ಗದಗ

ಉಕ ಜನತೆಗೆ ನೀರು ಕೊಡಿ

Published On :

ನರಗುಂದ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಯ 9 ತಾಲೂಕುಗಳಿಗೆ ನೀರನ್ನು ಒದಗಿಸುವ ಕಳಸಾ-ಬಂಡೂರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ನೀರಿನ ಭಾಗ್ಯ ದೊರೆಯುವಂತೆ ಮಾಡಬೇಕಾಗಿದೆ ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ವರ್ಷದ ಅವಧಿಯಲ್ಲಿ ಆ ಭಾಗ್ಯ, ಈ ಭಾಗ್ಯ ಎನ್ನುವುದರಲ್ಲಿ ಕಾಲ ಕಳೆದಿದ್ದು ವಿಷಾದನೀಯ, ಮೊದಲು ತಾವು ಚುನಾವಣೆಯ ಸಂದರ್ಭದಲ್ಲಿ ಪಟ್ಟಣದ ಗಾಂಧಿ ಚೌಕ್‌ನಲ್ಲಿ ಬಹಿರಂಗ ಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲು ಕಳಸಾ-ಬಂಡೂರಿ ಯೋಜನೆ ಪೂರ್ಣಗೊಳಿಸಿ ಮಲಪ್ರಭಾ ಜಲಾಶಯಕ್ಕೆ ನಾಲಾಗಳನ್ನು ಜೋಡಣೆ ಮಾಡಲಾಗುವುದೆಂದು ಹೇಳಿದ್ದೀರಿ. ಈಗ ಒಬ್ಬ ಶಾಸಕನ ಮಾತು ಕೇಳಿ ಕಳಸಾ-ಬಂಡೂರಿ ಯೋಜನೆ ಅರ್ಧಕ್ಕೆ ನಿಲ್ಲಸಿ ಮಹಾದಾಯಿ ನದಿ ಜೋಡಣೆಯ ಬಗ್ಗೆ ಮಾತನಾಡುತ್ತಿರುವುದು ಈ ಭಾಗದ ಜನತೆಗೆ ಆಶ್ಚರ್ಯ ತಂದಿದೆ. ಮೊದಲು ಕಳಸಾ-ಬಂಡೂರಿ ನಾಲಾ ಹಳ್ಳಗಳಿಂದ ಸರಳವಾಗಿ ಸಿಗುವ 7 ಟಿಎಂಸಿ ನೀರು ಒದಗಿಸುವ ಕಾಮಗಾರಿ ಪೂರ್ಣಗೊಳಿಸಿ, ನಂತರ ಮಹಾದಾಯಿ ನದಿ ಜೋಡಣೆ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿ ಹೋರಾಟ ಮಾಡುತ್ತೇವೆ. ಕಾಮಗಾರಿ ವಿಷಯದಲ್ಲಿ ಪದೇ ಪದೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಕೈ ತೋರಿಸುವುದನ್ನು ಬಿಟ್ಟು ನೂತನ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಿ ಉತ್ತರ ಕರ್ನಾಟಕದ ರೈತರ ಬೇಡಿಕೆಯಾದ ಕಳಸಾ-ಬಂಡೂರಿ ಕಾಮಗಾರಿ ಪೂರ್ಣಗೊಳಸಲು ಆದ್ಯತೆ ನೀಡಬೇಕು.
ತಮಿಳುನಾಡಿನ ಸಿಎಂ ಜಯಲಲಿತಾ ಅವರ ಪ್ರಾದೇಶಿಕ ಪಕ್ಷದಿಂದ ರಾಜ್ಯಸಭೆ ಮೇಲೆ ಕಣ್ಣು ಇಟ್ಟು ಕಾವೇರಿ ವಿವಾದದಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದರೆ ರಾಜ್ಯದ ಜನತೆ ಬೀದಿಗೆ ಇಳಿಯಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಆಯಾ ರಾಜ್ಯದ ಸಮಸ್ಯೆ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದರು. ಬಸನಗೌಡ ಚಿಕ್ಕನಗೌಡ್ರ, ಚಳಪ್ಪ ನಾಯ್ಕರ, ಅಣ್ಣಪ್ಪಗೌಡ ಪಾಟೀಲ, ರುದ್ರಪ್ಪ ಗಾಣಿಗೇರ, ಬಸಪ್ಪ ಗುಡದೇರಿ, ಅಲ್ಲಿಸಾಬ ನದಾಫ್, ಗುರುಶಾಂತ ನರಸಾಪುರ, ಎಂ.ಟಿ. ಬದಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.