ಸುದ್ದಿ ಸಂಕ್ಷೇಪ
ನಾಳೆ ನಗರಕ್ಕೆ ಶರಣ ಸಂಸ್ಕೃತಿ ಮಹಾಯಾತ್ರೆ
ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿ ಹಾಗೂ ರಾಜ್ಯದ ವಿವಿಧ ಸಂಘ, ಸಂಸ್ಥೆ ಆಶ್ರಯದಲ್ಲಿ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಜಿಲ್ಲೆಯಿಂದ ಜಿಲ್ಲೆಗೆ ಶರಣ ಸಂಸ್ಕೃತಿ ಮಹಾಯಾತ್ರೆ ಆಯೋಜಿಸಲಾಗಿದೆ. ಮಾರ್ಚ್ ತಿಂಗಳಿಂದ ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಆರಂಭವಾಗಿ ಏ. 14ರಂದು ಕೂಡಲಸಂಗಮದಲ್ಲಿ ಸಮಾರೋಪವಾಗಲಿದೆ. ಈ ಯಾತ್ರೆ ಮಾ. 21ರ ರಾತ್ರಿ 9.30ಕ್ಕೆ ಗದಗ ನಗರಕ್ಕೆ ಆಗಮಿಸಲಿದೆ. ಮಾ. 22ರಂದು ಜ. ತೋಂಟದಾರ್ಯ ಮಠದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಶರಣ ಸಂಸ್ಕೃತಿ ಜಂಗಮೋತ್ಸವ ಮಹಾಯಾತ್ರೆ ಸಂಚರಿಸಲಿದೆ. ಆನಂತರಇದು ಸಭೆಯಾಗಿ ಮಾರ್ಪಟ್ಟು ಮಧ್ಯಾಹ್ನ 2ಕ್ಕೆ ಗದಗದಿಂದ ಅಡಿವಿಸೋಮಾಪುರ-ಲಕ್ಕುಂಡಿ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಸಾಗಲಿದೆ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
29ಕ್ಕೆ ಕೆಸರು ಗದ್ದೆ ಕಬಡ್ಡಿ ಟೂರ್ನಿ
ಗದಗ: ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಗದಗ ಘಟಕದಿಂದ ಮಾ. 29ರ ಬೆಳಗ್ಗೆ 8 ಗಂಟೆಗೆ ಜಿಲ್ಲಾ ಮಟ್ಟದ ಕೆಸರು ಗದ್ದೆ ಕಬಡ್ಡಿ ಪಂದ್ಯಾವಳಿಯನ್ನು ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು. 7001, ದ್ವಿತೀಯ ಬಹುಮಾನ ರು. 5001, ತೃತೀಯ ಬಹುಮಾನ ರು. 2501. ಹೆಚ್ಚಿನ ಮಾಹಿತಿಗೆ ಮೊ. 9731841714, 9742560811 ಸಂಪರ್ಕಿಸಬೇಕು.
ಇಂದು ಪೂರ್ವಭಾವಿ ಸಭೆ
ಗದಗ: ನಗರಕ್ಕೆ ಮಾ. 22ರಂದು ಶರಣ ಸಂಸ್ಕೃತಿ ಮಹಾಯಾತ್ರೆ ಆಗಮಿಸುವ ನಿಮಿತ್ತ ಅದರ ಸ್ವಾಗತ, ಸಭೆ ರೂಪು-ರೇಷೆ ಕುರಿತು ಚರ್ಚಿಸಲು ನಗರದ ಜ. ತೋಂಟದಾರ್ಯ ಮಠದಲ್ಲಿ ಮಾ. 20ರ ಸಂಜೆ 4ಕ್ಕೆ ಸರ್ವ ಸಮಾಜಗಳ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವಕೇಂದ್ರ, ಬಸವದಳ, ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಮೇದಾರ ಕೇತಯ್ಯ, ನೂಲಿಯ ಚೆಂದಯ್ಯ, ಜೇಡರದಾಸಿಮಯ್ಯ, ಕುರುಬ ಗೊಲ್ಲಾಳೇಶ, ಒಕ್ಕಲಿಗ ಮುದ್ದಣ್ಣ, ಕುಂಬಾರ ಗುಂಡಯ್ಯ, ಸಿದ್ದರಾಮೇಶ್ವರ ಭೋವಿ ಸಮಾಜ, ಗಾಣದ ಕಣ್ಣಪ್ಪ, ಲಿಂಗವಂತ ನೌಕರ ಸಂಘ, ಶಿವಸಿಂಪಿ ಸಮಾಜ, ಬಣಗಾರ, ಬಣಜಿಗರ ಸಮಾಜ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಯಳಂದೂರ ಬಸವಲಿಂಗ ಯೋಗಪಾಠಶಾಲೆ, ಅಕ್ಕಮಹಾದೇವಿ ಯೋಗ ವಿಜ್‌ಞಾನ ಕೇಂದ್ರ, ಅಕ್ಕನಬಳಗ ಸೇರಿದಂತೆ ಸರ್ವ ಸಮಾಜದ ಬಸವಾಭಿಮಾನಿಗಳು ಪ್ರಗತಿಪರ ಚಿಂತಕರು ಈ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಲಿ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಅಮರೇಶ ಅಂಗಡಿ ಹಾಗೂ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

