'ರೈತರ ಸಮಸ್ಯಗೆ ಸ್ಪಂದಿಸಿ ದುಡಿದಿದ್ದೇನೆ'
ಕ.ಪ್ರ. ವಾರ್ತೆ ಸುರಪುರ ಏ. 29
ರೈತರಿಗಾಗಿ ಜೀವನ ಮೀಸಲಿರಿಸಿದ್ದೇನೆ ಎಂದು ಹೇಳುವವರು ತಮ್ಮ ಅಧಿಕಾರವಧಿಯಲ್ಲಿ ರೈತರ, ವರ್ತಕರ, ಸಾಮಾನ್ಯ ನಾಗರಿಕರ ಜೀವ ಹಿಂಡಿದ್ದನ್ನು ಯಾರೂ ಮರೆತಿಲ್ಲ. ರೈತರ ಸಮಸ್ಯಗೆ ಸ್ಪಂದಿಸಿ ಹಗಲಿರುಳು ಶ್ರಮಿಸಿದವನು ಈ ರಾಜೂಗೌಡ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ತಿರುಗೇಟು ನೀಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರದ ಮೂಲಕ ಮತಯಾಚನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆ ಮಾಡಿರುವುದು ಚುನಾವಣೆಯ ಗಿಮಿಕ್ ಹೂರತು ರೈತರ ಹಿತಕ್ಕಾಗಿ ಅಲ್ಲ. ಪ್ರತಿ ಬಾರಿಯೂ ಬೇಸಿಗೆ ಸಮಯದಲ್ಲಿ ಈ ಸಮಸ್ಯೆ ಉಂಟಾಗುತ್ತಿತ್ತು. ಇಷ್ಟು ದಿನವಿಲ್ಲದ ರೈತಪರ ಕಾಳಜಿ ಇಂದೇಕೆ? ಈಗಾಗಲೇ ಎರಡು ಬಾರಿ ಸೋತು ಮತ್ತೊಮ್ಮೆ ಸೋಲುವ ಭೀತಿಯಿಂದ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಮತಧಾರರಲ್ಲಿ ಗೊಂದಲ ಮೂಡಿಸುವ ತಂತ್ರವಾಗಿದೆ ಎಂದು ಹರಿಹಾಯ್ದರು.
ಮಾದರಿ ಮಾರುಕಟ್ಟೆ: ಅಧಿಕಾರಕ್ಕೆ ಬರುವ ಮೊದಲು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಮೇಲೆ ಹಾಗೂ ವರ್ತಕರ ಮೇಲೆ ನಿರಂತರ ಶೋಷಣೆ ನಡೆಯತಿತ್ತು. ನಾನು ಅಧಿಕಾರಕ್ಕೆ ಬಂದ ನಂತರ ರೈತರಿಗೂ ಮತ್ತು ವರ್ತಕರಿಗೂ ವ್ಯವಹಾರಕ್ಕೆ ಮುಕ್ತ ವಾತಾವರಣ ಕಲ್ಪಿಸಿದ್ದೇನೆ. ಹೆಚ್ಚಿನ ಆದಾಯ ತರುವ ಮೂಲಕ ರಾಜ್ಯದಲ್ಲೇ ಮಾದರಿ ಕೃಷಿ ಮಾರುಕಟ್ಟೆಯನ್ನಾಗಿ ಮಾಡಿದ್ದೇನೆ ಎಂದು ಹೇಳಿದರು.
ರೈತರ ಹಿತಕ್ಕಾಗಿ 230 ಕೋಟಿ ರು. ವೆಚ್ಚದಲ್ಲಿ ಮುಖ್ಯ ಕಾಲುವೆ ನವೀಕರಣ, ರಾಜನಣಕೋಳ್ಳೂರು, ಭೋನಾಳ ಏತನೀರಾವರಿ, ಹಲವಾರು ಪಿಕಪ್ ಮತ್ತು ಚೆಕ್ಡ್ಯಾಂಗಳನ್ನು ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಒದಗಿಸಿದ್ದೇನೆ. ಅವರು ರೈತರಿಗಾಗಿ ಮಾಡಿದ್ದು ಏನಿದೆ ಎನ್ನುವುದು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.ಮುಖಂಡರಾದ ರಾಜಾ ಹನುಮಪ್ಪ ನಾಯಕ, ಯಲ್ಲಪ್ಪ ಕುರುಕುಂದಿ, ನಿಂಗಣ್ಣ ಬಾದ್ಯಾಪೂರ, ಪರಮಣ್ಣ ಹಾಲಭಾವಿ, ರಾಜಾಅಪ್ಪಾರಾವ ನಾಯಕ, ಪ್ರಕಾಶ ಗುತ್ತೇದಾರ, ಎಸ್.ಎನ್ ಪಾಟೀಲ, ಭೀಮಣ್ಣ ಬೈಚಬಾಳ, ಪರಮಣ್ಣ ಪೂಜಾರಿ, ಧರ್ಮರಾಜ ಬಡಿಗೇರ, ಕೊತಲಪ್ಪ ಹಾವಿನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

