ಲೆಹೆರ್, ಲೆಹರ್, ಲೆಹರಾಯೆ ತಿರಂಗಾ...
ಗುಲ್ಬರ್ಗ: ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ನಗರದ ವಿವಿಧ ಶಾಲೆಗಳ ನೂರಾರು ಮಕ್ಕಳು ತಂಡೋಪತಂಡವಾಗಿ ಭಾಗವಹಿಸಿ ತಿರಂಗಾ ಝಂಡಾ ಬಳಸಿ ತರಹೇವಾರಿ ಹಾಡು-ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ನಗರ ಸ್ವಾತಂತ್ರ್ಯೋತ್ಸವ ರಂಗೇರುವಂತೆ ಮಾಡಿದರು.
12ಕ್ಕೂ ಹೆಚ್ಚು ಶಾಲೆಗಳ ಸಾವಿರಕ್ಕೂ ಅಧಿಕ ಮಕ್ಕಳು ಮೈದಾನದಲ್ಲಿ ಕುಣಿದು ಕುಪ್ಪಳಿಸುವ ಮೂಲಕ, ಸ್ವಾತಂತ್ರ್ಯ ಯೋಧರ ವೇಷಭೂಷಣ ತೊಟ್ಟು ದೇಶಭಕ್ತಿ ಸಂದೇಶ ಸಾರುತ್ತ ಹಾಗೂ ಹಲವು ಭಾಷೆಗಳಲ್ಲಿರುವ ದೇಶಭಕ್ತಿ ಗೀತೆಗಳಿಗೆ ತಕ್ಕಂತೆ ಕುಣಿಯುತ್ತ ಸುಂದರ ಸಾಂಸ್ಕೃತಿಕ ಲೋಕವನ್ನೇ ಪರೇಡ್ ಮೈದಾನದಲ್ಲಿ ಅನಾವರಣ ಮಾಡಿದರು.
ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಇದೇ ಮೊದಲು. ಜಿಲ್ಲಾಡಳಿತ ಚಂದ್ರಶೇಖರ ಪಾಟೀಲ್ ಮೈದಾನವನ್ನೇ ಈ ಕಾರ್ಯಕ್ಕೆ ಬಳಸುವುದು ವಾಡಿಕೆ. ಬಂದೂಕು- ಬೂಟಿನ ಸದ್ದಿನಲ್ಲೇ ಮುಳುಗಿ ಏಳುತ್ತಿದ್ದ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ದಿನ ಮಕ್ಕಳು ಗೆಜ್ಜೆ ಕಟ್ಟಿ ಕುಣಿದಾಡುತ್ತ ದೇಶಭಕ್ತಿ ಸಾರುವ ಸಂದೇಶ ಗೀತೆಗಳನ್ನು ಹಾಡುತ್ತ ಕುಣಿದದ್ದು ಸೇರಿದ್ದವರ ಮನಸೂರೆಗೊಳ್ಳುವಂತೆ ಮಾಡಿತ್ತು.
ಲೆಹೆರ್ ಲೆಹರ್ ಲೆಹರಾಯೆ ತಿರಂಗಾ... ಎಂದು ಶರಣಬಸವೇಶ್ವರ ಶಾಲೆಯ 200 ಮಕ್ಕಳು ಹಾಡುತ್ತ ಕುಣಿದರೆ, ಕೆಂಬ್ರಿಡ್ಜ್ ಶಾಲೆಯ ಮಕ್ಕಳು, ಸೇಂಟ್ ಜಾನ್ ಶಾಲೆ, ಮೊರಾರ್ಜಿ ವಸತಿ ಶಾಲೆ ಹೀಗೆ ಅನೇಕ ಶಾಲೆಗಳ ಮಕ್ಕಳು ಸಂಗೊಳ್ಳಿ ರಾಯಣ್ಣನ ಸ್ಮರಿಸುತ್ತ, ಭಾರತ ಮಾತೆಗೆ ನಮನ ಎಂದು ಹೇಳುತ್ತ ಗಮನ ಸೆಳೆದರು.
ಡಿಡಿಪಿಐ ಜಯರಾಂ ಸೇರಿದಂತೆ ಹಲವರು ಶಾಲೆಗಳೊಂದಿಗೆ ಸಮನ್ವಯ ಸಾಧಿಸಿ ಮಕ್ಕಳನ್ನೆಲ್ಲ ತಂಡೋಪತಂಡವಾಗಿ ಮೈದಾನಕ್ಕೆ ಕರೆಯಿಸುತ್ತ ಹಾಡು- ನೃತ್ಯಗಳು ಯಶಸ್ವಿಯಾಗಿ ಜರುಗುವಂತೆ ನೋಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

