ಗದಗ

ಅಹಿಂಸೆಯ ಜೀವನ ಸಾಗಿಸಿ: ಬಾಗಮಾರ

Published On :

ಗಜೇಂದ್ರಗಡ: ಮಾನವ ಜನ್ಮ ಲಭಿಸುವುದು ಅಪರೂಪ. ಜಪ, ತಪ, ಶಾಂತಿ, ಸತ್ಯ, ಅಹಿಂಸೆಯ ಮೂಲಕ ಜೀವನ ಸಾಗಿಸಿದರೆ ಮೋಕ್ಷ ಲಭ್ಯವಾಗಿ ಕಷ್ಟಗಳಿಂದ ದೂರವಿರಬಹುದು ಎಂದು ಗೌತಮಚಂದ್ ಬಾಗಮಾರ ಹೇಳಿದರು.
ಅವರು ಸ್ಥಳಿಯ ಭಗವಾನ ಮಹಾವೀರ ಜೈನ್ ಸಮಾಜ ವತಿಯಿಂದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜೈನ ಸಮಾಜ ಬಾಂಧವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸ್ಥಳೀಯ ಮಹಾವೀರ ಜೈನ ಸಮಾಜ ಅಧ್ಯಕ್ಷ ಅಶೋಕ ಬಾಗಮಾರ ಮಾತನಾಡಿ, ಯುವಕರು ಅತ್ಯಂತ ವಿರಳಾತೀತ ಕಠೋರ ವೃತಾಚರಣೆಯತ್ತ ಚಿತ್ತ ಹರಿಸುವುದು ಅಗತ್ಯ ಎಂದರು.  ಮಾಜಿ ಸಚಿವ ಕಳಕಪ್ಪ ಬಂಡಿ, ಡಾ. ಬಿ.ವ್ಹಿ. ಕಂಬಳ್ಯಾಳ, ರಂಜನಾ, ಸಾಕಲೇಜ, ಅರ್ಚನಾ, ಗಾಧಿಯಾ, ಸಂಜನಾ ಬಾಗಮಾರ, ಶೀತಲ ಬಾಗಮಾರ, ಮಹಾವೀರ ಬಾಗಮಾರ, ಕಿಶನಲಾಲ್ ಬಾಗಮಾರ ಮಾತನಾಡಿದರು. ರಿಕಬ್ಚಂದ್ ಬಾಗಮಾರ, ಅಜೀತ ಬಾಗಮಾರ, ವರ್ಧಮಾನ ಬಾಗಮಾರ, ಕಲ್ಲಪ್ಪ ಸಜ್ಜನ, ವೀರಣ್ಣ ಸೊನ್ನದ, ಡಿ.ಎಚ್. ಬಳೂಟಗಿ, ವಿರೂಪಣ್ಣ ಇಂಡಿ, ನಾಗಪ್ಪ ದಿವಟರ ಅರಿಹಂತ ಬಾಗಮಾರ ಉಪಸ್ಥಿತರಿದ್ದರು.


