8ರಂದು ಬ್ಯಾಂಕ್ ಶತಮಾನೋತ್ಸವ
ಗಜೇಂದ್ರಗಡ: ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ನ ಶತಮಾನೋತ್ಸವ ಕಾರ್ಯಕ್ರಮವು ಸೆ. 8ರ ಬೆಳಗ್ಗೆ 10.30 ಗಂಟೆಗೆ ಜರುಗಲಿದೆ ಎಂದು ಬ್ಯಾಂಕ್ ಚೇರ್ಮನ್ ಸಂಗನಬಸಪ್ಪ ಹಿರೇಮನಿ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಅರ್ಬನ್ ಬ್ಯಾಂಕ್ನ್ನು ಹೊರತುಪಡಿಸಿದರೆ ಬೇರೆ ಯಾವ ಕೋ-ಆಪ್ ಬ್ಯಾಂಕ್ ಶತಮಾನೋತ್ಸವ ಆಚರಿಸಿಲ್ಲ. ಹೀಗಾಗಿ ಗಜೇಂದ್ರಗಡ ಲಕ್ಷ್ಮೀ ಅರ್ಬನ್ ಬ್ಯಾಂಕ್ನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಗಜೇಂದ್ರಗಡ ಪಟ್ಟಣವು ನೇಕಾರಿಕೆಯುಳ್ಳ ವ್ಯಾಪಾರಿ ಸ್ಥಳವಾದರೂ ಇದರ ಸುತ್ತಲಿನ ಹಳ್ಳಿಗಳ ಜನರ ವ್ಯಾಪಾರ ಸಂಪರ್ಕ ಇರುವುದೇ ಗಜೇಂದ್ರಗಡದೊಂದಿಗೆ. ಸಹಕಾರಿ ತತ್ವದ ಬಗ್ಗೆ ಅರಿವು ಇರದ ಕಾಲದಲ್ಲಿ ತಮ್ಮ ಆರ್ಥಿಕ ವ್ಯವಹಾರಕ್ಕೆ ಒಂದು ವ್ಯವಸ್ಥೆ ಬೇಕಾದ ಸಂದರ್ಭದಲ್ಲಿ 1913 ಜನವರಿ 25ರಂದು ಬ್ಯಾಂಕ್ ಆರಂಭಿಸಲಾಯಿತು. ಸದ್ಯ ರು. 1144.25 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. 2003ರಲ್ಲಿ ಬ್ಯಾಂಕ್ ಶೇರು ಬಂಡವಾಳ ರು. 26.40 ಲಕ್ಷ, ಬ್ಯಾಂಕಿನ ನಿಧಿಗಳು 51.28 ಲಕ್ಷ, ಠೇವುಗಳು ರು. 528.64 ಲಕ್ಷಗಳಿದ್ದು, ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ರು. 606.32 ಲಕ್ಷ ಹೊಂದಿ, 14.29 ಲಕ್ಷ ಲಾಭ ಹೊಂದಿತ್ತು. ಸದ್ಯ ಶೇರು ಬಂಡವಾಳ ರು. 48.68 ಲಕ್ಷ, ಬ್ಯಾಂಕಿನ ನಿಧಿಗಳು ರು. 153.07 ಲಕ್ಷ, ಠೇವುಗಳು ರು. 949.50 ಲಕ್ಷವಿದ್ದು, ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ರು. 1144.25 ಲಕ್ಷ ಇದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷ ಸುಹಾಸಕುಮಾರ ಪಟ್ಟೇದ, ನಿರ್ದೇಶಕ ಪರಣ್ಣ ಕಡ್ಡಿ, ವೀರಬಸಪ್ಪ ಕುಂದರಗಿ, ಸಿದ್ಧಣ್ಣ ಬಂಡಿ, ಸುರೇಶ ಚನ್ನಿ, ಶಿವಮೂರ್ತೆಪ್ಪ ಕೊಡೆಕಲ್, ಸುಜಯ ಹುಬ್ಬಳಿ, ವೀರೇಶ ನಂದಿಹಾಳ, ಡಾ. ಬಿ.ವಿ. ಕಂಬಳ್ಯಾಳ, ರಾಜಶೇಖರ ಹೊಸಂಗಡಿ ಮುಂತಾದವರು ಉಪಸ್ಥಿತರಿದ್ದರು.
ಇಂದಿರಾ ಆವಾಸ್ ವಸತಿ ಯೋಜನೆ ಆಯ್ಕೆಗೆ ಮಾರ್ಗಸೂಚಿ
ಗದಗ: ಇಂದಿರಾ ಆವಾಸ್ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರವು ಮಾರ್ಗಸೂಚಿಗಳನ್ನು ಅಳವಡಿಸಿದೆ. ಕಾಯ್ದಿರಿಸಿದ ಫಲಾನುಭವಿಗಳ ಪಟ್ಟಿಯಲ್ಲಿ ಫಲಾನುಭವಿ ಹೆಸರಿರಬೇಕು. ಫಲಾನುಭವಿಯು ಕಡ್ಡಾಯವಾಗಿ ಮಹಿಳೆಯರೇ ಆಗಿರಬೇಕು. (ಅಂಗವಿಕಲರು, ಮಾಜಿ ಸೈನಿಕರು, ವಿದುರರು, ಹಿರಿಯ ನಾಗರಿಕರನ್ನು ಹೊರತುಪಡಿಸಿ), ಫಲಾನುಭವಿ ಗ್ರಾಮೀಣ ಪ್ರದೇಶದಲ್ಲಿರಬೇಕು, ಫಲಾನುಭವಿ ಸ್ವಂತ ನಿವೇಶನ ಹೊಂದಿರಬೇಕು. ರು. 32 ಸಾವಿರ ಒಳಗೆ ವಾರ್ಷಿಕ ಆದಾಯ ಹೊಂದಿದವರಾಗಿರಬೇಕು. ಬೇರೆ ಯಾವುದೇ ಯೋಜನೆ, ಇಲಾಖೆಯಿಂದ ವಸತಿ ಸೌಲಭ್ಯ ಪಡೆದಿರಬಾರದು. ಈ ಎಲ್ಲ ಅರ್ಹತೆ ಹೊಂದಿದ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಜಿಪಂ ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

