ಗದಗ

ದಾಖಲೆ ಸುಸ್ಥಿತಿಯಲ್ಲಿರಲಿ: ಆಟೋ ಚಾಲಕರಿಗೆ ಸಲಹೆ

Published On :

ಗದಗ: ಆಟೋ ಚಾಲಕರು ಹಾಗೂ ಟಂಟಂ ಚಾಲಕರು ತಮ್ಮ ಚಾಲನೆಯ ಬಗ್ಗೆ ಇರಬೇಕಾದ ಲೈಸೆನ್ಸ್, ಪರ್ಮಿಟ್ ಮುಂತಾದ ದಾಖಲೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದರೊಂದಿಗೆ ವೃತ್ತಿಯ ಬಗ್ಗೆ ಗೌರವ ಹೊಂದಿದಾಗ ಮಾತ್ರ ಉತ್ತಮ ಚಾಲಕನಾಗಲು ಸಾಧ್ಯ ಎಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಹೇಳಿದರು.
ಅವರು ಗುರುವಾರ ಜೈಭೀಮ ಆಟೋ ರಿಕ್ಷಾ ಮಾಲೀಕರ- ಚಾಲಕರ ಸಂಘದ ಕಾರ್ಯಾಲಯದಲ್ಲಿ ಆಟೋ ಚಾಲಕರ ಸಮಸ್ಯೆ ಪರಿಹಾರ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಶಹರ ಠಾಣೆಯ ಸಿಪಿಐ ಎಂ.ಎಸ್. ಪಾಟೀಲ ಮಾತನಾಡಿ, ಆಟೋ ಚಾಲಕರು ಸಮವಸ್ತ್ರದೊಂದಿಗೆ ಶಿಸ್ತಿನಿಂದ ವರ್ತಿಸಿದಾಗ ಪ್ರಯಾಣಿಕರು ತಮ್ಮ ಕಡೆ ಆಕರ್ಷಿತರಾಗಲು ಸಾಧ್ಯ. ಆ ದಿಸೆಯಲ್ಲಿ ಚಾಲಕರು ದುಶ್ಚಟಗಳಿಂದ ದೂರಾಗಿ ಉತ್ತಮ ಆರೋಗ್ಯ ಹೊಂದಲು ಕರೆ ನೀಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪರಶುರಾಮ ಪೂಜಾರ, ಅತಿಥಿಗಳಾಗಿ ಆಗಮಿಸಿದ್ದ ಪಿ.ಎಸ್.ಐ. ಚಾಮುಂಡೇಶ್ವರಿ ಹಾಗೂ ಎ.ಎಸ್.ಐ. ನಾಗರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಹೂಲಿ, ಎಚ್.ಎಂ. ಉಳ್ಳಿಕಾಶಿ, ಯುವರಾಜ ಬಳ್ಳಾರಿ, ಎಸ್.ಎಸ್. ನರಗುಂದ, ಲಕ್ಷ್ಮಣ ಕಟ್ಟಿಮನಿ, ಸಂಗಪ್ಪ ಹೊಸಳ್ಳಿ, ಬುಡ್ಡಾ ಕರ್ನಾಚಿ, ದ್ಯಾಮಣ್ಣ ಗೌಡರ, ಹನುಮಂತ ಕೊಳಗನವರ, ಪರಶುರಾಮ ನಾಮದೇವ, ಮಂಜುನಾಥ ಹಂಸನೂರ, ಶ್ರೀಧರ ಹಂಸನೂರ, ಇಮಾಮ ಕದಡಿ, ಜಾವೀದ ಮುಲ್ಲಾ, ಷರೀಫ, ಮಂಜುನಾಥ ಬಸಾಪುರ, ರವಿ ಹಾದಿಮನಿ, ಶಿವು ಜಂಬಲದಿನ್ನಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.