ಕೊಲೆ: ಮೂವರು ಆರೋಪಿಗಳ ಬಂಧನ
ಗದಗ: ತಾಲೂಕಿನ ಸೊರಟೂರ-ಹಂಗನಕಟ್ಟಿ ಗ್ರಾಮದ ಮಧ್ಯೆ ಇರುವ ಹೊಲದಲ್ಲಿ ಮೇ 24ರಂದು ಸೊರಟೂರ ಗ್ರಾಮದ ನಿವಾಸಿ ಶೇಖಪ್ಪ ನಾಗಪ್ಪ ತಳವಾರ (68) ಕೊಲೆಯಾಗಿದ್ದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮುಳಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಸುಳಿವಿನ ತೊಂದರೆಯಿಂದಾಗಿ ಆರೋಪಿಗಳ ಪತ್ತೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಅಂದು ಕೊಲೆಯಾದ ವ್ಯಕ್ತಿಯ ಮೊಬೈಲ್ ನಾಪತ್ತೆಯಾಗಿದ್ದು, ಅದರ ಸುಳಿವು ಆರೋಪಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ.
ಆರೋಪಿಗಳು ಹಾಲಗಿಮರೋಳ ಮತ್ತು ನಾದಿಗಟ್ಟಿ ಗ್ರಾಮದವರಾಗಿದ್ದಾರೆ. ಗೋವಿಂದ (ಗೋಪ್ಯಾ) ಪವಾರ, ಜೀವನ್ ಪವಾರ, ರಾಜಾ (ಸನ್ನಿ) ಪವಾರ, ಗೋಪಾಲ ತಂದೆ ಜುಂಜಪ್ಪ ಪವಾರ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂರು ಜನರನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ. ತನಿಖೆಯ ವೇಳೆಯಲ್ಲಿ ಈ ಕೊಲೆ ವ್ಯಕ್ತಿಯ ಬಳಿ ಇದ್ದ ರು. 2 ಸಾವಿರ ಹಾಗೂ ಮೊಬೈಲ್ ಫೋನ್ಗಾಗಿ ನಡೆದಿದೆ ಎನ್ನಲಾಗಿದ್ದು, ಈ ಆರೋಪಿಗಳು ಇದಕ್ಕೂ ಪೂರ್ವದಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಮುಳಗುಂದ ಪಿಎಸ್ಐ ಪರಮೇಶ್ವರ ಕವಟಗಿ, ಎಎಸ್ಐ ಐ.ಬಿ. ತಹಸೀಲ್ದಾರ, ಹವಾಲ್ದಾರ್ ದೇವೇಂದ್ರ ಬೆಂತೂರ, ಸಿಬ್ಬಂದಿಗಳಾದ ಬಸವರಾಜ ಗುಡ್ಲಾನೂರ, ಮಹಾವೀರ ಸದರನ್ನವರ, ದಾದಾಖಲಂದರ ನದಾಫ, ಬಸವರಾಜ ಬಿಳೆಹಾಳ, ಮಂಜುನಾಥ ಬಾರಕೇರ, ಫಕೀರಪ್ಪ ನಾಯ್ಕರ, ನಿಂಗಪ್ಪ ಹುಬ್ಬಳ್ಳಿ, ಪರಸಪ್ಪ ದೊಡ್ಡಮನಿ, ಶಿವಕುಮಾರ ಹೊಂಬಾಳಿಮಠ, ಎ.ಬಿ. ದಿಂಡೂರ, ಗುರುರಾಜ ಬೂದಿಹಾಳ, ಆನಂದ ದೊಡ್ಡಮನಿ ಮುಂತಾದವರು ಶ್ರಮಿಸಿದ್ದು, ಸಿಬ್ಬಂದಿಗೆ ಎಸ್ಪಿ ಕೆ.ಟಿ. ಬಾಲಕೃಷ್ಣ ಬಹುಮಾನ ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

