ಸ್ಲಂ ತೆರವು ಬೇಡ: ಮನವಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 5
ಬೆಂಗಳೂರಿನ ಸ್ಥಳೀಯ ಜಯನಗರ ಎಸ್ಡಿಎಸ್ ಸಾನಿಟೋರಿಯಂ ನಿಮ್ಹಾನ್ಸ್ ಹತ್ತಿರವಿರುವ ಜೈ ಭುವನೇಶ್ವರಿ ನಗರ ಸ್ಲಂ ಪ್ರದೇಶದಲ್ಲಿ ಒಕ್ಕಲೆಬ್ಬಿಸುತ್ತಿರುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಗುರುವಾರ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಬೆಂಗಳೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜೈ ಭುವನೇಶ್ವರಿ ನಗರ ಸ್ಲಂ ಪ್ರದೇಶಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ಒಕ್ಕಲೆಬ್ಬಿಸದಂತೆ ತಡೆಯಾಜ್ಞೆ ನೀಡಿದ್ದರೂ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಉಚ್ಚನ್ಯಾಯಾಲಯದ ಆದೇಶ ಗಾಳಿಗೆ ತೂರಿ ಜೈ ಭುವನೇಶ್ವರಿ ಸ್ಲಂ ಪ್ರದೇಶ ನಿವಾಸಿಗಳ ಒಕ್ಕಲೆಬ್ಬಿಸುವ ಕಾರ್ಯಾಚರಣೆ ನಡೆಸುತ್ತಿರುವುದು ಖಂಡನೀಯ ಹಾಗೂ ಪೊಲೀಸರು ದೌರ್ಜನ್ಯದೊಂದಿಗೆ ಸ್ಲಂ ಒಕ್ಕಲೆಬ್ಬಿಸಲಾಗುತ್ತಿರುವ ವಿಷಯ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದೆ.
ಇದು ನ್ಯಾಯ ಸಮ್ಮತವಾಗಿಲ್ಲದಿದ್ದು, ಕೂಡಲೇ ಕಾರ್ಯಚರಣೆ ನಿಲ್ಲಿಸಿ ಸ್ಥಳದಲ್ಲಿ ವಾಸ ಮಾಡುತ್ತಿರುವ ಎಲ್ಲ ಕುಟುಂಬಗಳ ಪುನರ್ ಸಮೀಕ್ಷೆ ನಡೆಸಿ ಕೂಡಲೇ ಅದೇ ಸ್ಥಳದಲ್ಲಿ ಅವರಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಮನವಿಯಲ್ಲಿ ಅಗ್ರಹಿಸಿದೆ.
ನಾವು ಕೊಳಗೇರಿ ನಿವಾಸಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದು, ಕೊಳಗೇರಿ ನಿವಾಸಿಗಳಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ ಎಂಬುದನ್ನು ಸರ್ಕಾರ ಅರಿತುಕೊಂಡು ಕೂಡಲೇ ರಾಜ್ಯದಲ್ಲಿ ಯಾವುದೇ ಸ್ಲಂ ಒಕ್ಕಲೆಬ್ಬಿಸಬಾರದೆಂದು ರಾಜ್ಯ ಸರ್ಕಾರ ಎಲ್ಲ ಜಿಲ್ಲಾಧಿಕಾರಿಗೆ ಆದೇಶಿಸಬೇಕು.
ಗುಡಿಸಲು ಮುಕ್ತ ನಗರದ ಹೆಸರಲ್ಲಿ ಸ್ಲಂ ಪ್ರದೇಶಗಳನ್ನು ಎತ್ತಂಗಡಿ ಮಾಡಲಾಗುತ್ತಿದ್ದು, ಹೀಗೆ ಮುಂದುವರಿದಲ್ಲಿ ಸ್ಲಂ ಜನಾಂದೋಲನ ರಾಜ್ಯ ಸಮಿತಿ ಸಹಕಾರದೊಂದಿಗೆ ರಾಜ್ಯಾದಂತ ಉಗ್ರ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.
ಸ್ಲಂ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಶರೀಫ್ ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಪರವೀನ್ ಬಡಿಗೇರ, ಅಬೂಬಕರ ಮಕಾಂದಾರ, ಅನೀಲ ಕಾಳೆ, ಯುಸೂಫ್ ಮಜ್ಜಗಿ, ಬಸವರಾಜ ಬಿಳೆಯಲಿ, ಪರಶುರಾಮ ಕಾಳೆ, ನಾಗರಾಜ ಮುಟಗಾರ, ವಿಶಾಲಾಕ್ಷಿ ಗೌಡ್ರ, ಮರ್ದಾನಬಿ ಬಳ್ಳಾರಿ ಪದಾಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

