ಗದಗ

ಚುನಾವಣೆ: ಮದ್ಯ ಮಾರಾಟ ನಿಷೇಧ

Published On :

ಗದಗ: ವಿಧಾನಪರಿಷತ್ ಪಶ್ಚಿಮ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ಜರುಗಲು ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲೆಯ ಗದಗ-ಬೆಟಗೇರಿ, ಲಕ್ಷ್ಮೇಶ್ವರ, ಮುಂಡರಗಿ, ರೋಣ, ನರಗುಂದ, ಗಜೇಂದ್ರಗಡ, ನರೇಗಲ್, ಮುಳಗುಂದ, ಶಿರಹಟ್ಟಿ ಪಟ್ಟಣಗಳ ಹಾಗೂ ಬೆಳ್ಳಟ್ಟಿ, ಹೊಳೆಆಲೂರು, ಬೆಳವಣಕಿ, ಕೊಣ್ಣೂರು, ಲಕ್ಕುಂಡಿ ಮತ್ತು ಹುಲಕೋಟಿ ಗ್ರಾಮಗಳ ಪ್ರದೇಶಗದಲ್ಲಿ ಜೂ. 20ರಂದು ಬೆಳಗ್ಗೆ 6 ರಿಂದ ರಾತ್ರಿ 8ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕನೂರ ಪರ ಮತ ಯಾಚನೆ
ಗದಗ: ಗದಗ ತೆರಿಗೆ ಸಲಹೆಗಾರ ವಕೀಲರ ಸಂಘದ ಸಭೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಮತಯಾಚಿಸಿದರು. ಸಂಘದ ಅಧ್ಯಕ್ಷ ಪ್ರಕಾಶ ಬೆನಕನಾಳ, ಬಸವರಾಜ ಶೆಲ್ಲಿಕೇರಿ, ಎಸ್. ಮಾಟಲದಿನ್ನಿ, ಕೆ.ಜಿ. ಕೊಳ್ಳಿ ಮಾತನಾಡಿದರು. ಮುಕುಂದ ಪೋತ್ನಿಸ್, ಮೆಣಸಿನಕಾಯಿ, ಶಂಕ್ರಣ್ಣ ಮುನವಳ್ಳಿ, ಸಂಗಮೇಶ ದುಂದೂರ, ಕೆ.ಎಚ್. ಬೇಲೂರ, ಪ್ರಕಾಶ ಬೇಲಿ, ಕುಮಾರ ಶೆಲ್ಲಿಕೇರಿ, ರಾಜು ಹೊಂಗಲ್ ಇದ್ದರು.
ಮಕ್ಕಳ ಉಚಿತ ತಪಾಸಣಾ ಶಿಬಿರ ನಾಳೆ
ಗದಗ: ವಾತ್ಸಲ್ಯ ಆಸ್ಪತ್ರೆಯು ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳ ಉಚಿತ ತಪಾಸಣಾ ಶಿಬಿರವನ್ನು ಜೂ. 21ರಂದು ಶನಿವಾರ ಬೆಳಗ್ಗೆ 10 ರಿಂದ 2 ಗಂಟೆ ವರೆಗೆ ಹಮ್ಮಿಕೊಂಡಿದೆ. ಶಸ್ತ್ರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಏನಾದರೂ ಸಮಸ್ಯೆಗಳಿರುವ ಮಕ್ಕಳನ್ನು ಶಿಬಿರಕ್ಕೆ ಕರೆದುಕೊಂಡು ಬರಬಹುದು. ನವಜಾತ ಶಿಶುವಿನಿಂದ 14 ವರ್ಷದ ಒಳಗಿನ ಮಕ್ಕಳು ತಪಾಸಣೆಗೆ ಅರ್ಹತೆ ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಶಿವಪ್ರಸಾದ ಮೊ. 9900085642 ಸಂಪರ್ಕಿಸಬೇಕು ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಧೀರೇಂದ್ರ ಪಂಢರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.