'ಕಾರ್ಯನಿರ್ವಹಣೆ ಖುಷಿ ತಂದಿದೆ'
ಹುಣಸಗಿ: ಎಷ್ಟು ವರ್ಷ ಸೇವೆ ಮಾಡಿದ್ದಾರೆ ಎನ್ನುವುದು ಮುಖ್ಯವಲ್ಲ. ಯಾವ ರೀತಿ ಶ್ರದ್ಧೆ, ಕಾಯಕ ನಿಷ್ಠೆಯಿಂದ ಸೇವೆ ಮಾಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ ಎಂದು ಜಿಪಂ ಪ್ರತಿಪಕ್ಷದ ನಾಯಕ ಎಚ್.ಸಿ. ಪಾಟೀಲ್ ಹೇಳಿದರು.
ಪಟ್ಟಣದ ನೀರಾವರಿ ಇಲಾಖೆಯ ಕಾರ್ಯಾಗಾರ ಹಾಗೂ ಯಾಂತ್ರಿಕ ವಿಭಾಗದಲ್ಲಿ ಅಡಿಟ್ ಆಫೀಸರ್ ಆಗಿ ನಿವೃತ್ತರಾದ ಜಿ.ಬಿ. ಪುರಾಣಿಕಮಠ ಅವರನ್ನು ಸನ್ಮಾನಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣಿಕಮಠರು ತಮ್ಮ ಸೇವೆಯನ್ನು ಹುಣಸಗಿ ಪಟ್ಟಣದಲ್ಲಿಯೇ ಆರಂಭಿಸಿ ಇಲ್ಲಿಯೇ ನಿವೃತ್ತಿಯಾಗುತ್ತಿರುವುದು ಇತಿಹಾಸವೇ ಸರಿ. ನಿವೃತ್ತ ಜೀವನವೂ ಸುಖಮಯವಾಗಿರಲಿ ಎಂದು ಆಶಿಸಿದರು.
ಇಇ ಕೆ.ಅಬ್ದುಲ್ ಹಜೀಜ್ ಮಾತನಾಡಿ, ಪುರಾಣಿಕಮಠರು 36 ವರ್ಷಗಳು ಹುಣಸಗಿ ಪಟ್ಟಣದಲ್ಲಿ ಸೇವೆ ಸಲ್ಲಿಸಿದ್ದು ಸಂತಸ ತಂದಿದೆ ಎಂದರು. ನಿವೃತ್ತ ಅಡಿಟ್ ಆಫೀಸರ್ ಮಲ್ಲಣ್ಣ ತಿಮ್ಮನಗೌಡ, ಚನ್ನಯ್ಯಸ್ವಾಮಿ ಹಿರೇಮಠ, ಮುಖ್ಯ ಲೆಕ್ಕಾಧಿಕಾರಿ ಷಡಕ್ಷರಯ್ಯ ಹಿರೇಮಠ ಇತರರು ಮಾತನಾಡಿದರು.
ಸೇವೆ ತೃಪ್ತಿ ತಂದಿದೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಬಿ. ಪುರಾಣಿಕಮಠ, ಇಷ್ಟು ವರ್ಷಗಳ ನನ್ನ ಸೇವೆಯ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವುದು ತೃಪ್ತಿ ತಂದಿದೆ. ಮೇಲಧಿಕಾರಿಗಳ ಆದೇಶದಂತೆ ವೃತ್ತಿಯುದ್ದಕ್ಕೂ ನಡೆದುಕೊಂಡಿದ್ದೇನೆ. ಸರ್ಕಾರಿ ಸೇವೆಯನ್ನು ನಿಷ್ಠೆಯಿಂದ ಮಾಡಿದ ಹೆಮ್ಮೆ ನನಗಿದೆ ಎಂದರು.
ಅಧಿಕಾರಿಗಳಾದ ಬಿ.ಎಂ. ರಾಂಪೂರ, ಎಸ್.ಕೆ. ನಿಡೋಣಿ, ಎಸ್.ಜಿ.ಚಿತ್ತವಾಡಗಿ, ಮುಖಂಡರಾದ ತಿಪ್ಪಣ್ಣ ಚಂದಾನವರ, ರಾಚಯ್ಯಸ್ವಾಮಿ ಹಿರೇಮಠ, ಶೇಖರ ಹಿರೇಮಠ, ಸಿದ್ದು ರೇವಡಿ, ನಾಗರಾಜ ಚಂದಾ, ಮಲ್ಲೇಶಿ ಭೀಗುಡಿ ಇದ್ದರು. ಗುಂಡೇರಾವ ಸ್ವಾಗತಿಸಿದರು. ವಿಜಯ ಬೈಚಬಾಳ ನಿರೂಪಿಸಿದರು. ಸುಭಾಸ ಯರಕಿಹಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

