ಕೋಲಾಟ ಕಲೆ ಉಳಿಸಿ: ತಳವಾರ
ರೋಣ: ಮೂಲ ಜನಪದ ಕಲೆಯಾದ ಕೋಲಾಟ ಸರಿಯಾದ ಪೋಷಣೆಯಿಲ್ಲದೇ ಅವನತಿ ಹೊಂದುತ್ತಿದ್ದು, ಇದನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಆ ದಿಸೆಯಲ್ಲಿ ಯುವ ಜನತೆ ಪಾತ್ರ ಮುಖ್ಯ ಎಂದು ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಈಚೆಗೆ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಕುಮಾರೇಶ್ವರ ಗೆಳೆಯರ ಬಳಗ, ವೀರಭದ್ರೇಶ್ವರ ಯುವಕ ಮಂಡಳ, ಶಿವಶಕ್ತಿ ಸ್ಪೋರ್ಟ ಕ್ಲಬ್ ಮತ್ತು ಮಾರುತೇಶ್ವರ ಯುವಕ ಮಂಡಳಗಳ ಸಂಯುಕ್ತಾಶ್ರಯದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಕೋಲಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಲೋಕನಗೌಡ ಗೌಡರ ಮಾತನಾಡಿ, ಪಾಶ್ಚಿಮಾತ್ಯ ವ್ಯಾಮೋಹಕ್ಕೊಳಗಾಗಿ ನಾವಿಂದು ದೇಶಿಯ ಸಂಸ್ಕೃತಿ, ಮೂಲ ಜಾನಪದ ಕಲೆ, ಆಚಾರ, ವಿಚಾರ, ಸಂಪ್ರದಾಯ ಮರೆಯುತ್ತಿದ್ದೇವೆ. ಡೊಳ್ಳು ಕುಣಿತ, ಕಡ್ಲಿ ಮಜಲು, ಭಜನೆ ಪದ, ಗೀಗೀ ಪದ, ಲಾವಣಿ ಪದ ಮುಂತಾದ ಮೂಲ ಜನಪದ ಸೋಗಡು ನಮ್ಮಿಂದ ಮರೆಯಾಗುತ್ತಿದೆ. ಆದ್ದರಿಂದ ಜನಪದ ಉಳುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. ಗ್ರಾಪಂ ಸದಸ್ಯ ಸಿ.ಎಸ್. ವಸ್ತ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿ.ಸಿ. ಪೊಲೀಸ್ಪಾಟೀಲ, ಪಿ.ವಿ. ಜಕ್ಕನ್ನವರ, ಬಿ.ವಿ. ಗೌಡರ, ಸಿ.ಬಿ. ಕುದರಿ, ಶಿವಪ್ಪ ಗಾಣಿಗೇರ, ನೀಲಪ್ಪ ತಲಬಟ್ಟಿ, ಬಸನಗೌಡ ಕರಿಗೌಡ್ರ, ವಿನೋದ ವಕ್ಕರ, ಶಂಕ್ರಪ್ಪ ತಾಳಿ, ಶಂಕರಗೌಡ ಗೌಡರ, ವೀರನಗೌಡ ಪೊಲೀಸ್ಪಾಟೀಲ, ಮುನ್ನಾ ದೊಡ್ಡಮನಿ, ವಿರೂಪಾಕ್ಷ ಕತ್ತಿ, ಬದ್ರಪ್ಪ ಖ್ಯಾಡದ, ಲಕ್ಷ್ಮಣ ಮಣ್ಣೂರ, ಆಕಾಶ ಗೌಡರ, ಶ್ರೀಕಾಂತ ಗುರಿಗಾರ ಇದ್ದರು. ಸಿದ್ದು ಗುಡಿಮನಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

