ಧರ್ಮ, ಸಂಸ್ಕೃತಿಯಿಂದ ಜೀವನಾನಂದ
ಕ.ಪ್ರ. ವಾರ್ತೆ ಗುಲ್ಬರ್ಗ ಡಿ.22
ಆನಂದದ ಜೀವನಕ್ಕೆ ಧರ್ಮ ಮತ್ತು ಸಂಸ್ಕೃತಿ ಅಗತ್ಯ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಎನ್.ವಿ. ಮೈದಾನದಲ್ಲಿ ಏರ್ಪಡಿಸಿದ್ದ ವೇದಾಂತ ಭಾರತೀ ಆನಂದಸಿಂಧು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಎಲ್ಲರೂ ಸುಖ- ಶಾಂತಿಯಿಂದ ಬದುಕಬೇಕೆಂದು ಧರ್ಮಗಳು ಹೇಳುತ್ತವೆ. ಇದರಿಂದ ಧರ್ಮವನ್ನು ಬೆಂಬಲಿಸಬೇಕು ಎಂದರು.
ಸುಖ ಮತ್ತು ಆನಂದ ಜತೆಯಾಗಿಯೇ ಇರುತ್ತವೆ. ಒಂದು ಬಿಟ್ಟು ಮತ್ತೊಂದಿಲ್ಲ, ಸುಖ ಎಂಬುವುದು ದುಡ್ಡಾದರೆ, ಆನಂದ ಎಂಬುವುದು ಜ್ಞಾನ. ದುಡ್ಡಿಲ್ಲದಿದ್ದರೆ ಆನಂದ ಸಿಗುವುದು ಕಷ್ಟ. ಜ್ಞಾನ ಇಲ್ಲದಿದ್ದರೆ ದುಡ್ಡು ಸಿಗುವುದು ಕಷ್ಟ. ಇವೆರಡು ಸರಿಯಾಗಿದ್ದರೆ ಆನಂದ ದೊರಕುತ್ತದೆ. ಹೆಚ್ಚಿನ ಹಣಕ್ಕಿಂತಲೂ ಜ್ಞಾನ ಹೊಂದಿರಬೇಕು ಎಂದರು.
ಕೃಷ್ಣರಾಜ ನಗರ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತಿ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಾಂತ ಭಾರತೀ ಆನಂದಸಿಂಧು ಅಭಿಯಾನದ ಗೌರವ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಅಧ್ಯಕ್ಷ ಭೀಮಸೇನರಾವ ಮಾಡ್ಯಾಳಕರ್ ಇತರ ಗಣ್ಯರು ಪಾಲ್ಗೊಂಡಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಸುಭಾಷ ಕಮಲಾಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಮದೇವ ರಾಠೋಡ ಸ್ವಾಗತಿಸಿದರು. ಸೂರಜ ತಿವಾರಿ ಕಾರ್ಯಕ್ರಮ ನಿರೂಪಿಸಿದರು. ವಿನೋದ ಕುಲಕರ್ಣಿ ವಂದಿಸಿದರು. ಸಮಾರಂಭದ ನಂತರ ಅನೇಕ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾಮೂಹಿಕ ಸ್ತೋತ್ರ ಪಾರಾಯಣ ಮತ್ತು ಸಮರ್ಪಣೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

