ನಾಳೆ ನಂಜುಂಡಿ ನಗರಕ್ಕೆ
ಯಾದಗಿರಿ: 5ನೇ ವಿಶ್ವಕರ್ಮ ಜಯಂತ್ಯುತ್ಸವದ ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಸಭೆ ಅಂಗವಾಗಿ ಆ.24ರಂದು ಯಾದಗಿರಿ ನಗರಕ್ಕೆ ಕರ್ನಾಟಕ ವಿಶ್ವಕರ್ಮ ಮಹಾಸಭೆ ರಾಜ್ಯ ಅಧ್ಯಕ್ಷ ಕೆ.ಪಿ. ನಂಜುಂಡಿ ನಗರಕ್ಕೆ ಆಗಮಿಸಲಿದ್ದಾರೆಂದು ಉತ್ತರ ಕರ್ನಾಟಕ ಸಂಚಾಲಕ ವೀರೇಂದ್ರ ಇನಾಂದಾರ ತಿಳಿಸಿದರು. ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾನ 1ಕ್ಕೆ ಕೆ.ಪಿ. ನಂಜುಂಡಿ ಅವರನ್ನು ಮೈಲಾಪುರ ಅಗಸಿಯಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದರು.
ದಿವ್ಯ ಸಾನ್ನಿಧ್ಯವನ್ನು ಆನೇಗುಂದಿ ಸಂಸ್ಥಾನ ಸರಸ್ವತಿ ಪೀಠಾಧಿಶರಾದ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ ವಿಶ್ವಕರ್ಮ ಏಕದಂಡಗಿ ಮಠ ಹಾಗೂ ಕಾಳಹಸ್ತೇಂದ್ರ ಸ್ವಾಮೀಜಿ ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ಅವರು ವಹಿಸುವರು. ಕಾರ್ಯಕ್ರಮವನ್ನು ಶಾಸಕ ಡಾ. ಎ.ಬಿ ಮಾಲಕರಡ್ಡಿ ಉದ್ಘಾಟಿಸುವರು. ಅಥಿತಿಗಳಾಗಿ ಸಮಾಜದ ಗುಲ್ಬರ್ಗ ಜಿಲ್ಲಾಧ್ಯಕ್ಷ ಐ.ಸಿ. ಪಂಚಾಳ, ಬ್ರಹ್ಮ ಗಣೇಶ ಇತರರು ಆಗಮಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
--
ಬಸವಣ್ಣ ಜಗತ್ತಿನ ಮಹಾನ್ ಪ್ರತಿಭೆ: ಶಾಂತವೀರ ಶ್ರೀ
ಯಾದಗಿರಿ: ಬಸವಣ್ಣ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಜಗತ್ತಿನ ಅತಿದೊಡ್ಡ ಶಕ್ತಿ ಹಾಗೂ ಮಹಾನ್ ಪ್ರತಿಭೆ. ತಮ್ಮಿಂದ ತಾವಾದವರು ಬಸವಣ್ಣನವರು. ವ್ಯಕ್ತಿತ್ವ ವಿಕಸನಕ್ಕೆ ಮೊಟ್ಟಮೊದಲ ಬಾರಿಗೆ ಸ್ವತಂತ್ರ ವಿಚಾರಧಾರೆಗಳನ್ನು ನೀಡಿದವರು ಇವರಾಗಿದ್ದಾರೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ನುಡಿದರು.
ತಾಲೂಕಿನ ಗಾಜರಕೋಟದ ಶಿವಶರಣ ಚನ್ನಪ್ಪಯ್ಯ ಮಹಾಮನೆಯಲ್ಲಿ ಏರ್ಪಡಿಸಿದ್ದ ಅರಿವು ಆಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುಲ್ಬರ್ಗದ ಆಕಾಶವಾಣಿ ಕಲಾವಿದ ಅಮೃತೇಶ ಕಲಶೆಟ್ಟಿ, ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಜನಪದ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ವಿಚಾರವಾಗಿ ಉಪನ್ಯಾಸವನ್ನು ಮಂಡಿಸಿದರು. ಮಿರೆಮಿಂಡದೇವರ ಮತ್ತು ಬಸವಣ್ಣನವರ ಭಕ್ತಿ ಪರಾಕಾಷ್ಠೆಯನ್ನು ಸವಿಸ್ತಾರವಾಗಿ ಮನಮುಟ್ಟುವಂತೆ ವಿವರಿಸಿದರು.
ಶರಣಸಂಸ್ಥಾನದ ಬಸವರಾಜಪ್ಪ ಬಾಗೋಡಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಪ್ಪ ಅರುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕರಾದ ಗವಿಯಪ್ಪ ಕಲೇಗುಂಡಮಠ ನಿರೂಪಿಸಿದರು. ಹನುಮಂತು ವಂದಿಸಿದರು. ಶಂಭುಲಿಂಗಪ್ಪ ಅರುಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

