ಗದಗ

ಬಸವ ತತ್ವಗಳು ಅನುಕರಣೀಯ

Published On :

ಗದಗ: ಬಸವೇಶ್ವರರು ಜಗದ ಬೆಳಕು. ಬಸವತತ್ವಗಳು ಎಲ್ಲರಿಗೂ ಅನುಕರಣೀಯ ಎಂದು ಸಿಂಧನೂರಿನ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ಶುಕ್ರವಾರ ನಗರದ ಜ. ತೋಂಟದಾರ್ಯ ಮಠದಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ ಭಾವಚಿತ್ರ ಮೆರವಣಿಗೆ ಹಾಗೂ ವಿವಿಧ ಸಮಕಾಲೀನ ಶರಣರ ಅಲಂಕೃತ ಭಾವಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವತತ್ವ ಅನುಸರಣೆ ಸಮಾಜ, ಜಾತಿ, ಧರ್ಮಕ್ಕೆ ಸೀಮಿತವಾಗಬಾರದು. ಮನುಕುಲದ ಏಳ್ಗೆ ಹಾಗೂ ಸಮಾನತೆ, ಪ್ರಜ್ಞಾವಂತಿಕೆ ಕಾಯಕ ದಾಸೋಹ ತತ್ವಗಳು ಎಲ್ಲ ಸಮುದಾಯದ ಏಳ್ಗೆಗೆ ಕಾಯಕಲ್ಪ ನೀಡಬಲ್ಲ ಶಕ್ತಿ ಹೊಂದಿವೆ ಎಂದರು. ಗುಲ್ಬರ್ಗದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಮಾರುತಿರಾವ್ ಮಾಳೆ ಪಾಲ್ಗೊಂಡಿದ್ದರು. ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಸಮಗಾರ ಹರಳಯ್ಯ, ನೂಲಿಯ ಚಂದಯ್ಯ, ಹಡಪದ ಅಪ್ಪಣ್ಣ, ಮೇದಾರ ಕೇತಯ್ಯ, ಲಿಂಗಾಯತ ವೀರಶೈವ ಮಹಾಸಭಾ, ಕದಳಿ ವೇದಿಕೆ, ಯಳಂದೂರು ಬಸವಲಿಂಗ ಯೋಗಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಬಸವಕೇಂದ್ರ ಕಳಸಾಪುರ, ಅಕ್ಕನ ಬಳಗದ ಪದಾಧಿಕಾರಿಗಳು, ಸದಸ್ಯರು, ಪ್ರತಿನಿಧಿಗಳು ಹಾಗೂ ಬಸವಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಣ್ಣಿಗೇರಿಯ ಬಸವೇಶ್ವರ ಕರಡಿಮಜಲು, ಅಡವಿಸೋಮಾಪುರ ಗ್ರಾಮದ ಕೆಂಚಮ್ಮದೇವಿ ಭಜನಾ ಮಂಡಳಿ, ಚಿಕ್ಕಮಗಳೂರು ಜಿಲ್ಲೆಯ ಸುಪ್ರಸಿದ್ಧ ಮಹಿಳಾ ವೀರಗಾಸೆ ತಂಡ, ಬಸವೇಶ್ವರ ಶಾಲೆ ಮಕ್ಕಳಿಂದ ನಡೆದ ಅನುಭವ ಮಂಟಪದ ರೂಪಕ ಹಾಗೂ ಐಟಿಐ ವಿದ್ಯಾರ್ಥಿಗಳು ಸೈನಿಕ ವೇಷಧಾರಿಗಳಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶ್ರೀಮಠದಿಂದ ಪ್ರಾರಂಭವಾದ ಮೆರವಣಿಗೆಯು ಸ್ಟೇಷನ್ ರಸ್ತೆ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಬಸವೇಶ್ವರ ವೃತ್ತ, ಕೆ.ಎಚ್. ಪಾಟೀಲ ವೃತ್ತ, ಮಾಳಶೆಟ್ಟಿ ವೃತ್ತ, ಹಳೆ ಬಸ್ ನಿಲ್ದಾಣದ ಮುಂದಿನ ರಸ್ತೆ ಮೂಲಕ ರೋಟರಿ ವೃತ್ತ, ಡಾ. ಅಂಬೇಡ್ಕರ್ ರಸ್ತೆ, ಮಹಾತ್ಮಾ    ಗಾಂಧಿ ವೃತ್ತದಿಂದ ಶ್ರೀಮಠಕ್ಕೆ ಆಗಮಿಸಿ        ಸಮಾವೇಶಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.