ಗುಲ್ಬರ್ಗಾ

ತಹಸೀಲ್ದಾರ್ ಮನೆ ಮೇಲೆ ಕಲ್ಲು ತೂರಿದ ವ್ಯಕ್ತಿ ಬಂಧನ

Published On :

ದೇವದುರ್ಗ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಇಲ್ಲಿನ ತಹಸೀಲ್ದಾರ್ ತುಕಾರಾಂ ಕಲ್ಯಾಣಕರ್ ಅವರ ನಿವಾಸದ ಮೇಲೆ ಕಲ್ಲು ತೂರಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.
ಶಹಾಪುರ ತಾಲೂಕಿನ ಜೋಳದಡಗಿ ಗ್ರಾಮದ ನಿವಾಸಿ ಪರ್ವತರೆಡ್ಡಿ ಎಂಬಾತನೇ ಪೊಲೀಸರಿಗೆ ಸಿಕ್ಕುಬಿದ್ದಿರುವುದು. ಈತ ಶನಿವಾರ ರಾತ್ರಿ ಮದ್ಯದ ಅಮಲಿನಲ್ಲಿ ತಹಸೀಲ್ದಾರ್ ಅವರ ಮನೆ ಮುಂದೆ ಬಂದು ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಅವರ ಮನೆ ಮೇಲೆ ಕಲ್ಲು ತೂರಿದ್ದಾನೆಂದು ಹೇಳಲಾಗಿದೆ. ಕಲ್ಲು ತೂರಿದ ನಂತರದಲ್ಲಿ ಆತ ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಪೊಲೀಸರು ಶೋಧ ನಡೆಸಿ ಭಾನುವಾರ ಬೆಳಿಗ್ಗೆ ಬಂಧಿಸಿ ಕರೆತಂದಿದ್ದಾರೆ. ಪರ್ವತರೆಡ್ಡಿ ಯಾವ ಕಾರಣಕ್ಕೆ ತಹಸೀಲ್ದಾರ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಎಂಬುದರ ವಿಚಾರಣೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಜ್ಞಾನ ದಾಸೋಹ ಇಂದು
ಗುಲ್ಬರ್ಗ: ಶಿವಶಕ್ತಿ ಸಂದೇಶ (ಸತ್ಸಂಗ) ವತಿಯಿಂದ ಆ.12 ರಿಂದ ಸೆ.2ರವರೆಗೆ ಗುಲ್ಬರ್ಗದಲ್ಲಿ ಪ್ರತಿ ಸೋಮವಾರ ಸಂಜೆ ಮನೆಯಲ್ಲಿ ಜ್ಞಾನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಸೋಮವಾರ ಸಂಜೆ 6.30 ರಿಂದ 7.30 ರವರೆಗೆ ಮತ್ತು ಶ್ರಾವಣ ಮಾಸದ ನಂತರ ಪ್ರತಿ ಭಾನುವಾರ ಸಂಜೆ 6 ರಿಂದ 7ರವರೆಗೆ ಶರಣರ ಮನೆಯಲ್ಲಿ ಈ ಜ್ಞಾನ ದಾಸೋಹ ಕಾರ್ಯಕ್ರಮ ನಡೆಯಲಿದೆ. ಆ.12 ರಂದು ಓಂ ನಗರದ ಭವಾನಿ ಮಂದಿರ ಬಳಿಯ ಸಂಗಮನಾಥ ಅಪಚಂದ, 19ರಂದು ಬ್ರಹ್ಮಪುರದ ದೇಶಮುಖ ವಾಡದ ಅಣ್ಣಾರಾವ ಪಸಾರ ಅವರ ಮನೆಯಲ್ಲಿ, 26 ರಂದು ಜಿಆರ್ ನಗರದ ಶ್ರೀಕಾಂತ ತೇಲ್ಕೂರ್, ಸೆ.2 ರಂತು ಸುಭಾಷ ಚೌಕನ್ ಕಲ್ಲಪ್ಪ ಸುಣ್ಣೂರ್ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.