ಆಷಾಢದಲ್ಲಿ ಶರಣ ತತ್ವ ದರ್ಶನ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 25
ಪುರಾಣ, ಪ್ರವಚನಗಳೆಂದರೆ ಎಲ್ಲರಿಗೂ ನೆನಪಾಗುವುದು ಶ್ರಾವಣ ಮಾಸ. ಆದರೆ ಮುಂಡರಗಿ ತೋಂಟದಾರ್ಯ ಮಠ ಇದಕ್ಕೆ ವಿಭಿನ್ನವಾಗಿದೆ. ಆಷಾಢ ಮಾಸದಲ್ಲಿಯೇ ಪ್ರತಿವರ್ಷ ಬಸವತತ್ವ ಪ್ರಚಾರಕರನ್ನು ಕರೆದು ಪ್ರವಚನದ ಮೂಲಕ ಬಸವಾದಿ ಪ್ರಮಥರ ಹಾಗೂ ಅವರ ವಚನಗಳ ತಿಳಿವಳಿಕೆ ನೀಡುತ್ತಾ ಬಂದಿದೆ.
ಪ್ರಸ್ತುತ ವರ್ಷ ದೆಹಲಿಯ ತೋಂಟದಾರ್ಯ ಶಾಖಾಮಠದ ಮಹಾಂತ ದೇವರನ್ನು ಕರೆತಂದು ಶರಣತತ್ವ ದರ್ಶನ ಪ್ರವಚನವನ್ನು ಜೂ. 28ರಿಂದ ಪ್ರಾರಂಭಿಸಿದ್ದು, ಜು. 25ಕ್ಕೆ ಮುಕ್ತಾಯಗೊಳಿಸಲಾಗುತ್ತಿದೆ.
ಶ್ರಾವಣಮಾಸ ಎಂದರೆ ಒಳ್ಳೆಯದು, ಆಷಾಢ ಮಾಸ ಎಂದರೆ ಕೆಟ್ಟದ್ದು ಎನ್ನುವುದು ಸೇರಿದಂತೆ ಜನರನ್ನು ಮೌಢ್ಯದಿಂದ ಹೊರತರುವ ಉದ್ದೇಶದಿಂದ ಗದುಗಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿಯೇ ಇಲ್ಲಿ ಬಸವತತ್ವದ ಅಡಿಯಲ್ಲಿಯೇ ಪ್ರವಚನಗಳು ಜರುಗುತ್ತಾ ಬಂದಿವೆ.
ಈ ಹಿಂದೆ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಗುಲ್ಬರ್ಗ ಸಿದ್ದಬಸವ ಕಬೀರಾನಂದ ಶ್ರೀ, ಧಾರವಾಡದ ಬಸವ ಮಹಾಮನೆಯ ಬಸವಾನಂದರು, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಕುಮಾರ ದೇವರು ಪ್ರವಚನ ನೀಡಿದ್ದಾರೆ.
ಶರಣತತ್ವ ದರ್ಶನ ಪ್ರವಚನಲ್ಲಿ ನಿತ್ಯ ಪ್ರವಚನಕ್ಕೆ ಬಂದ ಎಲ್ಲ ಭಕ್ತರಿಗೂ ಪ್ರಸಾದ ಸೇವೆಯನ್ನು ತೋಂಟದಾರ್ಯ ಪ್ರವಚನ ಸಮಿತಿಯಿಂದ ಮಾಡಲಾಗುತ್ತದೆ. ಪ್ರವಚನ ಸಂದರ್ಭದಲ್ಲಿಯೇ ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು, ಸುಧಾ ಬರಗೂರ ಅವರಿಂದ ಹಾಸ್ಯ, ರಂಗ ಕಲಾವಿದರಿಂದ ನಾಟಕಾಭಿನಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕೊತಬಾಳದ ಅರುಣೋದಯ ಕಲಾತಂಡದವರಿಂದ ಜನಪದ ಹಾಗೂ ಹಾಸ್ಯ ಕಾರ್ಯಕ್ರಮ, ಹಡಪದ ಅಪ್ಪಣ್ಣನವರ ಜಯಂತಿ, ವಚನಪಿತಾಮಹ ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಆಯೋಜಿಸಿದ್ದು ವಿಶೇಷವಾಗಿತ್ತು. ಲಿಂಗಪೂಜೆ ವಿಧಾನ, ಸಾಮೂಹಿಕ ಲಿಂಗದೀಕ್ಷೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಪ್ರವಚನ ಸಮಿತಿಯ ಪದಾಧಿಕಾರಿಗಳು ಒಂದು ತಿಂಗಳ ಕಾಲ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಜು. 25ರಂದು ಸಂಜೆ 7 ಗಂಟೆಗೆ ಪ್ರವಚನ ಮುಕ್ತಾಯಗೊಳ್ಳಲಿದೆ.
ಪ್ರವಚನ ಮಂಗಲ ಇಂದು
ಶರಣತತ್ವ ದರ್ಶನ ಪ್ರವಚನ ಮಂಗಲೋತ್ಸವ ಕಾರ್ಯಕ್ರಮವು ಜು. 25ರಂದು ಸಂಜೆ 6-30ಕ್ಕೆ ಶ್ರೀಮಠದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀ ವಹಿಸುವರು. ಶ್ರೀ ರಾಮಕೃಷ್ಣ -ವಿವೇಕಾನಂದ ಆಶ್ರಮ ಗದಗ-ಬಿಜಾಪುರದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮಿಗಳು ಸಮ್ಮುಖ ವಹಿಸುವರು. ಅತಿಥಿಗಳಾಗಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ರೋಣ ಶಾಸಕ ಜಿ.ಎಸ್. ಪಾಟೀಲ, ವಿಶ್ರಾಂತ ಪ್ರಾಚಾರ್ಯ ಅಲ್ಲಮಪ್ರಭು ಬೆಟದೂರು ಮತ್ತು ತೋಂಟದಾರ್ಯ ಕಲ್ಯಾಣ ಕೇಂದ್ರದ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಆಗಮಿಸುವರು. ಪ್ರವಚನಕಾರರಾಗಿ ದೆಹಲಿ ತೋಂಟದಾರ್ಯ ಶಾಖಾಮಠದ ಮಹಾಂತದೇವರು ಉಪಸ್ಥಿತರಿರುವರು. ಬೆಳಗ್ಗೆ 9 ಗಂಟೆಗೆ ಮೆರವಣಿಗೆ ಪ್ರಾರಂಭವಾಗಲಿದ್ದು, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಡಿಗೇರ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರವಚನ ಸಮಿತಿಯ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷ ಲಿಂಗರಾಜಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

