ಶಿವಾಜಿ ಜಯಂತ್ಯುತ್ಸವ
ಮುಳಗುಂದ: ಸನಾತನ ಹಿಂದೂ ಧರ್ಮವನ್ನ ಉಳಿಸುವಲ್ಲಿ ಒತ್ತು ಕೊಟ್ಟು ಹಿಂದೂ ಧರ್ಮವನ್ನು ಉತ್ತಮ ರೀತಿಯಲ್ಲಿ ಬೆಳೆಸಿದ ಚರಿತ್ರಾರ್ಹ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವನ್ನು ಪಟ್ಟಣದಲ್ಲಿ ಈಚೆಗೆ ಅದ್ಧೂರಿಯಿಂದ ಆಚರಿಸಲಾಯಿತು. ಪಟ್ಟಣದ ರೇಣುಕಾದೇವಿ ದೇವಸ್ಥಾನದಿಂದ ಡೊಳ್ಳಿನಮೇಳ ಹಾಗೂ ಜೋಡು ಎತ್ತಿನೊಂದಿಗೆ ಪ್ರಾರಂಭವಾದ ಭಾವಚಿತ್ರದ ಮೆರವಣಿಗೆ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಪಟ್ಟಣದ ಮರಾಠ ಸಮಾಜದ ಮುಖಂಡರಾದ ಯಲ್ಲಪ್ಪ ಶಿರಹಟ್ಟಿ, ಚನ್ನಪ್ಪ ನಿಂಗೋಜಿ, ತಿರಕಪ್ಪ ಸಂಭೋಜಿ, ಬಿ.ಎಲ್. ಜಾಧವ, ಗಂಗಪ್ಪ ಜಾಧವ, ಪ್ರಕಾಶ ದುರಗಾರ, ರಾಮಣ್ಣ ನಿಂಗೋಜಿ, ಬಸವರಾಜ ನಿಂಗೋಜಿ, ಮುದಕಪ್ಪ ಆರೇರ ಸಮುದಾಯದ ಇತರರು ಮೆರವಣೆಗೆಯಲ್ಲಿ ಭಾಗವಹಿಸಿದ್ದರು.
ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮುಳಗುಂದ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ಲಬ್ನ ಆಶ್ರಯದಲ್ಲಿ ಗುರುವಾರ 14ನೇ ಬಾರಿಗೆ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಪಟ್ಟಣದ ಎಸ್ಜೆಜೆಎಂ ಹೈಸ್ಕೂಲ್ ಮೈದಾನದಲ್ಲಿ ಪ್ರಾರಂಭಿಸಲಾಯಿತು. ಟೂರ್ನಿಗೆ ಅಮರ ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ವಿಜಯ ನೀಲಗುಂದ ಚಾಲನೆ ನೀಡಿದರು. ಟೂರ್ನಿಯಲ್ಲಿ ಆಹ್ವಾನಿತ 12 ತಂಡಗಳು ಭಾಗವಹಿಸಿವೆ. ಈ ಸಂದರ್ಭದಲ್ಲಿ ಸಂಘಟಕ ರಮೇಶ ಮ್ಯಾಗೇರಿ, ಪ್ರಕಾಶ ನಡುಗೇರಿ, ವಿನಯ ಮ್ಯಾಗೇರಿ, ಚನ್ನವೀರ ನಡುಗೇರಿ, ಶಿವರಾಜ ಜಾಲಣ್ಣವರ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

