ಪುರಾಣ ಆಲಿಕೆಯಿಂದ ಪಾವನ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 29
ಶ್ರಾವಣ ಮಾಸದಲ್ಲಿ ನಿತ್ಯ ವ್ರತಾಚರಣೆ, ಇಷ್ಟಲಿಂಗ ಪೂಜೆ, ಭಜನೆ, ದೇವನಾಮಸ್ಮರಣೆ ಮಾಡುವುದರ ಜತೆಗೆ ಮಹಾನ್ ಶರಣರ, ದೇವಾನುದೇವತೆಗಳ ಪುರಾಣ ಪುಣ್ಯ ಕಥೆಗಳನ್ನು ಆಲಿಸುವುದರಿಂದ ದುಃಖ ದುಮ್ಮಾನ ಕಳೆದು ಜೀವನ ಪಾವನವಾಗುತ್ತದೆ ಎಂದು ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಭಾನುವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಶ್ರೀ ಶರಣ ಬಸವೇಶ್ವರ ಪುರಾಣ ಪ್ರಾರಂಭೋತ್ಸವ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಟಿವಿ, ಕಂಪ್ಯೂಟರ್, ಸಿನಿಮಾ ಮಾಧ್ಯಮಗಳ ಪ್ರಭಾವಕ್ಕೊಳಗಾದ ಮನುಷ್ಯ ಖಿನ್ನತೆಯಿಂದ ಬಳಲುತ್ತಾ, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಧರ್ಮಾಚರಣೆ ಮರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಧರ್ಮದ ದಾರಿಯಲ್ಲಿ ನಡೆಯುವುದಲ್ಲದೇ ತಮ್ಮ ಮಕ್ಕಳಿಗೂ ನಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಹಬ್ಬಗಳ ಆಚರಣೆಯ ಮಹತ್ವವನ್ನು ತಿಳಿಸಬೇಕು ಎಂದರು.
ಪುರಾಣ ಸಮಿತಿಯ ಹಿರಿಯರಾದ ಸೋಮಣ್ಣ ಮುಳಗುಂದ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ವಿ. ಕೆರಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿದರು. ಹಿರಿಯ ಜೀವಿ ಶಾಂತಯ್ಯನವರು ಶಿಗ್ಲಿಮಠ, ಸಿದ್ದನಗೌಡ ಬಳ್ಳೊಳ್ಳಿ, ಬಿ.ಎನ್. ಗುಡಗೇರಿ, ನೀಲಪ್ಪ ಕನವಳ್ಳಿ, ಪುರಸಭಾ ಸದಸ್ಯ ಸೋಮಣ್ಣ ಸುತಾರ, ನಾಗಪ್ಪ ಓಂಕಾರಿ, ವಿರೂಪಾಕ್ಷ ಆದಿ, ಸೋಮೇಶ್ವರ ಪುರಾಣ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಮೆಣಸಿನಕಾಯಿ, ಶಂಕ್ರಪ್ಪ ಅಣ್ಣಿಗೇರಿ, ಸುರೇಶಪ್ಪ ರಾಚನಾಯ್ಕರ, ಮುತ್ತಣ್ಣ ಹುಳಕನವರ, ರುದ್ರಪ್ಪ ಕೊಡ್ಲಿ, ಶಂಕರ ಬಾಳಿಕಾಯಿ, ವಿರೂಪಾಕ್ಷಪ್ಪ ಹಂಪಣ್ಣವರ ಹಾಜರಿದ್ದರು. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಬಸವಣ್ಣಯ್ಯಶಾಸ್ತ್ರಿಗಳು ವೆಂಕಟಾಪುರಮಠ ಪುರಾಣ ಪಠಣ ಪ್ರಾರಂಭಿಸಿದರು. ಶಿಕ್ಷಕ ಎಸ್.ಎಫ್. ಆದಿ ಪುರಾಣ ಪ್ರವಚನ ಮಾಡಿದರು. ಮಲ್ಲಿಕಾರ್ಜುನ ಕಳಸಾಪುರ ಸ್ವಾಗತಿಸಿದರು. ಶಿಕ್ಷಕ ಜೆ.ಬಿ. ಹೊಟ್ಟಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

