ಗದಗ

ಬಿಸಿಎಂ ಹಾಸ್ಟೆಲ್ ಅವಸ್ಥೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 1
ಪಟ್ಟಣದ ಬಿ.ಸಿ.ಎಂ. ಹಾಸ್ಟೆಲ್ ಮೇಲ್ವಿಚಾರಕನ ಉಪಟಳದಿಂದ ಬೇಸತ್ತ ವಿದ್ಯಾರ್ಥಿಗಳು ಬೀದಿಗೆ ಬಂದು ಹೋರಾಟ ನಡೆಸಿದ್ದಾರೆ. ಕುಟುಂಬವೊಂದು ವಾಸಿಸುವ ಮನೆಯಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ. ಬೆರಳೆಣಿಕೆ ಮಂದಿ ವಾಸಿಸುವ ಈ ಮನೆಯಲ್ಲಿ 50 ವಿದ್ಯಾರ್ಥಿಗಳನ್ನು ತುಂಬಿದ್ದಾರೆ.
ಕಬ್ಬಿಣದ ಸೆಲ್ಫ್‌ನಲ್ಲಿಯೇ ಇವರ ವಿಶ್ರಾಂತಿ. ಶುದ್ಧ ಕುಡಿಯುವ ನೀರಿಗೂ ಗತಿಯಿಲ್ಲ. ಗುಣಮಟ್ಟದ ಊಟ ನೀಡುತ್ತಿಲ್ಲ. ಶೌಚಾಲಯ ಮತ್ತು ಸ್ನಾನದ ಕೊಠಡಿ ಕೊರತೆಯಿಂದ ಪರದಾಡುತ್ತಿದ್ದಾರೆ. ಇಂಥ ದುರವಸ್ಥೆ ಕಂಡು ಪ್ರಜ್ಞಾವಂತರು ಮಮ್ಮಲ ಮರುಗುತ್ತಿದ್ದಾರೆ.
ಕಳಪೆ ಆಹಾರ ವಿತರಣೆ
ಮನೆಯಲ್ಲಿ ಪಾಲಕರು ಒಳ್ಳೆ ಊಟ ಬಡಿಸುತ್ತಾರೆ. ಆದರೆ, ಇಲ್ಲಿ ಹೊತ್ತಿಸಿರುವ ಉಪ್ಪಿಟ್ಟು ನೀಡುತ್ತಾರೆ. ಇದರ ಬಗೆಗೆ ಪ್ರಶ್ನಿಸಿದರೆ ಬಡಿಯುತ್ತಾರೆ. ಅಡುಗೆ ಸಾಮಾನುಗಳನ್ನು ಕಣ್ಮುಂದೆ ತಮ್ಮ ಮನೆಗೆ ಹೊತ್ತುಕೊಂಡು ಹೋದರೂ ಯಾರೂ ಕೇಳದ ಸ್ಥಿತಿ ಇದೆ ಎಂದು ಎಲ್ಲ ವಿದ್ಯಾರ್ಥಿಗಳು ಸಾಮೂಹಿಕದೂರುತ್ತಾರೆ.
ವಸತಿ ನಿಲಯ ಕಟ್ಟಡ ಹಿಂಬದಿಯಲ್ಲಿ ತಳ ಮಟ್ಟದಲ್ಲಿ ನೀರು ಶೇಖರಣೆ ಟ್ಯಾಂಕ್ ನಿರ್ಮಿಸಲಾಗಿದೆ. ಇದರ ಸುತ್ತಲೂ ಮಳೆಯಾದಾಗ ಶೇಖರಣೆ ಆಗುವ ರಾಡಿ ನೀರು ತಳಮಟ್ಟದ ನೀರು ಶೇಖರಣೆ ಟ್ಯಾಂಕಿನೊಳಗೆ ಹರಿದು ಹೋಗುತ್ತದೆ. ಇದನ್ನು ಎಲ್ಲ ಕಡೆಗೆ ಪೂರೈಕೆ ಮಾಡಲಾಗುತ್ತದೆ. ಇದರಿಂದ ಹಲವಾರು ವಿದ್ಯಾರ್ಥಿಗಳ ಆರೋಗ್ಯ ಮೇಲೆ ದುಷ್ಪರಿಣಾಮ ಬೀರಿದೆ. ಹಲವಾರು ವಿದ್ಯಾರ್ಥಿಗಳು ಅನಾರೋಗಕ್ಕೆ ತುತ್ತಾಗಿ ಊರಿಗೆ ಹೋಗಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ.
ಅನುದಾನ ಕೊಳ್ಳೆ
ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಪಾಲನೆಗೆ ಬಂದ ಹಣವನ್ನು ಅಧಿಕಾರಿಗಳು ಕೊಳ್ಳೆ ಹೊಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೊಟ್ರೇಶ ಚಿಲಕಾ ದೂರುತ್ತಾರೆ. ಎಸ್‌ಸಿ/ ಎಸ್‌ಟಿ ಮಕ್ಕಳಿಗೆ ಸರ್ಕಾರ ರೂಪಿಸಿರುವ ಈ ವಸತಿ ನಿಲಯದ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೇ ಹಿಂದುಳಿದ ವಿದ್ಯಾರ್ಥಿಗಳಿಗೆ ಬಂದಂತಹ ಸೌಲಭ್ಯಗಳ ಸೂಕ್ತ ಮಾಹಿತಿ ನೀಡದೆ ನಿಗೂಢವಾಗಿಟ್ಟು ಕೊಳ್ಳೆ ಹೂಡೆಯುತ್ತಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿವೆ. ಪದೇ ಪದೇ ಇಂಥ ತೊಂದರೆಗೆ ಈಡಾಗುತ್ತಿರುವ ವಿದ್ಯಾರ್ಥಿಗಳ ನರಕಯಾತನೆಗೆ ಶಾಶ್ವತ ಪರಿಹಾರ ಎಂದು ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.