ಗುಲ್ಬರ್ಗಾ

ವಿಶ್ವಕರ್ಮ ಸಮಾಜಕ್ಕೆ ಗುಂಡು ಬಡಿಗೇರ ಆಯ್ಕೆ

Published On :

ಜೇವರ್ಗಿ: ತಾಲೂಕು ಮಟ್ಟದ ವಿಶ್ವಕರ್ಮ ಸಮಾಜದ ಸಭೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಆಗಮಿಸಿ ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು, ಗುಂಡು ಬಡಿಗೇರ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಸಮಿತಿಯ ಕಾಳಮ್ಮ ವಿಶ್ವಕರ್ಮ ಸಾಥಖೇಡ (ಗೌರವಾಧ್ಯಕ್ಷ), ಶಾಂತು ಅರಳಗುಂಡಗಿ, ಜಗನ್ನಾಥ ಮಂದರವಾಡ, ಭೀಮಾಶಂಕರ ಮದರಿ, ಅಶೋಕ ಯಡ್ರಾಮಿ (ಉಪಾಧ್ಯಕ್ಷ), ಮನೋಹರ ಮದರಿ (ಪ್ರ. ಕಾರ್ಯದರ್ಶಿ), ಕಾಶಿನಾಥ ಪತ್ತಾರ ನೆಲೋಗಿ (ಉಪ ಕಾರ್ಯದರ್ಶಿ), ರವಿ ಆಂದೋಲಾ (ಖಜಾಂಚಿ), ಶಿವಣ್ಣ ಯಡ್ರಾಮಿ, ರಾಜಶೇಖರ ಜೇವರ್ಗಿ, ಮಲ್ಕಣ್ಣ ಹನ್ನೂರ್, ದಯಾನಂದ ಹರವಾಳ, ಈರಣ್ಣ ಕೌವಲಗಾ (ಕೆ), ಕರುಣಸಾಗರ ಆಂದೋಲಾ, ಶಿವಕುಮಾರ ಬಣಮಿ, ಮೌನೇಶ ಕುಕುನೂರ, ಶಿವಶರಣ ನರಿಭೂಳ, ಮನೋಹರ ಹರವಾಳ, ಚಿದಾನಂದ ಇಜೇರಿ, ಭೀಮಾಶಂಕರ ಕೂಳಕೂರ ಸೇರಿದಂತೆ ಅನೇಕರು ತಾಲೂಕು ಸಮಿತಿಯಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ ತಿಂಥಣಿ ಪ್ರಾಧಿಕಾರಕ್ಕೆ ಜೇವರ್ಗಿ ತಾಲೂಕಿನ ಸಮಾಜದ ಬಾಂಧವರಿಗೆ ಸದಸ್ಯರಾಗಿ ಆಯ್ಕೆ ಮಾಡಬೇಕು. ನೂತನ ಶಾಸಕ ಡಾ. ಅಜಯಸಿಂಗ್ ಅವರಿಗೆ ಸಮಾಜದಿಂದ ಸನ್ಮಾನ ಮಾಡುವುದು, ಹಿರಿಯ ರಂಗಕರ್ಮಿ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅವರು ಬರೆದ ಮೌನೇಶ್ವರ ನಾಟಕ ಪುಸ್ತಕ ಬಿಡುಗಡೆ, ವಿಶ್ವಕರ್ಮ ಸಮಾಜದವರಿಗೆ ರಾಜ್ಯದ ಹಿಂದುಳಿದ ಅಭಿವೃದ್ಧಿ ಇಲಾಖೆ ಹಾಗೂ ದಿ. ದೇವರಾಜ ಅರಸು ಅವರ ಅಭಿವೃದ್ಧಿ ನಿಗಮದಿಂದ ಸಮಾಜದ ಜನತೆಗೆ ಸಾಲ, ಸೌಲಭ್ಯ ನಿಡುವಂತೆ ಒತ್ತಾಯಿಸುವುದು, 2013ರ ಕೂನೆಯಲ್ಲಿ ವಿಶ್ವಕರ್ಮ ಸಮಾಜದ ಮತ ಬಾಂಧವರ ಜನಗಣತಿ ಮಾಡುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಸಲಾಯಿತು ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.