ಆಡಂಬರದ ವಿವಾಹ ಬೇಡ: ಶ್ರೀಗಳು
ರೋಣ: ಅನವಶ್ಯಕ ದುಂದು ವೆಚ್ಚದ ಆಡಂಬರಕ್ಕೆ ಕಡಿವಾಣ ಹಾಕಬೇಕು ಎಂದು ಚಳಗೇರಿ ಮಠದ ವೀರೂಪಾಕ್ಷಲಿಂಗಯ್ಯ ಶ್ರೀಗಳು ಹೇಳಿದರು.
ಅವರು ಶನಿವಾರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬಸವೇಶ್ವರ ಜಾತ್ರಾ ಮಹೋತ್ಸವ, ಬಸವ ಜಯಂತಿ ಮತ್ತು 40ನೇ ವರ್ಷದ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಮಂಗಲೋತ್ಸವ ಅಂಗವಾಗಿ ಜರುಗಿದ ಸರ್ವ ಧರ್ಮ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ವಿ.ಎಸ್. ಪಸಾರದ ಮಾತನಾಡಿದರು. ವೀರೂಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. 9 ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಕೆ.ಆರ್. ಪಿಂಜಾರ, ಬಿ.ಎಸ್. ರಡ್ಡೇರ, ಕೆ.ಡಿ. ಪಾಟೀಲ, ಜಿ.ಎ. ಪಟ್ಟಣಶೆಟ್ಟಿ, ಗ್ರಾಪಂ ಸದಸ್ಯ ಬಸವರಡ್ಡಿ ರಡ್ಡೇರ, ರತ್ನಾ ಪಟ್ಟಣಶೆಟ್ಟಿ, ಯಮನೂರಪ್ಪ ಮಾದರ, ಶರಣಪ್ಪ ಕಂಬಳಿ ಉಪಸ್ಥಿತರಿದ್ದರು. ಎಲ್.ಎಫ್. ಘೋರ್ಪಡೆ ಸ್ವಾಗತಿಸಿದರು. ಶಿವು ಜುಮ್ನಗೌಡ್ರ ನಿರ್ವಹಿಸಿ, ವಂದಿಸಿದರು.
--
ಸನ್ಯಾಸ ದೀಕ್ಷೆ: ಗೌತಮಚಂದರ ಮೆರವಣಿಗೆ
ಗಜೇಂದ್ರಗಡ: ಮೇ 11ರಂದು ಹುಬ್ಬಳ್ಳಿಯಲ್ಲಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ ಸ್ಥಳೀಯ ಉದ್ಯಮಿ ಗೌತಮಚಂದ ಸುಖರಾಜ ಬಾಗಮಾರ ಅವರ ಹುಟ್ಟೂರಿನ ಸರ್ವ ಸಮುದಾಯದ ಜನ ಭಾನುವಾರ ಭಾವಪೂರ್ಣ ಮೆರವಣಿಗೆ ನಡೆಸಿದರು.
ಪಟ್ಟಣದಲ್ಲಿ ಜನಿಸಿ, ಇಲ್ಲಿಯೆ ಶೈಕ್ಷಣಿಕ ಬದುಕನ್ನು ಸವೆಸಿ, ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದ ಗೌತಮಚಂದ ಸುಖರಾಜ ಬಾಗಮಾರ ಅವರ ಹುಟ್ಟೂರಿನ ಜನ ನೋವಿನಿಂದಲೇ ಬೀಳ್ಕೊಟ್ಟರು. ಸ್ಥಳೀಯ ಜೈನ ಮಂದಿರದಿಂದ ಪ್ರಾರಂಭವಾದ ಅಲಂಕೃತ ಮೆರವಣಿಗೆಯಲ್ಲಿ ಗೌತಮಚಂದ ಸುಖರಾಜ ಬಾಗಮಾರ ಅವರಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರು, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬಿಜಾಪುರ, ಸೊಲ್ಲಾಪುರ, ಮುಂಬೈ, ಕೊಲ್ಲಾಪುರ, ಬೆಳಗಾವಿ, ಅಲ್ಲದೆ ನೆರೆಯ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಜೈನ ಸಮಾಜ ಭಾಂದವರು ಆಗಮಿಸಿದ್ದರು. ಬಾಗಮಾರ ಅವರ ವೈರಾಗ್ಯ, ತ್ಯಾಗದ ಬದುಕಿಗೆ ಬಾಲ್ಯ ಸ್ನೇಹಿತರು, ಒಡನಾಡಿಗಳು ಸೆಲೂಟ್ ಹೊಡೆದರು. ನಾನಾ ಸಂಗೀತ ವಾದ್ಯ-ವೈಭವದ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಸಂಚರಿಸಿ, ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಸಮಾರೋಪವಾಯಿತು.
ಗಜೇಂದ್ರಗಡ ವಾಣಿಜ್ಯ ನಗರಿಯಾಗಿ ಬೆಳೆಯುವಲ್ಲಿ ಬಾಗಮಾರ ಕುಟುಂಬದ ಕೊಡುಗೆ ಗಣನೀಯ. ಅಂತಹ ಪ್ರತಿಷ್ಠಿತ ಕುಟುಂಬದ ಹಿರಿಯ ಗೌತಮಚಂದ ಸುಖರಾಜ ಬಾಗಮಾರ ಅವರ ಇಬ್ಬರು ಪುತ್ರಿಯರು ಈಗಾಗಲೇ ಜೈನದೀಕ್ಷೆ ಸ್ವೀಕರಿಸಿ, ಧರ್ಮ ಕಾರ್ಯಕ್ಕೆ ಮುಂದಾಗಿದ್ದಾರೆ. ಮೆರವಣಿಗೆಯಲ್ಲಿ ರಿಕಬ್ ಚಂದ ಬಾಗಮಾರ, ಅಶೋಕ ಬಾಗಮಾರ, ಶ್ರೇಯಾಸ್ಕುಮಾರ, ಅಜಿತ ಬಾಗಮಾರ, ವರ್ಧಮಾನ ಬಾಗಮಾರ, ಮಹಾವೀರ ಬಾಗಮಾರ, ಅರಿಹಂತ ಬಾಗಮಾರ, ಶೀತಲ್ಕುಮಾರ, ಸುವಿಧ ಕುಮಾರ, ಸಂತೋಷ ಮಂತ್ರಿ, ಆನಂದ ಮಂತ್ರಿ, ವಲ್ಲಬದಾಸ ಬಾಯೇತೆ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

