ಗದಗ

ಶಂಕರಾಚಾರ್ಯರ ತತ್ವ ಪ್ರಸ್ತುತ

Published On :

ಗದಗ: ಮಹಾನ್ ದಾರ್ಶನಿಕ ತತ್ವಜ್ಞಾನಿ ಶ್ರೇಷ್ಠ ಆದಿ ಜಗದ್ಗುರು ಶಂಕರಾಚಾರ್ಯರು 8ನೇ ಶತಮಾನದಲ್ಲಿಯೇ ಹೇಳಿದ ಧಾರ್ಮಿಕ ತತ್ವ ವಿಚಾರಗಳು ಏಕತೆಯನ್ನು ಸಾರುವ ಅದೈತ ತತ್ವಜ್ಞಾನ ಇಂದಿನ 21ನೇ ಶತಮಾನದಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಎಂದು ವೀರನಾರಾಯಣ ಹಾಗೂ ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಹೃದಯರೋಗ ತಜ್ಞ ಡಾ. ಕುಶಾಲ ಗೋಡಖಿಂಡಿ ಹೇಳಿದರು.
ಅವರು ಇಲ್ಲಿನ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಂಕರ ಜಯಂತಿ ಅಂಗವಾಗಿ ಶಂಕರಾಚಾರ್ಯ ಉತ್ಸವ ಕಮಿಟಿ ಹಾಗೂ ಶಂಕರಾಚಾರ್ಯ ಯುವಕ ಮಂಡಳ ಆಶ್ರಯದಲ್ಲಿ ಏರ್ಪಡಿಸಿದ ಸಾಧಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಂಕರರ ಅದೈತ ತತ್ವಜ್ಞಾನದ ಕುರಿತು ರತ್ನಾಕರ ಭಟ್ ಜೋಶಿ ಪ್ರವಚನ ನೀಡಿದರು.
ಸನ್ಮಾನ: ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಭಾವತಿ ಪುರಾಣಿಕ, ತನ್ವೀ ಮೋನೆ, ಹಾಗೂ ಹೆಗಡೆ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕೆ.ವಿ. ಜೋಶಿ, ಜಿ.ಕೆ. ತಮ್ಮಣ್ಣವರ, ಬಿ.ವಿ. ದೇಶಪಾಂಡೆ, ದಿಲೀಪ ಸೊಂಡೂರ, ಬಿ.ವಿ. ಇನಾಮದಾರ, ಜಿ.ವಿ. ಕೌಜಲಗಿ, ರಾಮಚಂದ್ರ ಪೂಜಾರ, ರಮೇಶ ಪೂಜಾರ, ಸುನೀಲ ತೆಂಬದಮನಿ, ಅಪ್ಪಣ್ಣ ಭಟ್ ಸೊರಟೂರ, ಕಲಾವತಿ ಅಲಬೂರ, ರವಿ ಪೂಜಾರ, ಆನಂದ ಕುಲಕರ್ಣಿ, ಸಂತೋಷ ಕುಲಕರ್ಣಿ, ವೈ.ಎಸ್. ಕೊಂಡಿ, ಶಂಕರಾಚಾರ್ಯ ಯುವಕ ಮಂಡಳ ಹಾಗೂ ಉತ್ಸವ ಕಮಿಟಿ, ಸರಸ್ವತಿ ಮಹಿಳಾ ಮಂಡಳ, ಬ್ರಹ್ಮಚೈತನ್ಯ ಉತ್ಸವ ಮಂಡಳಿ, ತ್ರಿಕೂಟೇಶ್ವರ ಯುವಕ ಮಂಡಳ, ಹಾಗೂ ಯೋಗಿರಾಜ ಭಕ್ತ ಮಂಡಳಿ ಪದಾಧಿಕಾರಿಗಳು ಇದ್ದರು. ವಿಜೇತಾ ಪೂಜಾರ ಪ್ರಾರ್ಥಿಸಿದರು. ಎ.ಡಿ. ಗೋಡಖಿಂಡಿ ಸ್ವಾಗತಿಸಿದರು. ರಾಮಚಂದ್ರ ಮೋನೆ ಪ್ರಾಸ್ತಾವಿಕ ಮಾತನಾಡಿದರು. ಅನಿಲ ವೈದ್ಯ ಪರಿಚಯಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು, ಪ್ರಶಾಂತ ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.