ಗುಲ್ಬರ್ಗಾ

ಇಂದಿನ ಕಾರ್ಯಕ್ರಮಗಳು

Published On :

ನೇರ ಫೋನ್-ಇನ್
ಗುಲ್ಬರ್ಗ: ಆ.28 ರಂದು ಬೆಳಿಗ್ಗೆ 10.30 ರಿಂದ 11.30 ರವರೆಗೆ ಆಕಾಶವಾಣಿಯಲ್ಲಿ ನೇರ ಫೋನ್-ಇನ್-ಕಾರ್ಯಕ್ರಮ ಪ್ರಸಾರವಾಗಲಿದೆ. ವಿಷಯ ವಿದ್ಯಾರ್ಥಿನಿಯರಿಗಾಗಿ ಸ್ಯಾನಿಟರಿ ನ್ಯಾಪಕಿನ್‌ಗಳು. ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ನ್ಯಾಪಕಿನ್‌ಗಳನ್ನು ನಮ್ಮ ವಿದ್ಯಾರ್ಥಿನಿಯರು ಉಪಯೋಗಿಸುತ್ತಿಲ್ಲ. ಬದಲಾಗಿ, ಪ್ರತಿ ತಿಂಗಳು 3- 4 ದಿನ ಶಾಲೆ ಬಿಟ್ಟು ಮನೆಯಲ್ಲಿ ಕೂಡುತ್ತಾರೆ.  ವಿದ್ಯಾರ್ಥಿನಿಯರಲ್ಲಿ ಸ್ವಚ್ಛ ಮತ್ತು ಸ್ಯಾನಿಟರಿ ನ್ಯಾಪಕಿನ್‌ಗಳ ಉಪಯೋಗ ಕುರಿತು ಕೇಳುಗರ ಪ್ರಶ್ನೆಗಳಿಗೆ ಗುಲ್ಬರ್ಗ ಜಿಪಂ ುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ಉತ್ತರಿಸಲಿದ್ದಾರೆ. ಸಂಪರ್ಕಿಸಲು ದೂರವಾಣಿ ಸಂಖ್ಯೆಗಳು 241853, 241854 ಮತ್ತು 241855.  ಗುಲ್ಬರ್ಗ ಹೊರಗಿನಿಂದ ಕರೆಗೆ ಎಸ್‌ಟಿಡಿ ಸಂಖ್ಯೆ 08472.
ಕೃಷಿ ದರ್ಶನ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ಆ.28ರಂದು ಸಂಜೆ 5.30ರಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞರು ಡಾ. ಸುನೀಲಕುಮಾರ್ ಅವರು ಸೋಯಾ ಅವರೆಗೆ ಬರುವ ರೋಗಗಳು ಹಾಗೂ ನಿಯಂತ್ರಣಾ ಕ್ರಮಗಳ ಕುರಿತು ಮಾಹಿತಿ ನೀಡುವರು. ಡಾ. ರಾಜು ತೆಗ್ಗೆಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಕೆ.ಆರ್. ಶ್ರೀನಿವಾಸ ಅವರು ಕಾರ್ಯಕ್ರಮ ಪ್ರಸ್ತುತ ಪಡಿಸುವರು. 220491, 220492 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ.
ಅರಿವು ಕಾರ್ಯ
ಗುಲ್ಬರ್ಗ: ಅಲ್ಪ ಸಂಖ್ಯಾತರಾದ ಕ್ರೈಸ್ತ ಸಮುದಾಯದ ಹಕ್ಕು ಬಾಧ್ಯತೆಗಳ ಅರಿವು ಕಾರ್ಯಕ್ರಮ ಆ.28 ರಂದು ಬೆಳಿಗ್ಗೆ 9.30ಕ್ಕೆ ನಗರದ ಸೆಂಟ್ ಮೇರಿ ಚರ್ಚಿನ ಸಭಾಂಗಣದಲ್ಲಿ ನಡೆಯಲಿದೆ. ಸಚಿವ ಖಮರುಲ್ ಇಸ್ಲಾಂ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಿಷಪ್ ರಾಬರ್ಟ್ ಮೆರಿಂಡಾ, ಮುಖ್ಯ ಬೋಧಕ ಪಾಸ್ಟರ್ ಜಾನಸನ್ ಪಾಲ್ಗೊಳ್ಳಲಿದ್ದಾರೆ.
ಅಯ್ಯಾಚಾರ
ಗುಲ್ಬರ್ಗ: ಜಿಲ್ಲೆಯ ಶ್ರೀಕ್ಷೇತ್ರ ನಾಲವಾರ ಸದ್ಗುರು ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಆ.29 ರಂದು ಭಕ್ತಾಧಿಗಳಿಗೆ ದೀಕ್ಷೆ ಹಾಗೂ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾದೇವ ಗಂವ್ಹಾರ ತಿಳಿಸಿದ್ದಾರೆ.ಶ್ರಾವಣ ಮಾಸದ ನಾಲ್ಕನೇ ಗುರುವಾರದಂದು ಬೆಳಿಗ್ಗೆ ಕೋರಿಸಿದ್ದೇಶ್ವರ ಶಿವಯೋಗಿಗಳ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾಮಂಗಳಾರತಿ, ಪುಷ್ಪಾಲಂಕಾರ ಭಕ್ತಾಧಿಗಳಿಂದ ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.