ಇಂದು ಉದ್ಘಾಟನೆ
ಗದಗ: ಸ್ಥಳೀಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ವಾತ್ಸಲ್ಯ ಆಸ್ಪತ್ರೆಯ ಬಳಿ ನೂತನವಾಗಿ ನಿರ್ಮಿಸಿರುವ ರಾಜಗುರು ಅಕಾಡೆಮಿಯ ಯುರೋಕಿಡ್ಸ್ ಇಂಟರ್ ನ್ಯಾಷನಲ್ ಫ್ರೀ-ಸ್ಕೂಲ್ನ ಉದ್ಘಾಟನಾ ಸಮಾರಂಭವು ಮಾ. 23ರ ಬೆಳಗ್ಗೆ 10.35 ಗಂಟೆಗೆ ಜರುಗಲಿದೆ. ಉದ್ಘಾಟನೆಯನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ನೆರವೇರಿಸುವರು. ಅಧ್ಯಕ್ಷತೆಯನ್ನು ಬಿಜಾಪುರದ ಚಾಣುಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಪ್ರೊ. ಎನ್.ಎಂ. ಬಿರಾದಾರ ವಹಿಸುವರು. ಅತಿಥಿಗಳಾಗಿ ಶಾಸಕ ಶ್ರೀಶೈಲಪ್ಪ ಬಿದರೂರ, ಮಾಜಿ ಸಚಿವ ಎಚ್.ಕೆ. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಅನಿಲ ಮೆಣಸಿನಕಾಯಿ, ಮಹೇಶ್ವರ ಶ್ರೀಗಳು, ಡಾ. ಅನಂತ ಶಿವಪುರ, ಬಿ.ಎನ್. ದಾಯಮ್ಮನವರ, ಬಸವರಾಜ ನಾಗಲಾಪುರ ಮುಂತಾದವರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಮಗುವಿನ ಪೋಷಣೆಯಲ್ಲಿ ಪಾಲಕರ ಪಾತ್ರ ಕುರಿತು ಡಾ. ಎಸ್.ಎಸ್. ಅಳ್ಳೊಳ್ಳಿ ಉಪನ್ಯಾಸ ನೀಡುವರು. ಡಾ. ಲತಾ ವೃತ್ತಿಕೊಪ್ಪ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಮತ್ತು ದೂರದರ್ಶನ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ನಗೆಹಬ್ಬ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ವಿಶ್ವ ಮಹಿಳಾ ದಿನಾಚರಣೆ
ನರೇಗಲ್ಲ: ಸ್ಥಳೀಯ ರೇಣುಕಾಚಾರ್ಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಮಹಿಳಾ ಘಟಕದಿಂದ ಮಾ. 23ರ ಸಂಜೆ 4 ಗಂಟೆಗೆ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ. ಗದಗ ಕೆವಿಎಸ್ಆರ್ ಪಪೂ ಮಹಾವಿದ್ಯಾಲಯದ ಉಪನ್ಯಾಸಕಿ ಕವಿತಾ ಕಾಶಪ್ಪನವರ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಡಾ. ಪ್ರಮಿಳಾಬಾಯಿ ಕೊರದಾನ್ಯಮಠ ವಹಿಸಲಿದ್ದಾರೆ. ಅತಿಥಿಗಳಾಗಿ ಡಾ. ಸಪ್ನಾ ಕಾಳೆ, ನ್ಯಾಯವಾದಿ ಧನಶ್ರೀ ಕಬಾಡಗಿ ಮುಂತಾದವರು ಭಾಗವಹಿಸುವರು ಎಂದು ಘಟಕದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಚಿತ ತಪಾಸಣಾ ಶಿಬಿರ
ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ಮಾ. 23ರ ಬೆಳಗ್ಗೆ 10 ಗಂಟೆಗೆ ಎಲವು ಕೀಲುಗಳ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಪ್ರಸಿದ್ಧ ಎಲುವು ಕೀಲು ತಜ್ಞ ಡಾ. ರಾಮಕೃಷ್ಣ ರಾಜು ಹಾಗೂ ಲಕ್ಷ್ಮೇಶ್ವರದ ಡಾ. ಬಿ.ಎಂ. ಅಗಡಿ ಭಾಗವಹಿಸಲಿದ್ದಾರೆ. ಉಚಿತ ಔಷಧಿ ವಿತರಣೆಯನ್ನೂ ಮಾಡಲಾಗುವುದು. ಮಾ. 23ರಂದು ಲಕ್ಷ್ಮೇಶ್ವರದಿಂದ ಅಗಡಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆಯನ್ನು ಮಾಡಲಾಗಿದ್ದು, ಪಟ್ಟಣದ ಹೊಸ ಬಸ್ನಿಲ್ದಾಣ, ಪಂಪ ಸರ್ಕಲ್ನಲ್ಲಿ ಬೆಳಗ್ಗೆ 9 ರಿಂದ 10 ಗಂಟೆಗೆ ಉಚಿತ ವಾಹನ ವ್ಯವಸ್ಥೆ ಇದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

