ಗದಗ

ಸಮ್ಮೋಹನ ಅದ್ಭುತ ಕಲೆ

Published On :

ನರೇಗಲ್ಲ: ಸಂವಹನವು ಒಂದು ಅದ್ಭುತ ಕಲೆಯಾಗಿದ್ದು, ಇದನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಕೆ ಮಾಡಿಕೊಂಡಲ್ಲಿ ಮಕ್ಕಳು ತಮ್ಮಲ್ಲಿ ಏಕಾಗ್ರತೆ ಬೆಳೆಸಿಕೊಳ್ಳುವುದರ ಜತೆಗೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಸ್ಥಳಿಯ ವೈದ್ಯ ಹಾಗೂ ಅನ್ನದಾನೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಡಾ. ಜಿ.ಕೆ. ಕಾಳೆ ಹೇಳಿದರು.
ಅವರು ಶುಕ್ರವಾರರ ಸ್ಥಳಿಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ 1 ದಿನದ ರಾಜ್ಯಮಟ್ಟದ ಸಮ್ಮೋಹನ ಹಾಗೂ ಆತ್ಮ ಸಮ್ಮೋಹನ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ, ಕೇಂದ್ರೀಕೃತ ಅಭ್ಯಾಸಕ್ಕೆ ಸಮ್ಮೋಹನವು ಸೂಕ್ತ ಮಾರ್ಗೋಪಾಯವಾಗಿದೆ. ಮಕ್ಕಳಲ್ಲಿ ಹುದುಗಿರುವ ಭಯ, ದುಗುಡಗಳನ್ನೂ ದೂರಮಾಡಲು ದಾರಿದೀಪವಾಗಿದೆ. ಇಂದಿನ ಯುವಜನಾಂಗ ದುಶ್ಚಟಗಳ ದಾಸರಾಗುತ್ತಿರುವ ಇಂದಿನ ದಿನಗಳಲ್ಲಿ ಅದರಿಂದ ದೂರ ಉಳಿಯಲು ಹಾಗೂ ಮನೋರೋಗಿಗಳನ್ನು ರೋಗದಿಂದ ಹೊರತರಲು ಸಮ್ಮೋಹನ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಇಂಥ ಕಲೆಯನ್ನು ಶಾಲೆ ಹಂತದಲ್ಲಿ ಅಳವಡಿಸಬೆಕು ಎಂದರು.
ಸಾಹಿತಿ ಪತ್ರಕರ್ತ ಮಂಜುನಾಥ ಬೊಮ್ಮನಗಟ್ಟಿ, ಪಪೂ ಆಡಳಿತ ಮಂಡಳಿಯ ಚೇರ್‌ಮನ್ ರವೀಂದ್ರನಾಥ ದೊಡ್ಡಮೇಟಿ, ಉಪನ್ಯಾಸಕಿ ಎಲ್.ಎಸ್. ಹವಾಲ್ದಾರ, ವಿಡಿಎಸ್‌ಟಿಸಿ ಕಾಲೇಜಿನ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಅರವಿಂದ ಸಜ್ಜನ ಅವರು, ಇಬ್ಬರು ವಿದ್ಯಾರ್ಥಿಗಳ ಮೇಲೆ ಸಮ್ಮೋಹನ ಮಾಡಿ ಅವರ ಪೂರ್ವ ಜನ್ಮ, ಸದ್ಯದ ಹಾಗೂ ಭವಿಷ್ಯದ ಬಗೆಗೆ ಹೊರತೆಗೆದ ಮಾಹಿತಿ ಎಲ್ಲರನ್ನೂ ಆಶ್ಚರ್ಯ ಚಿಕಿತರನ್ನಾಗಿಸಿತು. ಸಿ.ಜಿ. ಹುಡೇದಗಡ್ಡಿ, ಮುಕ್ತಾ ದೊಡ್ಡಮನಿ, ಎಲ್.ಎಸ್. ಹವಾಲ್ದಾರ, ಎಸ್.ಎಸ್. ಕಂಟಿ, ಎಂ.ಎಸ್. ಕುಲಕರ್ಣಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಎ.ಕೆ. ನಾಶಿ, ಎಲ್.ಸಿ. ಹಿರೇಮಠ, ಎಸ್.ವಿ. ಸಂಕನೂರ, ಸರ್ವಮಂಗಳಾ ನಾಶಿ, ಎಲ್.ಸಿ. ಹಿರೇಮಠ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.