ಬಾಂಧವ್ಯ ಬೆಸೆದ ಸಮ್ಮೇಳನ
ಗಜೇಂದ್ರಗಡ: 51 ವರ್ಷಗಳ ಹಿಂದೆ ವಿದ್ಯಾರ್ಥಿ ಸ್ನೇಹಿತರಾಗಿದ್ದ ಇವರೆಲ್ಲರೂ ಈಗ ಮತ್ತೆ ಹಿರಿಯ ನಾಗರಿಕರಾಗಿ ಭೇಟಿಯಾದ್ದಾರೆ. ಅಂದಿನ ಬಾಲ್ಯದ ಸುಮಧುರ ಕ್ಷಣಗಳನ್ನು ಪರಸ್ಪರ ಸ್ಮರಿಸಿಕೊಂಡು ಅಂದಿನ ದಿನಗಳು ಎಷ್ಟು ಚೆಂದ ಇದ್ದವಲ್ಲ ಎಂದು ಮೆಲಕು ಹಾಕಿದರು.
ಇಂಥ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಅಂದು ಕಲಿತ ಸ್ಥಳೀಯ ಕಾಲಕಾಲೇಶ್ವರ ಹೈಸ್ಕೂಲಿನಲ್ಲಿ (ಈಗಿನ ಎಸ್.ಎಂ. ಭೂಮರೆಡ್ಡಿ ಶಾಲೆ) 1962-63 ಸಾಲಿನ ಎಸ್ಸೆಸ್ಸೆಲ್ಸಿ ಓದಿರುವ 27 ಸ್ನೇಹಿತರಲ್ಲಿ 7 ವ್ಯಕ್ತಿಗಳು ದಿವಂಗತರಾಗಿದ್ದು, ಉಳಿದ 20 ಸ್ನೇಹಿತರು ಈಗ ಸೇರಿ ನಡೆಸಿದ ಅಪರೂಪದ ಸ್ನೇಹ ಸಮ್ಮೇಳನ ಮಾದರಿಯಾಯಿತು.
ಶಿಕ್ಷಕ, ಎಂಜಿನಿಯರ್, ಕೃಷಿ, ಸರ್ಕಾರಿ ಸೇವೆ, ವ್ಯಾಪಾರ ಹೀಗೆ ಅನೇಕ ವೃತ್ತಿಯಲ್ಲಿ ತಮ್ಮ ಬದುಕನ್ನು ಮುಡುಪಾಗಿಟ್ಟ 70ರ ವಯೋವಾನದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ಕಂಬನಿ ಮಿಡಿಯುತ್ತಿತ್ತು. ಅಂದಿನ ಕಾಲ ಆಟೋಟ, ಓದು, ನೋವು-ನಲಿವು, ಹಳೆ ಕಾಲದ ಫ್ರೆಂಡ್ಸ್ ನೆನಪಿನ ಬುತ್ತಿ ಬಿಚ್ಚಿದರು. ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ, ಪಯಣಿಗ ನಾನಮ್ಮಾ ಎನ್ನುವ ಹಳೆ ಸಾಂಗ್ ಹಾಡಿದರು.
ಬಿ.ಎಂ. ಕುಂಬಾರ ಅನಿಸಿಕೆ ವ್ಯಕ್ತಪಡಿಸಿದರು. ಜಿ.ಎಸ್. ಅಂಗಡಿ, ಜಿ.ವಿ. ಅಂಗಡಿ, ಎಸ್.ಕೆ. ಬಿನ್ನಾಳ, ಸಿ.ಎ. ಚಿನಿವಾಲರ, ಸಿ.ಸಿ. ಮಠ, ಪಿ.ಎಸ್. ಡೊಳ್ಳಿನ, ಎಂ.ಎಂ. ಗಂಧದ, ಡಿ.ಎ. ಘೋರ್ಪಡೆ, ಕೆ.ಎಸ್. ಈಳಗೇರ, ವಿ.ವಿ. ಕಡಗಿ, ಬಿ.ಎಂ. ಕುಂಬಾರ, ಕೆ.ಬಿ. ಲಕ್ಕುಂಡಿ, ಎನ್.ಪಿ. ಮಸೂದಿ, ಸಿ.ಎಸ್. ಮಠದ, ಪಿ.ಎಚ್. ನರೇಗಲ್, ಜಿ.ಎಸ್. ಪವಾರ, ಎಸ್.ಜಿ. ರಾಜಪುರೋಹಿತ, ಪಿ.ವಿ. ಶಿರೋಡಕರ್, ಪಿ.ಎನ್. ತೈಲಂಗ, ಆರ್.ವೈ. ತಳವಾರ, ಡಿ.ಬಿ. ತಾಸಿನ 51 ವರ್ಷಗಳ ತರುವಾಯ ಭೇಟಿಯಾದರು.
ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಟಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಎಫ್.ಎಸ್. ಹಿರೇಮಠ ಇದ್ದರು. ಪಿ.ಎಚ್. ನಾಗರಾಳ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

