ಸುದ್ದಿ ಸಂಕ್ಷೇಪ
ವಿಶ್ವಾಸ್ಗೆ ಕೇಂದ್ರ ಬಾಲ ಸಾಹಿತ್ಯ ಪುರಸ್ಕಾರ
ಮಂಗಳೂರು: ಸಂಸ್ಕೃತ ಭಾರತಿಯ ಹಿರಿಯ ಕಾರ್ಯಕರ್ತ ಡಾ. ಎಚ್.ಆರ್.ವಿಶ್ವಾಸ್ ಅವರಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. ಮಕ್ಕಳ ಸಾಹಿತ್ಯದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಸಲ್ಲುವ ಈ ಪುರಸ್ಕಾರ ಜೀವಮಾನದ ಸಾಧನೆಗೆ ಕೊಡಲ್ಪಡುತ್ತದೆ. ಸಂಸ್ಕೃತ ಭಾಷೆಯಲ್ಲಿ ಬಾಲಸಾಹಿತ್ಯಕ್ಕಾಗಿ ಡಾ. ವಿಶ್ವಾಸ ಬರೆದ 'ಮಾರ್ಜಾಲಸ್ಯ ಮುಖಂ ದೃಷ್ಟಂ' ಎಂಬ ಸಣ್ಣ ನಾಟಕಗಳ ಸಂಗ್ರಹಕ್ಕಾಗಿ ಈ ಪ್ರಶಸ್ತಿ ಪ್ರಕಟಿಸಲಾಗಿದೆ. ನ.15ರಂದು ಗೋವಾದ ಪಣಜಿಯಲ್ಲಿ ನಡೆಯುವ ಸಮಾರಂಭದಲ್ಲಿ 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2010ರಲ್ಲಿ ಡಾ.ಎಸ್.ಎಲ್.ಭೈರಪ್ಪನವರ 'ಆವರಣ' ಕಾಬಂದರಿಯ ಸಂಸ್ಕೃತಾನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಗಳಿಸಿದ್ದ ಡಾ. ವಿಶ್ವಾಸ್, ಅದೇ ಅನುವಾದಕ್ಕೆ 2011ರಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದಿಂದಲೂ ಪ್ರಶಸ್ತಿ ಪಡೆದಿದ್ದಾರೆ ಎಂದು ಸಂಸ್ಕೃತ ಭಾರತೀ ಕಾರ್ಯಾಲಯ ಕಾರ್ಯದರ್ಶಿ ದ.ರಾ. ಗೋವಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ದ.ಕ. ಜನರು ಡೀವಿ ನಂಬಲ್ಲ'
ಪುತ್ತೂರು: ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಡಕೆ ಬೆಳೆಗಾರರಿಗೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದೆ, ಇದೀಗ ಅಡಕೆ ಕೃಷಿಕರ ಬಗ್ಗೆ ಹೇಳಿಕೆಯ ನಾಟಕವಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ತಮ್ಮ ಅಧಿಕಾರ ಅವಧಿಯಲ್ಲಿ ರೈತರಿಗಾಗಿ ಏನೂ ಸೌಲಭ್ಯ ಕಲ್ಪಿಸಲಿಲ್ಲ. ಆದ್ದರಿಂದ ಈಗ ಅವರಿಗೆ ಇನ್ನೊಬ್ಬರ ಬಗ್ಗೆ ಹೇಳುವ ನೈತಿಕ ಹಕ್ಕಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಟೀಕಿಸಿದರು. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಅಡಕೆ ಕೊಳೆ ರೋಗಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಚಿವ ವಿನಯಕುಮಾರ್ ಅವರ ಪ್ರಸ್ತಾವನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 25 ಕೋಟಿ ಮಂಜೂರುಗೊಳಿಸಿದ್ದಾರೆ. ಅಡಕೆ ಕೊಳೆರೋಗ ಪೀಡಿತರಿಗೆ 25ನ್ನು ನೀಡದ ಸದಾನಂದಗೌಡರನ್ನು ಜಿಲ್ಲೆಯ ಜನತೆ ಇನ್ನು ನಂಬಲಾರರು' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

