ಮಹಾರಥೋತ್ಸವ
ರೋಣ: ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಬಸವ ಜಯಂತಿ ಹಾಗೂ ಗ್ರಾಮದ ನಂದಿಬಸವೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಶುಕ್ರವಾರ ಸಂಜೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಕೌಜಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಡಿಕ್ಕಿ: ಪಾದಚಾರಿ ಸಾವು
ಗದಗ: ರಸ್ತೆ ಎಡಬದಿಯಲ್ಲಿ ಹೊರಟಿದ್ದ ಪಾದಾಚಾರಿಯೊಬ್ಬರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಮುಳಗುಂದ ರಸ್ತೆಯ ಕಣವಿ ಕ್ರಾಸ್ ಹತ್ತಿರ ಶನಿವಾರ ರಾತ್ರಿ ಸಂಭವಿಸಿದೆ. ಮೃತರನ್ನು ಕಣವಿ ಗ್ರಾಮದ ನಿವಾಸಿ ಶಿವಪುತ್ರಪ್ಪ ಕೋಳಿವಾಡ (46) ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದಿರುವ ದಿಚಕ್ರ ವಾಹನದ ಆರೋಪಿ ವಿಳಾಸ ತಿಳಿದು ಬಂದಿಲ್ಲ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಪಲ್ಟಿ: ಓರ್ವ ಸಾವು
ಗದಗ: ಗಜೇಂದ್ರಗಡ ಕಡೆಯಿಂದ ಮುಶಿಗೇರಿ ಕಡೆಗೆ ಅತಿ ವೇಗದಿಂದ ಹೊರಟಿದ್ದ ಟಿವಿಎಸ್ ವಾಹನ ಸವಾರನಿಗೆ ಯಾವುದೋ ಪ್ರಾಣಿ ಅಡ್ಡ ಬಂದಿದ್ದರಿಂದ ಸವಾರನಿಗೆ ವಾಹನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಾಹನ ಪಲ್ಟಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಹಿಂಬಂದಿ ಸವಾರ ಗಾಯಗೊಂಡಿರುವ ಘಟನೆ ನಡೆದಿದೆ. ಮೃತನನ್ನು ಹನುಮಂತಪ್ಪ ಮೋಹಿತೆ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರರಾಗಿದ್ದ ಈತನ ಮಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದು ಮಹಿಳೆ ಸಾವು
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮ ಹೊರವಲಯದ ಹಾಳು ಬಾವಿಯಲ್ಲಿ ಮಹಿಳೆಯೊಬ್ಬಳು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆ ಹೆಸರು ಪತ್ತೆಯಾಗಿಲ್ಲ. ಮಹಿಳೆ ಸುಮಾರು 48-50 ವರ್ಷದವರಿದ್ದು, ಸಾದಾಗಪ್ಪು ಮೈಬಣ್ಣ, ದುಂಡುಮುಖ ಮೈಮೇಲೆ ಕೇಸರಿ ಜಂಪರ್, ತಿಳಿ ಚಾಕಲೇಟ್ ಕೆಂಪು ಬಿಳಿ ಹಸಿರು ಡಿಸೈನ್ ಇದ್ದ ಸೀರೆ ಹಾಗೂ ತಿಳಿ ಹಳದಿ ಲಂಗಾ ಧರಸಿದ್ದು, ಮೃತಳು ಮಾನಸಿಕವಾಗಿ ನೊಂದವಳು ಅಥವಾ ಭಿಕ್ಷುಕಿಯೂ ಇರಬಹುದು ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

