ದನದ ಕೊಟ್ಟಿಗೆಯಲ್ಲಿದ್ದ ಕರ್ಜಗಿ ಮೊರಾರ್ಜಿ ಶಾಲೆ ಸ್ಥಳಾಂತರ
ಕ.ಪ್ರ. ವಾರ್ತ್ಣೆ ಅಫಜಲ್ಪುರ್ಣ ಆ.27 ಕರ್ಜಗಿ ತೋಟದಲ್ಲಿರುವ ದನದ ಕೊಟ್ಟಿಗೆ, ದಾಸ್ತಾನು ಕೋಣೆಗಳಲ್ಲಿ ಕಳೆದ 6 ವರ್ಷಗಳಿಂದ ಚಾಲ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆ ಶೀಘ್ರ ಈ ಕೆಟ್ಟ ಪರಿಸರದಿಂದ ಸ್ಥಳಾಂತರಗೊಳ್ಳಲಿದೆ.
ಶಾಲೆ ಮಂಜೂರಾದ ತಕ್ಷಣ ಅದನ್ನು ಕರ್ಜಗಿಯ ತೋಟದ ಮನೆಯಲ್ಲಿ ಆರಂಭಿಸಲಾಗಿತ್ತು. ಸುಸಜ್ಜಿತ ಕಟ್ಟಡಗಳ ಕೊರತೆಯೇ ಇದಕ್ಕೆ ಕಾರಣವಾಗಿತ್ತು. ಈಗಲೂ ಈ ಭಾಗದಲ್ಲಿ ವಸತಿ ಶಾಲೆಯ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ಕಟ್ಟಡಗಳು ಅಲಭ್ಯ. ಅದಕ್ಕೇ ಶಾಲೆಯನ್ನು ತೋಟದಲ್ಲಿರುವ ಮನೆಯಲ್ಲೇ ಆರಂಭಿಸುವ ಅನಿವಾರ್ಯತೆ ಇತ್ತು. ಕಳೆದ 6 ವರ್ಷಗಳಿಂದ ಅದು ಹಾಗೇ ಅಲ್ಲೇ ಮುಂದುವರಿದಿತ್ತು.
300 ರಷ್ಟು ಮಕ್ಕಳು: ಮೂಲ ಸೌಕರ್ಯಗಳೇ ಇಲ್ಲದಂತಹ ಸ್ಥಳದಲ್ಲಿ ಶಾಲೆ ಇದ್ದರೂ ವಾರ್ಷಿಕ 300 ರಷ್ಟು ಮಕ್ಕಳು ಇಲ್ಲಿ ವಸತಿ ಇದ್ದು ಪಾಠ- ಪ್ರವಚನದಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ಸುಸಜ್ಜಿತ ಕಟ್ಟಡದಲ್ಲಿ ವಸತಿ- ಪಾಠಕ್ಕೆ ಅನುಕೂಲ ಕಲ್ಪಿಸಲು ಇದೀಗ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಚಿಂತನೆ ಸಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಧಿಕಾರಿ (ಪ್ರಭಾರಿ) ವಿಜಯಲಕ್ಷ್ಮೀ ಕೋಬಾಳಕರ್ ಹೇಳಿದ್ದಾರೆ.