ಶಿರಹಟ್ಟಿ ತಾಪಂ ಅಧಿಕಾರಿ ಕ್ರಮ ಖಂಡಿಸಿ ಪ್ರತಿಭಟನೆ


ಕನ್ನಡಪ್ರಭ  ವಾರ್ತೆ, ಶಿರಹಟ್ಟಿ, ಮೇ 5
ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟಿಸಿಕೊಂಡ ತಾಲೂಕಿನ ಬಿಜ್ಜೂರು ಗ್ರಾಮದ 29 ಫಲಾನುಭವಿಗಳಿಗೆ ವಿತರಣೆಯಾದ ಚೆಕ್ನ ಹಣ ನೀಡದಂತೆ ತಡೆಹಿಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕ್ರಮ ಖಂಡಿಸಿ ಮಹಿಳಾ ಫಲಾನುಭವಿಗಳು ದಿಢೀರ್ ಪ್ರತಿಭಟನೆ  ನಡೆಸಿದರು.
ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜೂರ ಗ್ರಾಮದ 29 ಜನ ಅರ್ಹ ಫಲಾನುಭವಿಗಳು ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳನ್ನು ಸಾಲ ಮಾಡಿ ಬುನಾದಿ ಕಟ್ಟಿಕೊಂಡಿದ್ದು, ಈ ಫಲಾನುಭವಿಗಳಿಗೆ ತಾಲೂಕು ಪಂಚಾಯಿತಿಯಲ್ಲಿ ಕಾನೂನು ಬದ್ಧವಾಗಿ ಜಿಪಿಎಸ್ ಮಾಡಿಸಿದ್ದು, ರು. 75,000 ಮಂಜೂರಾಗಿದ್ದು, ಚೆಕ್ ಮಾರ್ಚ್ 4ರಂದು ವಿತರಿಸಲಾಗಿದೆ. ಈ ಮಹಿಳಾ ಫಲಾನುಭವಿಗಳು ಸೋಮವಾರ ಬ್ಯಾಂಕಿಗೆ ಚೆಕ್ ಹಾಜರಪಡಿಸಲು ಬಂದಾಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣ ಬ್ಯಾಂಕ್ಗೆ ಬಂದು ಫಲಾನುಭವಿಗಳಿಗೆ ಹಣ ನೀಡದಂತೆ ಲಿಖಿತ ಪತ್ರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಫಲಾನುಭವಿಗಳು ತಾಪಂಗೆ ಬಂದು ಅಧಿಕಾರಿಗಳ ಕ್ರಮದ ವಿರುದ್ಧ ಹರಿಹಾಯ್ದು ಗ್ರಾಪಂ ಸದಸ್ಯ ಮಹೇಶ ಮೇಟಿ, ಜಿಲ್ಲಾ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಜಾನು ಲಮಾಣಿ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದರು. ನಮ್ಮ ಪ್ರಾಣ ಹೋದರೂ  ಚಿಂತೆಯಿಲ್ಲ, ಕೂಲಿ ಕೆಲಸ ಬಿಟ್ಟು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದು, ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ನಿಮ್ಮನ್ನು ಕೊಠಡಿಯಿಂದ ಹೊರಗಡೆ ಬಿಡಲ್ಲ ಎಂದು ಫಲಾನುಭವಿಗಳು ಅಧಿಕಾರಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿದರು. ಅಧಿಕಾರಿ ಎಷ್ಟೇ ಮನವಿ ಮಾಡಿಕೊಂಡರೂ ಫಲಾನುಭವಿಗಳು ಕೊಠಡಿ ಬಾಗಿಲಲ್ಲಿಯೇ ಮಕ್ಕಳನ್ನು ಮಲಗಿಸಿ ಪ್ರತಿಭಟನೆ ನಡೆಸಿದರು.
ಅಧಿಕಾರಿ ಸಬೂಬು ಹೇಳಲು ಯತ್ನಿಸಿದಾಗ ಫಲಾನುಭವಿಗಳು ಯಾವ ಕಾರಣಕ್ಕಾಗಿ ಮತ್ತು ಯಾರ ಒತ್ತಡದಿಂದ ಹಣ ನೀಡದಂತೆ ತಡೆ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಕೊಂಚಿಗೇರಿ ಗ್ರಾಪಂ ಪಿಡಿಒ ಅನಧಿಕೃತವಾಗಿ ಗೈರ ಹಾಜರಾಗಿದ್ದು, ಅವನು ಅಮಾನತುಗೊಂಡಿದ್ದಾನೆ. ಈ ವೇಳೆ ನೀಡಿರಬಹುದಾದ ಶಂಕೆ ಇದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಿ 3 ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದರೂ ಫಲಾನುಭವಿಗಳು ಪಟ್ಟುಸಡಿಲಿಸಿದೇ ವಾರವಾದರೂ ಸರಿ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಮೇಲಧಿಕಾರಿಗಳಿಂದಾಗಲಿ, ಸರ್ಕಾರದಿಂದಾಗಲಿ ಫಲಾನುಭವಿಗಳಿಗೆ ಹಣ ನೀಡದಂತೆ ಲಿಖಿತ ಪತ್ರ ನೀಡಲು ಯಾವುದೇ ಆದೇಶ ಬಂದಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಉದ್ದೇಶ ಪೂರ್ವಕವಾಗಿಯೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತೊಂದರೆ ಕೊಡುತ್ತಿದ್ದು, ಯಾವುದಕ್ಕೂ ಬೆದರದೇ ಧರಣಿ ನಡೆಸಲು ತಿರ್ಮಾನಿಸಿದೆ. ಈ ಸಮಯದಲ್ಲಿ ನಮ್ಮ ಜೀವಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಅಧಿಕಾರಿಯೇ ನೇರ ಹೊಣೆಗಾರರೆಂದು ಎಚ್ಚರಿಸಿದ್ದಾರೆ.
ನಾಗವ್ವ ಹಾಲಪ್ಪ ಸುಗ್ನಳ್ಳಿ, ಲಕ್ಷ್ಮವ್ವ ಮೈಲಾರಪ್ಪ ದಂಡಿನ, ಗಂಗವ್ವ ಮಂಗಲಕರ, ಸಾವಕ್ಕ ಹಾಲಣ್ಣವರ, ನಿಂಗವ್ವ ಶೀರನಹಳ್ಳಿ, ಮಂಗಲವ್ವ ಹುರಳಿ, ಶಾಂತವ್ವ ಬಟ್ಟೂರ, ಮುದಕವ್ವ ಬಟ್ಟೂರ, ಪಾತಿಮಾ ನದಾಫ್, ವಿಜಯಲಕ್ಷ್ಮಿ ಹಳ್ಳೆಮ್ಮನವರ, ಹನುಮವ್ವ ನಾಗಪ್ಪ ಹಳ್ಳೆಮ್ಮನವರ, ದ್ರಾಕ್ಷಾಯಿಣಿ ಬೆಳ್ಳಟ್ಟಿ, ಕೆಂಚವ್ವ ಹಳ್ಳೆಮ್ಮನವರ, ಶಾಂತವ್ವ ಸುಗ್ನಳ್ಳಿ, ಯಲ್ಲವ್ವ ಸುಗ್ನಳ್ಳಿ, ಪ್ರಭಾವತಿ ತೋರಾಥ್, ನಾಗವ್ವ ನರಗುಂದ, ಕಲಾವತಿ ತೋರಾಥ್, ಮಾದೇವಕ್ಕ ಅರಿಷಣದ, ಹುಲಗೆಮ್ಮ ಹುರಳಿ, ಹಾಲಪ್ಪ ಕರಡಿ, ಚನಬಸಪ್ಪ ಗುಡಸಲಕೊಪ್ಪ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.