ಚುನಾವಣೆಗೆ ಸಕಲ ಸಿದ್ಧತೆ
ಕನ್ನಡಪ್ರಭ ವಾರ್ತೆ, ಗದಗ, ಜೂ. 19
ಜೂ. 20ರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಜಿಲ್ಲೆಯ 26 ಮತಗಟ್ಟೆಗಳಲ್ಲಿ 13,245 ಪುರುಷ ಹಾಗೂ 4,026 ಮಹಿಳೆಯರು ಸೇರಿದಂತೆ ಒಟ್ಟು 17,271 ನೋಂದಾಯಿತ ಪದವೀಧರ ಮತದಾರರು ಮತ ಚಲಾಯಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಪಶ್ಚಿಮ ಪದವೀಧರರ ಚುನಾವಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಅವರು ಮಾಹಿತಿ ನೀಡಿದರು.
ಶೈಕ್ಷಣಿಕ ಸಂಸ್ಥೆ, ರಾಜ್ಯ ಕೇಂದ್ರ ಸರ್ಕಾರಿ ಕಚೇರಿಯ ಕಾರ್ಖಾನೆಗಳು, ಬ್ಯಾಂಕ್, ಕೈಗಾರಿಕಾ ಹಾಗೂ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅರ್ಹ ನೋಂದಾಯಿತ ಪದವೀಧರ ಮತದಾರರಿಗೆ ಜೂ. 20ರಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ.
ಪ್ರಾಶಸ್ತ್ಯ ಸೂಚಿಸುವ ಮೂಲಕ ಮತ ಚಲಾಯಿಸಲು ಆಯೋಗ ಸೂಚಿಸಿದ 13 ಗುರುತಿನ ಚೀಟಿಗಳ ಪೈಕಿ ಒಂದನ್ನು ಮತದಾರರು ಮತಗಟ್ಟೆ ಅಧಿಕಾರಿ ಮುಂದೆ ಹಾಜರುಪಡಿಸುವುದು ಕಡ್ಡಾಯವಾಗಿದ್ದು, ಮತಗಟ್ಟೆಯಲ್ಲಿ ಈ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವಿಡಿಯೋಗ್ರಫಿ ಮಾಡಲಾಗುವುದು.
ಗುರುತಿನ ಚೀಟಿ: ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ರಾಜ್ಯ, ಕೇಂದ್ರ, ಸಾರ್ವಜನಿಕ ಖಾಸಗಿ ಉದ್ದಿಮೆ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ಮೇ 31ರ ಮುಂಚೆ ತೆರೆದಿರುವ ಬ್ಯಾಂಕ್, ಅಂಚೆ ಭಾವಚಿತ್ರವುಳ್ಳ ಪಾಸ್‌ಬುಕ್, ಪಾನ್ ಕಾರ್ಡ್, ಆಧಾರ ಕಾರ್ಡ್, ಎನ್‌ಪಿಆರ್, ಆರೋಗ್ಯ ವಿಮಾ ಯೋಜನೆಗಳ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿ, ಶಸ್ತ್ರ ಪರವಾನಗಿ, ಅಂಗವಿಕಲರ ಪ್ರಾಧಿಕಾರದ ಅಥವಾ ಸಿಎಸ್‌ಡಿ ಕ್ಯಾಂಟೀನ ಪರವಾನಗಿ ಇವುಗಳಲ್ಲಿ ಒಂದನ್ನು ನೋಂದಾಯಿತ ಮತದಾರರು ಹಾಜರುಪಡಿಸುವುದು ಕಡ್ಡಾಯ.
ನೋಟಾ: ಮತದಾನ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಮತ ಹಾಕುವ ಇಚ್ಛೆ ಇಲ್ಲದವರು ಅವರ್ಯಾರಿಗೂ ಮತವಿಲ್ಲ ಎನ್ನುವುದಕ್ಕೂ ನೋಟಾ ಮುಂದೆ ಪ್ರಾಶಸ್ತ್ಯ ಮತ ಚಲಾಯಿಸು ಮೂಲಕ ತಿಳಿಯಪಡಿಸಲು ಈ ಬಾರಿ ಆಯೋಗ ಅವಕಾಶ ನೀಡಿದೆ.
ಚುನಾವಣಾ ಸಿಬ್ಬಂದಿ: ಜಿಲ್ಲೆಯಲ್ಲಿನ 26 ಮತಗಟ್ಟೆಗಳಿಗೆ ತಲಾ ಓರ್ವ ಮತಗಟ್ಟೆ ಅಧ್ಯಕ್ಷ ಅಧಿಕಾರಿ ಜತೆಗೆ 3 ಜನರಂತೆ ಒಟ್ಟು 108 ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಮತದಾನ ಕಾರ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ.
ತಲಾ ಮತಗಟ್ಟೆಯಲ್ಲಿ ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ 21 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಈ ಬಾರಿ 26 ಮತಗಟ್ಟೆ ಸ್ಥಾಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

