಬ ಛಾಯಾಚಿತ್ರ ಪ್ರದರ್ಶನವನ್ನು ಮಾ. 19 ಹಾಗೂ 20ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ಜೂನ್ 18ರಂದು ವಿಧಾನಸಭೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಈ ಛಾಯಾಚಿತ್ರ ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಮಜಲುಗಳು ಹಾಗೂ ಪ್ರಮುಖ ಘಟನೆಗಳನ್ನು ಬಿಂಬಿಸುವ 205ಕ್ಕೂ ಅಧಿಕ ಅಪೂರ್ವ ಚಿತ್ರಗಳನ್ನು ನೋಡಬಹುದು. ಮಾ. 19ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಪ್ರದರ್ಶನ ಉದ್ಘಾಟಿಸುವರು. ಸಂಜೆ 6 ಗಂಟೆ ವರೆಗೆ ವೀಕ್ಷಣೆಗೆ ಅವಕಾಶವಿದೆ. ಮಾ. 20ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೂ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕಗಳಿಂದ ವ್ಯಕ್ತಿತ್ವ ವಿಕಸನ: ಪ್ರೊ ಕೊಪ್ಪರ
ಗದಗ: ಪುಸ್ತಕ ಜೀವನದ ಅವಿಭಾಜ್ಯ ಅಂಗ. ವ್ಯಕ್ತಿತ್ವ ವಿಕಸನದಲ್ಲಿ ಅದರ ಪಾತ್ರ ಮಹತ್ವದ್ದು ಎಂದು ಪ್ರೊ ರವೀಂದ್ರ ಕೊಪ್ಪರ ಹೇಳಿದರು.ಸ್ಥಳೀಯ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದಲ್ಲಿ ಪುಸ್ತಕದ ಪಾತ್ರ ಕುರಿತು ಅವರು ಮಾತನಾಡಿದರು.
ಪ್ರತಿಯೊಬ್ಬರು ಶ್ರೇಷ್ಠ ಹಾಗೂ ಮೂಲ ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿದ ವಿಷಯವನ್ನು ಪ್ರತಿಪಾದಿಸುವ ಹಾಗೂ ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಪರಿಣತಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸನದ ಪರಿಪೂರ್ಣತೆ ಪುಸ್ತಕಗಳನ್ನು ಓದುವ ಹವ್ಯಾಸದಿಂದ ಬೆಳೆದು ಬರುತ್ತದೆ. ಪ್ರತಿಯೊಬ್ಬರೂ ಪ್ರತಿನಿತ್ಯ ಒಂದು ಉತ್ತಮ ಪುಸ್ತಕ ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾ. ವಿ.ಎಂ. ಗುರುಮಠ, ಅತಿಥಿಗಳಾಗಿ ಆಗಮಿಸಿದ್ದ ಡಾ ಮೃತ್ಯುಂಜಯ್ಯ ಶೆಟ್ಟರ ಮಾತನಾಡಿದರು. ಪ್ರೊ ರವೀಂದ್ರ ಕೊಪ್ಪರ ಅವರನ್ನು ಸನ್ಮಾನಿಸಲಾಯಿತು. ಸ್ಥಾನಿಕ ಸಮಿತಿಯ ಅಧ್ಯಕ್ಷ ಎಸ್.ಎಂ. ಗೌಡರ, ಎಚ್.ಎಫ್. ಗಂಜ್ಯಾಳ ಉಪಸ್ಥಿತರಿದ್ದರು. ಗ್ರಂಥಪಾಲಕ ಜಿ.ಇ. ಬಡಿಗೇರ ಸ್ವಾಗತಿಸಿದರು. ಡಾ ಪಿ.ವಿ. ಶೇಷಗಿರಿ ನಿರೂಪಿಸಿದರು. ಡಾ ಎಸ್.ಜಿ. ಹಿರೇಮಠ ವಂದಿಸಿದರು.
ಯುವಕರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು: ಜೋಗುರ
ಗದಗ: ಯುವಕರು ಅನೇಕ ಚಟಗಳಿಗೆ ಬಲಿಯಾಗದೇ ವಿಮರ್ಶಾತ್ಮಕ ಓದು, ಬರಹಗಳಲ್ಲಿ ತೊಡಗಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಬಿ.ಜೋಗುರ ಕರೆ ನೀಡಿದರು. ಈಚೆಗೆ ಅವರು ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೆ.ಎಚ್.ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ)ದ ಅಡಿಯಲ್ಲಿ ವಿಶೇಷ ಉಪನ್ಯಾಸ ಸಮಾರೋಪ ಕಾರ್ಯಕ್ರಮದಲ್ಲಿ ಸಮೂಹ ಮಾಧ್ಯಮಗಳು ಮತ್ತು ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ, ಕಾಲೇಜಿನಲ್ಲಿ 9 ದಿನಗಳ ಕಾಲ ನಡೆದ ಉಪನ್ಯಾಸ ಕುರಿತು ಮಾಹಿತಿ ನೀಡಿದರು. ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಉಮೇಶ ಅರಹುಣಸಿ ಉಪನ್ಯಾಸ ನೀಡಿದರು. ಚಂದ್ರಪ್ಪ ಎಚ್.ಎಸ್, ಆರ್.ಪಿ.ನದಾಫ, ನಾಗರಾಜ ಹಾವಿನಾಳ, ವೇದಾ ಹುಡೇದ, ನಿರ್ಮಲಾ ಹಳ್ಳಿ ಮತ್ತು ಚನ್ನಮ್ಮ ಹೂಗಾರ ಮಾತನಾಡಿದರು. ಪ್ರಾಧ್ಯಾಪಕ ಪ್ರೊ. ಸವಿತಾ ಪಾಟೀಲ, ರಂಜನಾ ಭಂಡಾರೆ, ಡಾ. ಮಾನಪ್ಪ ಹೊನಕಾಂಬ್ಳೆ, ಎಫ್.ಬಿ.ಆನಿ, ಅಣ್ಣಪ್ಪ ರೊಟ್ಟಿಗವಾಡ, ಬಿ.ವೈ.ಆಲೂರ ಉಪಸ್ಥಿತರಿದ್ದರು. ಪ್ರೊ. ಸವಿತಾ ಪಾಟೀಲ ಸ್ವಾಗತಿಸಿದರು. ವಾಸು ನೀರಲಕೇರಿ ನಿರೂಪಿಸಿದರು. ವಿಜಯಲಕ್ಷ್ಮಿ ಶಾಂತಗಿರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

