ಗದಗ

ಸ್ವಪಕ್ಷೀಯರಿಂದಲೇ ಸೋಲು

Published On :

ಮುಂಡರಗಿ: ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕೂಡಿಕೊಂಡು ಒಂದಾಗಿ ಅಭ್ಯರ್ಥಿಯ ಪರವಾಗಿ ನಿಂತುಕೊಂಡು ಕೆಲಸಮಾಡುವ ಮನೋಭಾವನೆ ನಮ್ಮ ಯಾವ ಮುಖಂಡರಲ್ಲಿಯೂ ಬರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ಈ ಚುನಾವಣೆಯನ್ನು ಎಷ್ಟರ ಮಟ್ಟಿಗೆ ಜವಾಬ್ದಾರಿಯಿಂದ ಮಾಡಬೇಕಾಗಿತ್ತೊ ಅಷ್ಟು ಜವಾಬ್ದಾರಿ ಹೊತ್ತು ಶ್ರಮ ವಹಿಸಲಿಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಅವರು ಭಾನುವಾರ ಮುಂಡರಗಿ ಪಟ್ಟಣದಲ್ಲಿ ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮೀಟಿ ಹಾಗೂ ರಡ್ಡಿ ಸಮಾಜ ಯುವ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.
ಎಲ್ಲರೂ ಒಂದಾಗಿ ಕೆಲಸ ಮಾಡದಿರುವುದೇ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಸೋಲಿಗೆ ಕಾರಣವಾಗಿದೆ.
ಚುನಾವಣೆ ಪೂರ್ವದಲ್ಲಿ ನಾವೆಲ್ಲರೂ ಒಂದೆಡೆ ಸೇರಿಕೊಂಡು ಅವರೇನು ಮಾಡುತ್ತಿದ್ದಾರೆ  ನಾವೇನು ಮಾಡಬೇಕು ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎನ್ನುವ ಯಾವುದೇ ಪೂರ್ವ ತಯಾರಿ ನಮ್ಮ ಜಿಲ್ಲೆಯಲ್ಲಿ ನಡೆಯಲೇ ಇಲ್ಲ. ರಾಜ್ಯದ ಎಲ್ಲ ಕ್ಷೇತ್ರಕ್ಕಿಂತಲೂ ವಿಳಂಬವಾಗಿ ಕೊನೆಯ ಕ್ಷಣದಲ್ಲಿ ನಮ್ಮ ಅಭ್ಯರ್ಥಿಯ ಹೆಸರನ್ನು ಘೋಷಿಸಿ ಪ್ರಚಾರಕ್ಕೂ ಸಮಯ ದೊರೆಯದಂತಾಗಿ ಸರಿಯಾಗಿ ಮತದಾರರನ್ನು ಮುಟ್ಟುವುದಕ್ಕೂ ಆಗಲಿಲ್ಲ. ಇದೂ ಸಹ ನಮ್ಮ ಅಭ್ಯರ್ಥಿ ಸೊಲಿಗೆ ಪ್ರಮುಖ ಕಾರಣವಾಗಿದೆ.
ಇಡೀ ಭಾರತದಲ್ಲಿಯೇ ಮತದಾರರು ಅಧಿಕವಾದ ಬದಲಾವಣೆಯನ್ನು ಬಯಸಿದು,್ದ ಈ ಚುನಾವಣೆಗೆ ಸಾಕ್ಷಿಯಾಗಿದೆ.
ನಾವು ಕನಸಿನಲ್ಲಿಯೂ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆಂದುಕೊಂಡಿರಲಿಲ್ಲ. ಆದರೆ ಅವರು ಇದೀಗ ಸೋತಿದ್ದಾರೆ. ಮತದಾರರು ನೀಡಿದ ನಿರ್ಣಯವನ್ನು ನಾವು ಒಪ್ಪಿಕೊಂಡಿದ್ದೇವೆ.
ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಮೋದಿಯವರ ಅಲೆ ಕಾರಣವೆ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಮೋದಿಯವರ ಅಲೆ ಎನ್ನುವುದಕ್ಕಿಂತ ಕೆಲಮೊಂದು ವಿಚಾರಗಳಲ್ಲಿ ನಮ್ಮ ಆಡಳಿತ ವ್ಯವಸ್ಥೆ ಇರಲಿ, ನಮ್ಮಪಕ್ಷದ ಜನಪರ ಕಾರ್ಯಕ್ರಮಗಳನ್ನು ಜನತೆಗೆ ಹಾಗೂ ಸಮಾಜದ ಎಲ್ಲ ವರ್ಗದ ಜನರಿಗೂ ಮುಟ್ಟಿಸುವಲ್ಲಿಯೂ ನಾವು ವಿಫಲರಾಗಿದ್ದೇವೆ. ಜಿಲ್ಲಾ ಆಡಳಿತ ಯಂತ್ರ ಸಂರ್ಪೂಣ ಕುಸಿದಿದೆ.
ನಾವು 1999 ರಿಂದ 2004ರವರೆಗೆ ಶಾಸಕರಾಗಿದ್ದ ಸಂದರ್ಭದಲ್ಲಿ ಇಡೀ ಜಿಲ್ಲೆಯ ಆಡಳಿತ ಶಾಸಕರ ಹಿಡಿತದಲ್ಲಿತ್ತು. ಇಂದು ಅದು ಕಾಣುತ್ತಿಲ್ಲ ಇದೂ ಸಹ ನಮ್ಮ ಅಭ್ಯರ್ಥಿ ಸೋಲಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಪರೋಕ್ಷವಾಗಿ ಕಾಂಗ್ರೆಸ್ನವರೇ ಕಾರಣ ಎನ್ನುವುದನ್ನು ಸೂಚ್ಯವಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.