'ಸಾವಯುವ ಕೃಷಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ'
ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ರೈತರು ತಮ್ಮ ಜಮೀನಿಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಕಡಿಮೆ ಮಾಡಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಾಲರಾಜ ಕರೆ ನೀಡಿದರು.
ನಗರದ ಆಫೀಸರ್ ಕ್ಸಬ್ನಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ರೈತರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಪ್ರಧಾನಿ ದಿ. ಚರಣಸಿಂಗ್ ಹುಟ್ಟುಹಬ್ಬದ ಡಿ.23 ದಿನವನ್ನು ರೈತರ ದಿನವಾಗಿ ಆಚರಿಸುತ್ತಿರುವುದು ರೈತರಿಗೆ ಸಂತಸ ತಂದಿದೆ ಎಂದು ಹೇಳಿದರು. ಪಶುಸಂಗೋಪನೆ ಇಲಾಖೆ ಉಪನಿದರೇಶಕ ಡಾ. ಮಂಜುನಾಥ ಮಾತನಾಡಿದರು. ವೇದಿಕೆ ಮೇಲೆ ಅಧಿಕಾರಿಗಳಾದ ರವಿಕುಮಾರ, ಸುರೇಶ, ಯಲ್ಲಪ್ಪ ಮಾಳಿಕೇರಿ, ಶೈಲೇಂದ್ರ ಸ್ವಾಮಿ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಮಲ್ಲರಡ್ಡಿ ಜಟ್ಟೂರ್ ಹತ್ತಿಕುಣಿ, ರೈತ ಮಹಿಳೆ ಮರಿಯಳಮ್ಮ ಹಾಗೂ ನೀಲಕಂಠ ಪಾಟೀಲ್ ಕ್ಯಾತನಾಳ ಅವರನ್ನು ಸನ್ಮಾನಿಸಿದರು.
ಕೃಷಿ ಅಧಿಕಾರಿ ರಾಜಕುಮಾರ ನಿರೂಪಿಸಿ ಸ್ವಾಗತಿಸಿದರು. ವಿಶ್ವನಾಥ ವಂದಿಸಿದರು. ಸಮಾರಂಭದಲ್ಲಿ ತಾಲೂಕಿನ ವಿವಿಧ ಗ್ರಾಮದ ರೈತರು ಹಾಗೂ ಮಹಿಳೆಯರು ಭಾಗವಹಿಸಿದರು.
'ವಿಜ್ಞಾನ ಯುಗದಲ್ಲಿ ಮುಂದೆ ಬನ್ನಿ'
ಕೆಂಭಾವಿ: ಇದು ಆಧುನಿಕ ಯುಗ. ಈ ಯುಗವು ವಿಜ್ಞಾನಮಯವಾಗಿದ್ದು, ಮಕ್ಕಳು ಇತ್ತ ಹೆಚ್ಚು ಗಮನಹರಿಸಿ ಮುಂದೆ ಬರಬೇಕೆಂದು ಬಿಆರ್ಸಿ ಚಂದ್ರಕಾಂತ ಕೊಣ್ಣೂರ ಹೇಳಿದರು.
ಸಮೀಪದ ಅಗ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜೀ ಪೌಂಡೇಷನ್ ಹಾಗೂ ಸಮುದಾಯದ ಸಹಯೋಗದಲ್ಲಿ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು. ಮುಖಂಡ ಶಂಕರಗೌಡ ಪೊಲೀಸಪಾಟೀಲ ಭಾಗವಹಿಸಿದ್ದರು. ಕೆಂಭಾವಿ ವಲಯದ ಸಿಆರ್ಪಿ ರಾಜಅಹ್ಮದ್ ಬಡಿಗೇರ ಉದ್ಘಾಟಿಸಿದರು. ಸೌರಶಕ್ತಿಯಿಂದ ನಮಗಾಗುವ ಹಲವು ಉಪಯೋಗಗಳು, ಹೀಗೆ ಸುಮಾರು 55 ಚಟುವಟಿಕೆಗಳನ್ನು ಈ ಮೇಳದಲ್ಲಿ ಮಕ್ಕಳು ಮಾಡಿ ತೋರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಪ್ರಧಾನಗುರು ಅಂಬಣ್ಣ ಅಂಬಿಗರ ವಹಿಸಿದ್ದರು. ಹಣಮಂತ್ರಾಯ ಗೌಡ ಬಿರಾದಾರ, ಶ್ರೀಶೈಲ್ ಸಗರ, ಸಿದ್ದನಗೌಡ ಹೊಸ್ಮನಿ, ಎನ್ಜಿಒ ಸದಸ್ಯರು, ದೇವರಾಗ ಕೋಡಬಾಳ, ಸುರೇಶ ಮಾಳಗೆ, ಪ್ರಭುಗೌಡ ಬಳವಾಟ, ಬಸವರಾಜ ಹಾವರಗಿ, ದಿಲೀಪಕುಮಾರ, ಈರಣ್ಣ ಹಾಗೂ ಕೆಂಭಾವಿ ವಲಯದ ಎಲ್ಲ ಮಾರ್ಗದರ್ಶಕರು, ನಾಗರಿಕರು ಭಾಗವಹಿಸಿದ್ದರು. ಬಸನಗೌಡ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

