ಗದಗ

ಧಾರಾಕಾರ ಮಳೆ: ಆಸ್ತಿ ನಷ್ಟ

Published On :

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಸಾಕಷ್ಟು ಆವಾಂತರಗಳು ಸೃಷ್ಟಿಯಾಗಿದ್ದು, ಪಟ್ಟಣದ ಜನರನ್ನು ರಾತ್ರಿ ಇಡೀ ಆತಂಕದಲ್ಲಿ ಕಾಲ ಕಳೆಯುವಂತೆ ಮಾಡಿತ್ತು. ಹಳ್ಳದಕೇರಿ ಓಣಿಯಲ್ಲಿನ ಲಂಡಿಹಳ್ಳದ ನೀರು ತುಂಬಿ ಹರಿದು, ಸುತ್ತಲಿನ ಮನೆಗಳಿಗೆ ನುಗ್ಗಿದ ಪರಿಣಾಮ ಎಮ್ಮೆ ಕರು ಸತ್ತು, 3 ಮೇಕೆಗಳು ನೀರಿನಲ್ಲಿ ತೇಲಿ ಹೋಗಿದ್ದು, ಸುಮಾರು 20ಕ್ಕೂ ಹೆಚ್ಚು ಕೋಳಿಗಳು ಉಸಿರುಗಟ್ಟಿ ಮೃತಪಟ್ಟಿವೆ.
ಪಟ್ಟಣದಲ್ಲಿ ಶುಕ್ರವಾರ ರಾತ್ರಿ 10ರ ಸುಮಾರಿಗೆ ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಹಳ್ಳದಕೇರಿ ಓಣಿಯಲ್ಲಿನ ಲಂಡಿ ಹಳ್ಳದ ನೀರು ಸುತ್ತಲಿನ ಹಲವಾರು ಮನೆಗಳಿಗೆ ನುಗ್ಗಿದೆ. ಮಳೆ ನೀರಿನ ಜತೆ ಹಾವು, ಚೇಳುಗಳು ಮನೆಗೆ ನುಗ್ಗಿದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳು ರಾತ್ರಿಯಿಡೀ ಪರದಾಡಬೇಕಾಯಿತು.
ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮವಾಗಿ ಶಬ್ಬೀರ ಅಹ್ಮದ ತರೀನ್ ಎನ್ನುವವರ ಒಂದು ಎಮ್ಮೆ ಕರು ಸತ್ತಿದ್ದು, 3 ಮೇಕೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಬುಟ್ಟಿಯಲ್ಲಿ ಮುಚ್ಚಿಟ್ಟಿದ್ದ 25ಕ್ಕೂ ಹೆಚ್ಚು ಕೋಳಿಗಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜರುಗಿದೆ. ಲಂಡಿ ಹಳ್ಳದ ಅಕ್ಕ ಪಕ್ಕದ ಮಗೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಆಹಾರ ಧಾನ್ಯ, ಬಟ್ಟೆ-ಬರೆ ಹಾಳಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಫಕ್ಕಿರೇಶ ಭಜಂತ್ರಿ, ಸೋಮು ಬೆಲ್ಲದ, ರೇಣುಕಾ ಮರಾಠೆ, ಶಾರವ್ವ ಭಜಂತ್ರಿ, ಚನ್ನಬಸವನಗೌಡ ಉದ್ದನಗೌಡ್ರ, ಬಸವರಾಜ ಬೆಳ್ಳಟ್ಟಿಮಠ ಎಂಬವರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅಲ್ಲದೇ ಕೆಂಚಲಾಪುರ ಓಣಿಯ ಹಿರಿಯ ಪ್ರಾಥಮಿಕ ಶಾಲೆಯೊಳಗೆ ನೀರು ನುಗ್ಗಿದ ಪರಿಣಾಮ ಶಾಲಾ ಮೈದಾನ ಸಂಪೂರ್ಣ ಹೊಂಡವಾಗಿ ಮಾರ್ಪಟ್ಟಿದ್ದು, ಶಾಲೆ ಮಕ್ಕಳಿಗೂ ತೊಂದರೆ ಉಂಟಾಯಿತು. ಮಳೆ ರಭಸಕ್ಕೆ ಕೆಂಚಲಾಪುರ ಓಣಿಗೆ ಜೋಡಿಸಿರುವ ಕುಡಿಯುವ ನೀರಿನ ಪೈಪು ಕಿತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.