ಗುಲ್ಬರ್ಗಾ

ಇಂದು ರಾಜ್ಯ ಮಟ್ಟದ ವಿಚಾರ ಸಂಕಿರಣ

Published On :

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯವು ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಏ.4ರಂದು ಬೆ.11 ಗಂಟೆಗೆ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠ, ಹಡಪದ ಶರಣರು- ಶರಣಿಯರ ಇತಿವೃತ್ತ ಹಾಗೂ ಅವರ ಸಾಹಿತ್ಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಈ ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಬಸವರಾಜ ಸಬರದ ಮತ್ತು 2ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಎಸ್.ಎಂ. ಹಿರೇಮಠ ವಹಿಸುವರು. ಮೊದಲನೇ ಗೋಷ್ಠಿಯಲ್ಲಿ ಡಾ. ವಿಜಯಕುಮಾರಿ ಕರಿಕಲ್ ಅವರಿಂದ ಶರಣ ಹಡಪದ ರೇಚಣ್ಣನವರ ಇತಿವೃತ್ತ ಹಾಗೂ ಅವರ ವಚನಗಳಲ್ಲಿ ಅನುಭವ, ಡಾ. ಎಚ್.ಟಿ. ಪೋತೆ ಅವರಿಂದ ಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರ ವಚನಗಳಲ್ಲಿ ಜೀವನ ಮೌಲ್ಯಗಳು ಮತ್ತು ಡಾ. ಬಸವರಾಜ ಸಬರದ ಅವರಿಂದ ಹಡಪದ ಶರಣ- ಶರಣೆಯರ ವಚನಗಳಲ್ಲಿ ವೈಚಾರಿಕತೆ ಕುರಿತು ಉಪನ್ಯಾಸ. 2ನೇ ಗೋಷ್ಠಿಯಲ್ಲಿ ಡಾ. ಚೆನ್ನಬಸವಯ್ಯ ಹಿರೇಮಠ ಅವರಿಂದ ಶರಣ ಹಡಪದ ಅಪ್ಪಣ್ಣ- ಶರಣೆ ಲಿಂಗಮ್ಮನವರ ಇತಿವೃತ್ತ ಮತ್ತು ಸ್ಮಾರಕಗಳು, ಡಾ. ಪ್ರಶಾಂತ ನಾಯಕ ಅವರಿಂದ ಕನ್ನಡಿ ಕಾಯಕದ ಅಮ್ಮಿದೇವ ಹಾಗೂ ರೇವಮ್ಮನವರ ವಚನಗಳಲ್ಲಿ ಅನುಭಾವ ಹಾಗೂ ಡಾ. ಎಸ್.ಎಂ. ಹಿರೇಮಠ ಅವರಿಂದ ಹಡಪದ ಶರಣರ- ಶರಣೆಯರ ವಚನಗಳಲ್ಲಿ ಕಾವ್ಯಾಂಶಗಳು ಕುರಿತು ಉಪನ್ಯಾಸ ಜರುಗಲಿದೆ. ನಂತರ ಗುಲ್ಬರ್ಗದ ಎಂ.ವೈ. ಸುರಪುರ ಹಾಗೂ ಸಂಗಡಿಗರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಲಿದೆ.
ವಿದ್ಯಾರ್ಥಿಗಳಿಗೆ ಡೆಸ್ಕ್ ವ್ಯವಸ್ಥೆ: ಚಾಪಲ್
ಚಿಂಚೋಳಿ: ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಎಲ್ಲ ಪರೀಕ್ಷಾ ಕೋಣೆಗಳಲ್ಲಿ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ ಎಂದು ಪರೀಕ್ಷಾ ಮುಖ್ಯಸ್ಥ ಜಯಪ್ಪ ಚಾಪಲ್ ತಿಳಿಸಿದ್ದಾರೆ. ಕಳೆದ ಸೋಮವಾರ ನಡೆದ ಕನ್ನಡ ವಿಷಯ ಪರೀಕ್ಷೆಗೆ ಹಾಜರಾಗಲು ಆಗಮಿಸಿದ 323 ವಿದ್ಯಾರ್ಥಿಗಳಿಗೆ ಡೆಸ್ಕ್ ವ್ಯವಸ್ಥೆ ಮಾಡಲು ಆಗಲಿಲ್ಲ, ಬುಧವಾರ ನಡೆಯುವ ವಿಜ್ಞಾನ ವಿಷಯಕ್ಕೆ ಎಲ್ಲ ಕೋಣೆಗಳಿಗೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲದೆ ಪರೀಕ್ಷೆ ಬರೆಯಲು ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.