'ಜನ ಬೆಂಬಲ ಕಳೆದುಕೊಂಡ ಬಿಜೆಪಿ'
ಕನ್ನಡಪ್ರಭ ವಾರ್ತೆ ಜೇವರ್ಗಿ ಏ.25
ಇತ್ತೀಚಿನ ದಿನಗಳಲ್ಲಿ ಬಿಜೆಪಿ ತನ್ನ ಜನ ಬೆಂಬಲ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಹೇಳಿದರು.
ತಾಲೂಕಿನ ಕೋಳಕೂರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತ, ಬಿಜೆಪಿ ಘಟಾನುಘಟಿ ನಾಯಕರು ಪ್ರಚಾರಕ್ಕೆ ಬಂದರೆ ಜನರಿಲ್ಲದೆ ಬಿಕೋ ಎನ್ನುತ್ತಿದೆ, ನಾನು ಪ್ರತಿ ಹಳ್ಳಿಗೆ ಪ್ರಚಾರಕ್ಕೆ ಹೋದಾಗ ಸಾವಿರಾರು ಕಾರ್ಯಕರ್ತರು ಸೇರುತ್ತಿದ್ದಾರೆ. ಹೀಗಾಗಿ ಬಿಜೆಪಿ ತನ್ನ ಜನ ಬೆಂಬಲ ಕಳೆದುಕೊಂಡಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಬಗ್ಗೆ ಯಾವ ನಾಯಕರಿಗೆ ಮಾತನಾಡುವ ಹಕ್ಕು ಇಲ್ಲ, ಮೇ 5ರ ನಂತರ ಎಲ್ಲಾ ಚಿತ್ರಣ ಹೊರಬಿಳಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಮಲಿನವಾಗಿರುವ ರಾಜಕೀಯ ಶುದ್ಧಿಕರಣವಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯ ಎಂದರು.
ಪ್ರಚಾರದಲ್ಲಿ ಸಿದ್ರಾಮಪ್ಪಗೌಡ ಹರನೂರ, ಬಸವಣೆಪ್ಪ ಗೌನಳ್ಳಿ, ರಾಜಶೇಖರ ಸಿರಿ, ರಾಜಶೇಖರ ಖಣದಾಳ, ಸುಧೀಂದ್ರ ಆಲಬಾಳ, ಸೋಮಣ್ಣ ಕಲ್ಲಾ, ಸಂಗಣ್ಣಗೌಡ ಗುಳ್ಯಾಳ, ಬಿ.ಜಿ. ಪಾಟೀಲ್ ಗೌನಳ್ಳಿ, ನೀಲಕಂಠ ಕಟ್ಟಿಸಂಗಾವಿ, ಸುಧೀಂದ್ರ ವಕೀಲ, ಶಿವುಕುಮಾರ್ ಬಿದರಿ, ಭಗವಂತರಾಯ ಶಿವಣ್ಣಿ, ಗುರುಯಾದವ, ನೀಲಕಂಠರಾಯ ಮಾಲಿಪಾಟೀಲ್, ಶಿವಣ್ಣಗೌಡ ಮಂದ್ರವಾಡ ವಸಂತ ನರಿಬೋಳ, ತಮ್ಮಣ್ಣ ಬಾಗೇವಾಡಿ, ಬಸಣ್ಣ ಸರ್ಕಾರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಇದೇ ಸಂದರ್ಭದಲ್ಲಿ ಕೋಳಕೂರ, ರದ್ದೇವಾಡಗಿ, ಕೂಡಿ ದರ್ಗಾ, ಗ್ರಾಮದ ಅನೇಕರು ಬಿಜೆಪಿ, ಜೆಡಿಎಸ್ ತೊರೆದು ಡಾ.ಅಜಯಸಿಂಗ್ ಸಮ್ಮುಖ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೋಳಕೂರ ಗ್ರಾಮದ ಮಲ್ಲಿಕಾರ್ಜುನ ಕೋಣಿನ್, ಬಸಣ್ಣ ವಡಿಗೇರಿ, ಮಂಜು ವಡಿಗೇರಿ, ಅಣ್ಣಾರಾಯ ವಡಿಗೇರಿ, ಶ್ರೀಮಂತ ತೊನ್ಸಳ್ಳಿ, ಮಲ್ಕಣ್ಣ ಕೂಡಿ, ಬಸವರಾಜ ಗರೂರ್, ಸಾಯಬಣ್ಣ ಬಣದಾಳ, ಕೂಡಿ ದರ್ಗಾದ ಶಿವಶರಣಪ್ಪ ನಾಟಿಕಾರ, ಮಲ್ಲಪ್ಪ, ಚನ್ನಪ್ಪ ನಾಟಿಕಾರ, ಅಶೋಕ, ದತ್ತಪ್ಪ ನಾಯ್ಕೋಡಿ, ಭೀಮಣ್ಣ ಜಮಾದಾರ, ದೇವಪ್ಪ, ದಾಸಪ್ಪ ಜಮಾದಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

