ಶಹಾಬಾದ್ ಕೊಳಚೆ ಪ್ರದೇಶದಲ್ಲಿ ಉಪ ಲೋಕಾಯುಕ್ತ ರೌಂಡ್
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರಸಭೆಗೆ ಶುಕ್ರವಾರ ಭೇಟಿ ನೀಡಿದ ಉಪಲೋಕಾಯುಕ್ತ ಶಶಿಕಾಂತ ಮಜಗೆ ನಗರದ ಅಶೋಕ ಬಡಾವಣೆಯಲ್ಲಿಯ ಕೊಳಚೆ, ಮನೆಯ ಅಡಿಯಿಂದ ಹರಿಯುವ ನೀರು, ರಸ್ತೆಯಲ್ಲಿ ನಿಂತ ನೀರಿನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಆಲಿಸಿ, ಅಧಿಕಾರಿಗಳ ನಿರ್ಲಕ್ಷ್ಯತೆಗೆ ತರಾಟೆ ತೆಗೆದುಕೊಂಡರು.
ನಗರಸಭೆಗೆ ಶುಕ್ರವಾರ ಸಂಜೆ ಆಗಮಿಸಿದ ಉಪಲೋಕಾಯುಕ್ತರು, ಅಧಿಕಾರಿಗಳಾದ ಎಸ್.ಎಸ್. ಕಂಬಾರ ವಿವಿಧ ಕಾಮಗಾರಿಗಳ ದಾಖಲೆಗಳ ಫೈಲನ್ನು ತರಿಸಲು ಆಡಳಿತಾಧಿಕಾರಿಗಳಾದ ತಹಸೀಲ್ದಾರ್ ಮಲ್ಲೇಶಿ ತಂಗಾರವರಿಗೆ ತಿಳಿಸಿದರು.
ಲೋಕಾಯುಕ್ತರ ಗಮನಕ್ಕೆ: ದಾಖಲೆಗಳನ್ನು ತರಲು ಹೋದ ಎಇಇ ಪುಟ್ಟನಾಯಕರವರು ಸಂಬಂಧಿಸಿದ ಸಿಬ್ಬಂದಿ ಅಲಮಾರಿಗೆ ಕೀಲಿ ಹಾಕಿಕೊಂಡು ಹೋಗಿದ್ದಾರೆಂದು ಹೇಳಿ, ಯಾವುದೇ ದಾಖಲೆಯ ಫೈಲ್ಗಳನ್ನು ತೋರಿಸಲಿಲ್ಲ. ಎಇಇಯವರು ಅಲಮಾರಿಯ ಕೀಲಿ ಒಡೆಯುವುದಾಗಿ ಹೇಳಿದಾಗ ಲೋಕಾಯುಕ್ತರು ಬೇಡವೆಂದು ಹೇಳಿದರು. ತಮ್ಮ ಗಮನಕ್ಕೆ ಇಲ್ಲದೆ ಮೂರು ಜನ ಸಿಬ್ಬಂದಿ ರಜೆ ಹಾಕಿರುವುದನ್ನು ಆಡಳಿತಾಧಿಕಾರಿಗಳು ಲೋಕಾಯುಕ್ತರ ಗಮನಕ್ಕೆ ತಂದರು.
ಸ್ಥಳಕ್ಕೆ ಬಂದ ನಗರದ ಸಭೆ ಸದಸ್ಯರಾದ ಡಾ. ಅಶೋಕ ಜಿಂಗಾಡೆ, ವೆಂಕಟೇಶ ದಂಡಗುಲಕರ್ ಅಗಲೀಕರಣ ತ್ಯಾಜ್ಯದಲ್ಲಿ 76 ಲಕ್ಷ ಖರ್ಚು ಮಾಡಲಾಗಿದ್ದು, ಈ ಬಗ್ಗೆ ಸಂಬಂಧಿಸಿ ಜೆಇಯನ್ನು ಅಮಾನತ್ತು ಗೊಳಿಸಿದ್ದರು. ಅವರನ್ನು ಮತ್ತೆ ಇಲ್ಲಿಯೇ ಸೇವೆಗೆ ನಿಯೋಜಿಸಲಾಗಿದೆ ಎಂದು ದೂರಿದರು.
ಯಾವುದೇ ಕಾಮಗಾರಿಯನ್ನು ನಗರಸಭೆ ಸದಸ್ಯರ ಗಮನಕ್ಕೆ ತರುತ್ತಿಲ್ಲವೆಂದು ದೂರಿದರು. ಕಾಂಗ್ರೆಸ್ ಮುಖಂಡ ಮಹಿಬೂಬ್ ಖಾನ್ ಮಸಾಲೆ ಸದಸ್ಯರ ದೂರಿಗೆ ಧ್ವನಿಗೂಡಿಸಿದರು.
ಸ್ಥಳದಲ್ಲಿದ್ದ ಪತ್ರಕರ್ತರು ನಗರದಲ್ಲಿ ಒಂದುವರೆ ವರ್ಷದ ಹಿಂದೆ ನಡೆದ ರಸ್ತೆ ಅಗಲೀಕರಣ, ಒತ್ತುವರಿ ತೆರವುನಿಂದ ರಸ್ತೆಯಲ್ಲಿ ಹರಡಿದ್ದ ಕಲ್ಲು, ಮಣ್ಣು ರಾಶಿಯನ್ನು ತೆಗೆಯದೆ ಇರುವ ಬಗ್ಗೆ ಗಮನಕ್ಕೆ ತಂದು, ಅಗಲೀಕರಣ ತ್ಯಾಜ್ಯ ಎತ್ತಲು 76 ಲಕ್ಷ ವೆಚ್ಚ ಮಾಡಿರುವ ಬಗ್ಗೆ ಗಮನಕ್ಕೆ ತಂದರು.
ತ್ಯಾಜ್ಯ ಎತ್ತಲು ಎಚ್ಚರಿಕೆ: ಈ ಬಗ್ಗೆ ಎಇಇಯವರಿಗೆ ಒಂದು ತಿಂಗಳಲ್ಲಿ ರಸ್ತೆಯಲ್ಲಿ ಬಿದ್ದ ತ್ಯಾಜ್ಯವನ್ನು ಎತ್ತಲು ಎಚ್ಚರಿಕೆ ನೀಡಿ, ನಗರದ ಸಮಸ್ಯೆಗಳಿಗೆ ಸ್ಪಂದಿಸದ ಎಇಇಯವರಿಗೆ ಲೋಕಾಯುಕ್ತರು ನೀವು ಪುಟ್ಟನಾಯಕರಾಗದೆ ಸಮಸ್ಯೆಗಳಿಗೆ ಸ್ಪಂದಿಸಿ ದೊಡ್ಡವರಾಗಿ, ದಡ್ಡರಾಗಬೇಡಿ ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

