ಗದಗ

ಅಶುದ್ಧ ನೀರು ಘಟಕಗಳು ಬಂದ್

Published On :

ಗಜೇಂದ್ರಗಡ:  ಪಟ್ಟಣದಲ್ಲಿ ಸರ್ಕಾರ ನಿಯಮಾವಳಿಯಂತೆ ಪರವಾನಗಿ ಪಡೆಯದ ಅಕ್ರಮ ಶುದ್ಧ ಕುಡಿಯುವ ನೀರು ತಯಾರಿಕಾ ಘಟಕಗಳ ಮೇಲೆ ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ನೇತೃತ್ವದ ತಂಡ, ದಿಢೀರ್ ದಾಳಿ ನಡೆಸಿ ಅಶುದ್ಧ ಕುಡಿಯುವ ನೀರು ಘಟಕಗಳನ್ನ್ನು ಬಂದ್ ಮಾಡಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಿ.ಬಿ. ಚೆನ್ನ್ನಶೆಟ್ಟಿ ಮಾತನಾಡಿ, ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಪರವಾನಗಿ ಪಡೆದಿಲ್ಲ. ಕುಡಿಯಲು ಅಯೋಗ್ಯವಾದ ನೀರು ಸರಬರಾಜು ಮಾಡುತ್ತಿರುವ ಬಗೆಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ ಎಂದರು.
ಸ್ಥಳೀಯ ನಾಗ್ಪಪ ಕರಿಬಸಪ್ಪ ಪಾಗಿ, ನದಾಫ್ ಫೌಂಡೇಶನ್, ಓಂ (ರಿ) ವಿವಿಧೋದ್ದೇಶಗಳ ಸಂಘ, ವೆಂಕಟೇಶ್ವರ ಶುದ್ಧ ಕುಡಿಯುವ ನೀರು ತಯಾರಿಕೆ ಘಟಕಗಳು ಯಾವುದೇ ಪರವಾನಗಿ ಪಡೆದಿರುವುದಿಲ್ಲ.  ಈ ಹಿನ್ನ್ನೆಲೆಯಲ್ಲಿ ಎಲ್ಲ ಘಟಕಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಅವರಿಂದ ಈ ಕೂಡಲೇ ಘಟಕಗಳನ್ನ್ನು ಬಂದ್ ಮಾಡುತ್ತೇವೆ ಎಂದು ಲಿಖಿತ ಪತ್ರ ಪಡೆಯಲಾಗಿದೆ ಎಂದರು.
ಜಿಲ್ಲಾ ಅಂಕಿತ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ ಆರ್.ಎಸ್ ಗಡಾದ ಮಾತನಾಡಿ, ಪಟ್ಟಣದ ಖಾಸಗಿ ಒಡೆತನದ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ದಾಳಿ ಮಾಡಲಾಗಿದೆ. ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುತ್ತದೆ. ಒಂದು ವೇಳೆ ಪುನಃ ಆರಂಭಿಸಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಡಿ.ಎಸ್ ಅಂಗಡಿ ಮಾತನಾಡಿ ಪಟ್ಟಣದ ಖಾಸಗಿ ಒಡೆತನದ ಶುದ್ಧ ಕುಡಿಯುವ ನೀರಿನ ಘಟಕಗಳು ಈ ಎಲ್ಲ ನಿಯಮಾವಳಿಗಳನ್ನ್ನು ಉಲ್ಲಂಘನೆ ಮಾಡಿ ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಪಟ್ಟಣದ ಗಲ್ಲಿ, ಗಲ್ಲಿಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಘಟಕಗಳ ಮೇಲೆಕ್ರಮ ಜರುಗಿಸಲಾಗುವುದು ಎಂದರು.

ಗಜೇಂದ್ರಗಡದಲ್ಲಿ ಖಾಸಗಿ ಒಡೆತನದ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಿಸಿರುವುದರ ಬಗ್ಗೆ ನಮ್ಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಪರವಾನಗಿ ಪಡೆಯದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
                   ಶೋಭಾ ಗಜಾಕೋಶ,
           ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಕರ್ನಾಟಕ ನಗರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಕುಡಿಯಲು ನೀರು ಯೋಗ್ಯ ಇರುವ ಬಗ್ಗೆ ತಪಾಸಣಾ ಪ್ರಮಾಣ ಪತ್ರವನ್ನ್ನು  ಪುರಸಭೆಗೆ ಹಾಜರುಪಡಿಸಲು ಶುದ್ಧ ನೀರು ಘಟಕಗಳಿಗೆ ಹೇಳಲಾಗಿದೆ. ಹೀಗಾಗಿ ಇದುವರೆಗೂ ಯಾರಿಗೂ ಪರವಾನಗಿ ಪತ್ರ ನೀಡಿಲ್ಲ.
                   ಬಿ.ಟಿ ಬಂಡಿವಡ್ಡರ, ಪ್ರಭಾರಿ ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.