ಗುಲ್ಬರ್ಗಾ

ಪೈಕಾ ಕ್ರೀಡಾಕೂಟ; ಯಳಸಂಗಿ ವಿದ್ಯಾರ್ಥಿಗಳ ಸಾಧನೆ

Published On :

ಆಳಂದ: ಪೈಕಾ ಕ್ರೀಡಾಕೂಟದಲ್ಲಿ ವಿವಿಧ ಆಟಗಳಲ್ಲಿ ಭಾಗವಹಿಸಿ ಅತಿ ಹೆಚ್ಚು ಪದಕ ಪಡೆದ ಯಳಸಂಗಿ ಗ್ರಾಮದ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕೆ ಆಯ್ಕೆಗೊಂಡಿದ್ದಾರೆ.
ಗುಂಡು ಎಸೆತದಲ್ಲಿ ಹಣಮಂತ ಮದರಿ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ಗುರಣ್ಣ ಅವುಟೆ ಪ್ರಥಮ ಸ್ಥಾನ, ಸಿದ್ದರಾಮ ಉಪ್ಪಿನ ತೃತೀಯ, ಎತ್ತರ ಜಿಗಿತದಲ್ಲಿ ಶರಣಬಸಪ್ಪ ತೃತೀಯ, ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಸಾಧನೆಗೆ ಶಾಲೆ ಮುಖ್ಯಗುರು ಶಿವಾನಂದ ಮಗಿ, ಸುಧಾಕರ್, ದೈಹಿಕ ಶಿಕ್ಷಕ ಸಿದ್ದರಾಮ ಪಾಳದ್, ಭಾರತಿ ಧೋತ್ರೆ,  ದಾಮೋದರ್, ಪ್ರಶಾಂತ, ಮಹಮ್ಮಲಿ, ಜಿಗನಾಥ ಬಿರಾದಾರ ಹರ್ಷ ವ್ಯಕ್ತಪಡಿಸಿ ಮಕ್ಕಳು ಇನ್ನೂ ಕ್ರೀಡೆಯಲ್ಲಿ ಹೆಚ್ಚಿನ ಪದಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಮಿಂಚಲಿ ಎಂದು ಶುಭ ಹಾರೈಸಿದ್ದಾರೆ.

ವಚನ ಸಾಹಿತ್ಯ ಎಂದಿಗೂ ಪ್ರಸ್ತುತ
ಗುಲ್ಬರ್ಗ: ಅಂದಿನ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದು ವಚನೋತ್ಸವ ಪ್ರತಿಷ್ಠಾನದ ಅಧ್ಯಕ್ಷ ಡಾ. ಬಸವರಾಜ ಮೋದಿ ಅಭಿಪ್ರಾಯಪಟ್ಟರು. ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ನಗರದ ಜಿಲ್ಲಾ ವೀರಶೈವ ಸಮಾಜ ಸಂಚಾಲಿತ ಬಸವೇಶ್ವರ ಪ್ರಸಾದ ನಿಲಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಲಿಂಗ, ವರ್ಣ, ವರ್ಗ ಮತ್ತು ಜಾತಿ ಸಮಾನತೆಯ ಮೂಲಕ ಶರಣರು ಮನುಷ್ಯರಲ್ಲಿನ ಮನೋಸ್ಥೈಯ ತುಂಬುವ ಕಾರ್ಯ ಮಾಡಿದರು. ವಿದ್ಯಾರ್ಥಿಗಳು ಶರಣ ಸಾಹಿತ್ಯ ಅಧ್ಯಯನ ಮಾಡುತ್ತ ಸಂವಿಧಾನದ ಸಮಾನ ಅಂಶಗಳನ್ನು ವಚನಗಳಲ್ಲಿ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಸಾದ ನಿಲಯದ ಸಂಚಾಲಕ ಬಸವರಾಜ ನಾಗೂರ ಅದ್ಯಕ್ಷತೆ ವಹಿಸಿ ಮಾತನಾಡಿದರು. ಚನ್ನಿವೀರಪ್ಪ ಗುಡ್‌ಡಾ, ಪ್ರೊ. ಹಂಚನಾಳ, ಪ್ರೊ.ಕೆ. ವಿಶ್ವನಾಥ ಇತರರು ಉಪಸ್ಥಿತರಿದ್ದರು. ಸಿ. ಎಸ್. ಮಾಲಿಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು. ಕಲ್ಯಾಣರಾವ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ವಿನೋದಕುಮಾರ್ ಜನೆವರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.