ಸೇವಾಲಾಲನಗರ ಸ್ವಚ್ಛತೆ ಮಾಡಿ
ಗಜೇಂದ್ರಗಡದ ಸೇವಾಲಾಲ ಸಮುದಾಯ ಜನ ವಾಸಿಸುವ ಬಡಾವಣೆಯಲ್ಲಿ ಅನೈರ್ಮಲ್ಯ, ಅಶುಚಿತ್ವ ರಾರಾಜಿಸುತ್ತಿದೆ. ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾದುವ ದುಸ್ಥಿತಿ ಬಂದೊದಗಿದೆ ಎಂದು ಪುರಸಭೆ ಆಡಳಿತ ವಿರುದ್ಧ ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ 10ನೇ ವಾರ್ಡಿಗೊಳಪಡುವ ಲಂಬಾಣಿ ತಾಂಡಾದ ಮುಖ್ಯ ರಸ್ತೆ ಚರಂಡಿ ಕೊಳಚೆ ನೀರು ರಸ್ತೆಯಲ್ಲಿ ಹರಿದು ಗಟಾರಾಗಿ ಮಾರ್ಪಟ್ಟಿದೆ. ಕಸ ವಿಲೇವಾರಿಯಾಗದೇ ಕಸದ ಗುಡ್ಡೆ ರಸ್ತೆ ಮೇಲೆಲ್ಲ ಚಲ್ಲಾಡಿದ ಪರಿಣಾಮ ಜನಸಾಮಾನ್ಯರು ಸಂಚರಿಸುವುದು ದುಸ್ತರವಾಗಿದೆ. ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ತಾಂಡಾದ ಕೆಲ ಭಾಗದಲ್ಲಿ ಚರಂಡಿ ಸುಚಿತ್ವಗೊಳ್ಳದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ ಎಂದು ನಿವಾಸಿಗಳು ದೂರುತ್ತಾರೆ.
ಪುರಸಭೆ ಆಡಳಿತ ತಮಗೆ ಬೇಕಾದ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಒದಗಿಸುತ್ತಾರೆ. ಆದರೆ, ನಮ್ಮ ಬಡಾವಣೆಯ ಸಮಸ್ಯೆ ಬಗೆಗೆ ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದ್ದೇವೆ. ಜತೆಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮ ವಾರ್ಡಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಕೇವಲ ಭರವಸೆಯ ಮಾತಿನಲ್ಲೆ ಕಾಲ ಕಳೆಯುವಂತಾಗಿದೆ. ಸರ್ಕಾರ ಪೌರಾಡಳಿತ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ವಾಸಿಸುವ ಬಡಾವಣೆಗಳಿಗೆ ಮೂಲ ಸೌಲಭ್ಯ ಒದಗಿಸಲು ಲಕ್ಷಾಂತರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ ಸರಿಪಡಿಸುವ ಗೊಜಿಗೆ ಹೋಗದ ಸ್ಥಳೀಯ ಆಡಳಿತ ವ್ಯವಸ್ಥೆಯ ಬಗೆಗೆ ಹಲವಾರು ಸಂಶಯಗಳು ಮೂಡುತ್ತಿವೆ. ಹೀಗಲಾದರೂ ಎಚ್ಚೆತ್ತು ಸೇವಾಲಾಲ ಬಡಾವಣೆಗೆ ಮೂಲ ಸೌಲಭ್ಯ ಜೊತೆ ಸುಚಿತ್ವಕ್ಕೆ ಆದ್ಯತೆ ನೀಡಲು ಮುಂದಾಗದಿದ್ದಲ್ಲಿ ಪುರಸಭೆ ಆಡಳಿತ ವಿರುದ್ಧ ಉಗ್ರ ಪ್ರತಿಭಟನೆಗೆ ಮುಂದಾಗಲಿದ್ದೇವೆ.
ಟ ಉಮೇಶ ರಾಠೋಡ, ಮಾರುತಿ ಮಾಳೋತ್ತರ, ಪರಶುರಾಮ ಗುಗಲೋತ್ತರ, ಕಳಕೇಶ ರಾಠೋಡ, ಸೋಮಪ್ಪ ರಾಠೋಡ, ನೂರಪ್ಪ ರಾಠೋಡ, ಶಿವು ಚವ್ಹಾಣ, ಸ್ಥಳೀಯ ನಿವಾಸಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

