ಕಳ್ಳತನ ಆರೋಪಿ ಬಂಧನ: ಆಭರಣ ವಶ
ಗದಗ: ಸ್ಥಳೀಯ ಕನಕ ಭವನದ ಹತ್ತಿರದ ಲಕ್ಷ್ಮಣಸಾ ನಗರದಲ್ಲಿರುವ ಅರ್ಜುನಸಾ ಭಾಂಡಗೆ ಅವರ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರದ ವಸ್ತುಗಳನ್ನು ಹಾಗೂ ಹಣ ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜು. 1ರಂದು ಲಕ್ಷ್ಮಣಸಾ ನಗರದ ನಿವಾಸಿ ಅರ್ಜುನಸಾ ಭಾಂಡಗೆ ಎಂಬುವರು ಕುಟುಂಬ ಸಮೇತ ಕೊಲ್ಹಾಪೂರಕ್ಕೆ ಹೋದ ಸಂದರ್ಭದಲ್ಲಿ ಜು. 1ರ ಸಂಜೆ 6 ರಿಂದ ಹಿಡಿದು ಜು. 2ರ ಸಂಜೆ 7.30ರೊಳಗೆ ಯಾರೋ ಕಳ್ಳರು ಮನೆಯ ಕೀಲಿಯ ಕೊಂಡಿಯನ್ನು ಮುರಿದು ಮನೆಯಲ್ಲಿದ್ದ ರು. 2 ಲಕ್ಷ, ರು. 3.93 ಲಕ್ಷ ಬೆಲೆಯ ಬಂಗಾರದ ಹಾಗೂ ರು. 60 ಸಾವಿರ ಬೆಲೆಯುಳ್ಳ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಕುರಿತು ಜು. 3ರಂದು ಗ್ರಾಮೀಣ ಠಾಣೆಯಲ್ಲಿ 157/2014 ಕಲಂ 454, 457, 380 ಐಪಿಸಿ ಕೆಳಗೆ ಪ್ರಕರಣ ದಾಖಲಿಸಲಾಯಿತು. ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಎಂ. ಜಗದೀಶ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಬಲೆ ಬೀಸಿದ ಪೊಲೀಸರು ತುಮಕೂರಿನ ಕ್ಯಾತಸಂದ್ರದಲ್ಲಿ ವಾಸವಾಗಿದ್ದ ಕವಿವರ್ಮನನ್ನು ಬಂಧಿಸಿ ಕಳವು ಮಾಡಿದ್ದ ರು. 5 ಲಕ್ಷ ಬಂಗಾರ ಮತ್ತು ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದ ಸಿಪಿಐ ಎಂ. ಜಗದೀಶ, ಪಿಎಸ್ಐ ಲಾಲಸಾಬ್ ಜೂಲಕಟ್ಟಿ, ಸಿಬ್ಬಂದಿಗಳಾದ ಬಸವರಾಜ ಗುಡ್ಲಾನೂರ, ಈಶ್ವರ ಸಾದರ, ವೀರೇಶ ಭೀಕ್ಷಾವತಿಮಠ, ಶರಣಪ್ಪ ನಾಗೇಂದ್ರಗಡ, ಮಹಾವೀರ ಸದರನ್ನವರ, ಚಂದ್ರಶೇಖರ ಜಾಲಗಾರ, ಕರಿಯಪ್ಪ ಸಂಕದಾಳ, ಹೇಮಂತ ಪರಸಣ್ಣವರ, ಗುರುರಾಜ ಬೂದಿಹಾಳ, ಆನಂದ ದೊಡ್ಡಮನಿ ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಡಿಎಸ್ಪಿ ವಿಜಯ ಡಂಬಳ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