'ಕನ್ನಡಪ್ರಭ'ಜೊತೆ ಮಾತನಾಡಿದ ಅವರು ಆಗಸ್ಟ್ 19ರಂದು ಕನ್ನಡಪ್ರಭ ತನ್ನ ಸಂಚಿಕೆಯಲ್ಲಿ 'ನದ ಕೊಟ್ಟಿಯಲ್ಲೇ ಮೊರಾರ್ಜಿ ವಸತಿ ಶಾಲೆ' ಎಂಬ ಶೀರ್ಷಿಕೆಯಡಿಯಲ್ಲಿ ಕರ್ಜಗಿ ಮೊರಾರ್ಜಿ ಶಾಲೆಯ ದುರವಸ್ಥೆಯ ಬಗ್ಗೆ ಹಾಗೂ ಶಾಲೆಯ ಕಟ್ಟಡ ಅವ್ಯವಸ್ಥೆ, ಸ್ಥಳಾಂತರದ ಸಂಗತಿಗಳ ಬಗ್ಗೆ ಮಾಹಿತಿ ನೀಡಿದರು. ಅಫಜಲ್ಪುರ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಕರ್ಜಗಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯೂ ಕೂಡಲೇ ಕರ್ಜಗಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ನೂತನ ಕಟ್ಟಡದಲ್ಲಿ ಸ್ಥಳಾಂತರಿಸಲುವ ಚಿಂತನೆ ಇದೆ. ಆದಾಗ್ಯೂ ಸುಸಜ್ಜಿತ ಕಟ್ಟಡ ದೊರಕಿದಲ್ಲಿ ಕರ್ಜಗಿಯಲ್ಲಿ ಶಾಲೆಯ ಕಾಯಂ ಕಟ್ಟಡ ತಲೆ ಎತ್ತುವವರೆಗೂ ಅದನ್ನು ತಾಲೂಕು ಕೇಂದ್ರಸ್ಥಳ ಅಫಜಲ್ಪುರಕ್ಕೆ ಸ್ಥಳಾಂತರಿಸುವ ಚಿಂತನೆಯೂ ಇದೆ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.
ಮೊರಾರ್ಜಿ ಶಾಲೆ ತಕ್ಷಣ ವಸತಿ ನಿಲಯ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶದಿಂದ ವಾರದಲ್ಲಿ ಕರ್ಜಗಿಗೆ ಭೇಟಿ ನೀಡಲಾಗುತ್ತದೆ. ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡದ ಕೆಲಸಗಳು ಪೂರ್ಣವಾಗಿದ್ದಲ್ಲಿ ಅಲ್ಲೇ ಸ್ಥಳಾಂತರಿಸಲಾಗುತ್ತದೆ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.
ಶೀಘ್ರ ಸ್ಥಳಾಂತರಕ್ಕೆ ವಿದ್ಯಾರ್ಥಿಗಳ ಒತ್ತಾಯ: ಒಟ್ಟು ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಕೋಣೆಗಳಿಗೆ ಕಿಟಕಿ, ಬಾಗಿಲುಗಳಿಲ್ಲ, 6ನೇ ತರಗತಿ ವಿದ್ಯಾರ್ಥಿಗಳಿಗೆ ಕೋಣೆಯಿಲ್ಲ, ಗಿಡದ ಕೆಳಗಡೆ ಬಯಲಿನಲ್ಲಿ ಪಾಠ ಮಾಡುವಂತಹ ಪರಿಸ್ಥಿತಿ ಇದೆ. ವಿದ್ಯಾರ್ಥಿನಿಯರಿಗೆ ಈ ವಸತಿ ಶಾಲೆಯಲ್ಲಿ ತಂಗಲು ರಾತ್ರಿ ವೇಳೆಯಲ್ಲಿ ಸೂಕ್ತವಾದ ಭದ್ರತೆ ಇಲ್ಲ. ವಿದ್ಯಾರ್ಥಿಗಳು ರಾತ್ರಿ ವೇಳೆ ಮಲಗುವ ಕೋಣೆ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸೋರುತ್ತದೆ.
ರಾತ್ರಿ ವೇಳೆಯಲ್ಲಿ ಮಲಗಿರುವ ವಿದ್ಯಾರ್ರ್ಥಿಗೆ ಹಾವು ಕಚ್ಚಿದ ಪರಿಣಾಮ ಆತ ಸಾವಿಗೀಡಾಗಿದ್ದ ದುರಂತ ಘಟನೆಯೂ ಇಲ್ಲಿ ಸಂಭವಿಸಿತ್ತು. ಒಟ್ಟಾರೆ ಶಾಲೆ ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಈ ಶಾಲೆಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

